Walk-in interview in Koppal on August 21
ಆಗಸ್ಟ್ 21 ರಂದು ಕೊಪ್ಪಳದಲ್ಲಿ ವಾಕ್ ಇನ್-ಇಂಟರ್‌ವ್ಯೂವ್


ಕೊಪ್ಪಳ ಆಗಸ್ಟ್ 17, (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್-ಇಂಟರ್‌ವ್ಯೂವನ್ನು ಆಗಸ್ಟ್ 21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಆಡಳಿತ ಭವನದ ಮೊದಲನೇ ಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಪಿ.ಯು.ಸಿ ಅಥವಾ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ವಾಕ್ ಇನ್ ಇಂಟರ್‌ವ್ಯೂವ್ ನಲ್ಲಿ ಭಾಗವಹಿಸಬಹುದು. 21 ರಿಂದ 33 ವರ್ಷದ ಅರ್ಹ ನಿರುದ್ಯೋಗಿ ಯುವಕ ಮತ್ತು ಯುವತಿಯರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 3 ಪ್ರತಿಗಳೊಂದಿಗೆ ಮತ್ತು ಆಧಾರ್ ಕಾರ್ಡಿನ ಪ್ರತಿ, ಬಯೋಡಾಟಾ (ರೆಜ್ಯುಮ್) ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸುವAತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಟಗಿಯ ಮಾನಸಿಕ ಅಸ್ವಸ್ಥ ವ್ಯಕ್ತಿ ನಾಪತ್ತೆ: ಪತ್ತೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ
ಕೊಪ್ಪಳ ಆಗಸ್ಟ್ 17, (ಕರ್ನಾಟಕ ವಾರ್ತೆ): ಕಾರಟಗಿ ಪಟ್ಟಣದ ಬಸವೇಶ್ವರ ನಗರದ ನಿವಾಸಿ ಈರಪ್ಪ ತಂದೆ ಶಿವಮೂರ್ತೆಪ್ಪ ನಂದಿಹಳ್ಳಿ ಎಂಬ 35 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯು ಕಾಣೆಯಾಗಿದ್ದು, ಈ ಸಂಬAಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರಪ್ಪ ತಂದೆ ಶಿವಮೂರ್ತೆಪ್ಪ ನಂದಿಹಳ್ಳಿ ಎಂಬ ವ್ಯಕ್ತಿಯು ಜೂನ್ 15 ರಂದು ಬೆಳಿಗ್ಗೆ 9:30 ರ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ-ಕೇಳದೆ ಎಲ್ಲೋ ತೆರಳಿದ್ದು, ಇದುವರೆಗೆ ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕಾಣೆಯಾದ ದಿನದಿಂದ ಬಂಧು-ಬಳಗದವರು, ಕಾರಟಗಿ ಸುತ್ತಮುತ್ತ, ಸಿಂಧನೂರು, ಗಂಗಾವತಿ, ರಾಯಚೂರು, ಅಂಬಾಮಠ, ಹುಲಿಗಿ, ಕನಕಗಿರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ವ್ಯಕ್ತಿಯ ಸುಳಿವು ಸಿಕ್ಕಿರುವುದಿಲ್ಲ.
ಕಾಣೆಯಾದ ವ್ಯಕ್ತಿಯ ಚಹರೆ:
ಕಾಣೆಯಾದ ವ್ಯಕ್ತಿಯು 5.2 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ತಲೆಯಲ್ಲಿ ಸಣ್ಣ ಕೂದಲು ಇದ್ದು, ಮಾನಸಿಕವಾಗಿ ಅಸ್ವಸ್ಥನಂತೆ ವರ್ತಿಸುತ್ತಾನೆ. ಈ ಚಹರೆಯುಳ್ಳ ವ್ಯಕ್ತಿಯು ಎಲ್ಲಾದರೂ ಕಂಡುಬAದಲ್ಲಿ ಅಥವಾ ಈತನ ಕುರಿತು ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕಾರಟಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





