ನೀರುಲುಟ್ಟಿಯಲ್ಲಿ ಕೋತಿ ಹಾವಳಿ: ನಾಯಿಯನ್ನು ಕೊಂದ ಕೋತಿ; ಗ್ರಾಮಸ್ಥರಲ್ಲಿ ಆತಂಕ!

H.Mallikarjun
H.Mallikarjun - Kalyanasiri
1 Min Read
ಜಾಹೀರಾತು


Monkey menace in Neerulutti: Monkey kills a dog; villagers gripped by anxiety!




ನೀರುಲುಟ್ಟಿಯಲ್ಲಿ ಕೋತಿ ಹಾವಳಿ: ನಾಯಿಯನ್ನು ಕೊಂದ ಕೋತಿ; ಗ್ರಾಮಸ್ಥರಲ್ಲಿ ಆತಂಕ!

ಜಾಹೀರಾತು
ಜಾಹೀರಾತು


ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಹಿಂದೇಟು; ಕೋತಿಯನ್ನು ಸೆರೆಹಿಡಿದು ಕಾಡಿಗೆ ಬಿಡಲು ಗ್ರಾಮಸ್ಥರ ಮನವಿ


ಕನಕಗಿರಿ: ತಾಲೂಕಿನ ನೀರುಲುಟ್ಟಿ ಗ್ರಾಮದಲ್ಲಿ ಕೋತಿಯೊಂದು ನಾಯಿಯ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದೊಳಗೆ ನುಗ್ಗಿದ ಕೋತಿಯೊಂದು ನಾಯಿಯ ಮೇಲೆ ಏಕಾಏಕಿ ದಾಳಿ ನಡೆಸಿ ಕೊಂದಿದೆ ಎನ್ನಲಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಕೋತಿಯ ಹಾವಳಿಯಿಂದಾಗಿ ಮಕ್ಕಳು ಹಾಗೂ ಮಹಿಳೆಯರು ಮನೆಯಿಂದ ಹೊರಬರಲು ಆತಂಕಪಡುವಂತಾಗಿದೆ.
ಘಟನೆ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಮಾಂತೇಶ್ ಅವರು ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ಕೋತಿಯ ಹಾವಳಿ ಮುಂದುವರಿಯುವ ಭೀತಿ ಎದುರಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕೋತಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಬೇಕು. ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರಾದ ಲಕ್ಷ್ಮಣ, ವೆಂಕಟೇಶ ಹಾಗೂ ಶರಣಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ವರದಿ: ಶರಣಯ್ಯ ಹಿರೇಮಠ ಕನಕಗಿರಿ ತಾಲೂಕು ವರದಿಗಾರ ಕಲ್ಯಾಣಸಿರಿ ಕನ್ನಡ ವೆಬ್ ನ್ಯೂಸ್

Total Views: 0
ಜಾಹೀರಾತು
Share This Article
Leave a Comment