Breaking News

ವಿದ್ಯಾರ್ಥಿಗಳಿಗೆ ಪ್ತಜಾಪ್ರಭುತ್ವದ ಅರಿವು ಮೂಡಿಸಿದ ಶಾಲಾ ಸಂಸತ್ತು

School Parliament made the students aware of Ptajaprabhutva

ಗಂಗಾವತಿ  : ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಭವಿಷ್ಯದ ಮತದಾರರಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಸಕ್ರಿಯವಾಗಿ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಶಾಲಾ ಸಂಸತ್ತಿನ ಚುನಾವಣೆ ಶ್ರೀ ಕೆಂಧೋಳೆ ರಾಮಣ್ಣ ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರದಂದು ನಡೆಯಿತು. 

ಜಾಹೀರಾತು

ಚುನಾವಣಾ ಪ್ರಕ್ರಿಯೆಗಳ ಪ್ರಾಯೋಗಿಕ ಕಲ್ಪನೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳಿಂದ ಚುನಾವಣಾ ಅಧಿಸೂಚನೆ, ಮತದಾರರ ವಿವರ, ನಾಮಪ್ರತ್ರಿಕೆ ಸಲ್ಲಿಕೆ, ಪರಿಶೀಲನೆ, ಹಿಂದೆಗೆತ, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಶಾಲೆಯಲ್ಲಿಯೇ ರಚಿಸಿದ ಆಯೋಗದಿಂದ ಚಿಹ್ನೆ ನೀಡಿಕೆ, ಮತ ಎಣಿಕೆ, ಫ‌ಲಿತಾಂಶ ಘೋಷಣೆ ನಡೆಸಲಾಯಿತು.

ವಿದ್ಯಾಥಿರ್ಗಳು  ಸಂಭ್ರಮದಿಂದ ಚುನಾವಣೆಯಲ್ಲಿ ಭಾಗವಹಿಸಿ ಮತದಾನದ ಹಕ್ಕು ಚಲಾಯಿಸಿದರು. ಪ್ರಜಾಪ್ರಭುತ್ವದಲ್ಲಿ ಆಡಳಿತ ಹೇಗೆ ನಡೆಸಲಾಗುತ್ತದೆ ಎಂಬುದರ ಮಾದರಿಯಲ್ಲಿ ಶಾಲೆಯಲ್ಲಿ ತಮ್ಮ ನಾಯಕರನ್ನು ಆರಿಸಿದರು. ದೇಶದಲ್ಲಿ ನಡೆಯುವ  ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡರು.

ಈ ಸಂದರ್ಭದಲ್ಲಿ ಕೃಷ್ಣಪ್ಪ  ಕೆಂಧೋಳೆ ಅಧ್ಯಕ್ಷರು,

ರಾಮಮೋಹನ್ ಕಾರ್ಯದರ್ಶಿ,  ವೆಂಕಟೇಶ್ ದೇಸಾಯಿ ಮುಖ್ಯೋಪಾಧ್ಯಾಯರು, ಮದ್ದಾನಪ್ಪ ಮುಖ್ಯ ಉಪಾಧ್ಯಾಯರು, ಶಿಕ್ಷಕ ವೃಂದ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *