Recall the governor who is trying to destabilize the government led by Chief Minister Siddaramaiah
ಕೊಪ್ಪಳ:ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರ್ನಾಟಕದಲ್ಲಿ ವಾಲ್ಮಿಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಮತ್ತು ಮುಡಾದಲ್ಲಿ ನಡೆದ ನಿವೇಶನ ಹಂಚಿಕೆಗಳ ಅವ್ಯವಹಾರ ಸಮಗ್ರವಾದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇದಕ್ಕೆ ನಮ್ಮ ಒಕ್ಕೂಟದ ಸಂಪೂರ್ಣ ಬೆಂಬಲವಿದೆ. ಆದರೆ ಮಾನ್ಯ ರಾಜ್ಯಪಾಲರಾದ ತಾವರ್‌ಚಂದ್ ಗೆಹಲೋಟ್ ಇವರು ಖಾಸ ದೂರುದಾರ ಟಿ.ಜೆ.ಅಬ್ರಾಹಂ ಇವರ ಅರ್ಜಿ ಆಧರಿಸಿ ಮಾನ್ಯ ಸಿದ್ದರಾಮಯ್ಯನವರಿಗೆ ನೊಟೀಸ್ ಜಾರಿ ಮಾಡಿದ್ದು, ಸರಿಯಾದ ಕ್ರಮವಲ್ಲ. ಟಿ.ಜೆ.ಅಬ್ರಾಹಂ ಕೊಟ್ಟ ದೂರಿಗೆ ಸಂಬAಧಿಸಿ, ಸ್ಥಳೀಯ ನ್ಯಾಯಾಲಯವಾಗಲೀ, ಇತರೆ ಯಾವುದೇ ತನಿಖೆ ಸಂಸ್ಥೆಯು ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಮತ್ತು ತನಿಖೆ ಕೂಡ ನಡೆಸಿಲ್ಲ. ಖಾಸಗಿ ದೂರಿನ ನೆಪದಲ್ಲಿ ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವುದು ಖಂಡನೀಯ. ಮಾನ್ಯ ಸಿದ್ದರಾಮಯ್ಯನವರು ರಾಜ್ಯದ ಬಹುಸಂಖ್ಯಾತ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವುದರೊಂದಿಗೆ ಸಂವಿಧಾನದ ಕನಿಷ್ಟ ಆಶಯಗಳನ್ನು ಎತ್ತಿ ಹಿಡಿದಿದ್ದಾರೆ. ಉದಾಹರಣಗೆ ಸಚಿವ ಸಂಪುಟ ಮತ್ತು ನಿಗಮದ ಅಧ್ಯಕ್ಷರ ಆಯ್ಕೆಯಲ್ಲಿ ಈ ಬೆಳವಣಿಗೆಯನ್ನು ನೋಡಬಹುದು. ಆರೋಗ್ಯ, ಶಿಕ್ಷಣ ಇತರ ಅಭಿವೃದ್ಧಿ ಕಾರ್ಯದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ದಲಿತರು ಸೇರಿದಂತೆ ಬಹುಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳದ ಸಂವಿಧಾನ ವಿರೋಧಿ ಬಿಜೆಪಿ ಶಕ್ತಿಗಳು ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ. ಈಗಾಗಲೇ ದೇಶದಲ್ಲಿ ಬಿಜೆಪಿ ನೆತೃತ್ವದ ಕೇಂದ್ರ ಸರಕಾರ ಸಿ.ಬಿ.ಐ. ಇ.ಡಿ ಇತರೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ಸರಕಾರಗಳನ್ನು ಅಸ್ಥಿರಗೊಳಿಸುವ ಕಾರ್ಯ ನಿರಂತರವಾಗಿ ಮಡುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗಲೂ ಜೈಲಿನಲ್ಲಿ ಇಡಲಾಗಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಬಿಸ್ವಾಸ್ ಇವರನ್ನು ಕೂಡ ಜೈಲಿಗೆ ಹಾಕಲಾಗಿತ್ತು. ಸದ್ಯ ಇವರು ಬೇಲ್ ಮೇಲೆ ಹೊರಗಡೆ ಬಂದು ಪುನಃ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಇದೇ ರೀತಿ ಕರ್ನಾಟಕದ ರಾಜ್ಯ ಸರಕಾರವನ್ನು ಅಸ್ಥೀರಗೊಳಿಸಿ, ಸಿದ್ದರಾಮಯ್ಯ ಸರಕಾರವನ್ನು ಉರುಳಿಸುವ ಕುತರ್ಕವನ್ನು ರಾಜ್ಯದ ಜನರು ಸಹಿಸಿಕೊಳ್ಳುವುದಿಲ್ಲ. ಮಹಾರಾಷ್ಟçದ ಎನ್.ಸಿ.ಪಿ ಮುಖಂಡ ಅಜಿತ ಪವಾರ್ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದನು. ಇಂತಹ ವ್ಯಕ್ತಿಯನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡು ಅಜಿತ ಪವಾರ್‌ಗೆ ಕ್ಲೀನ್ ಚೀಟ್ ಕೊಡಲಾಗಿತ್ತು. ಇದೇ ರೀತಿ ದೇಶದಾದ್ಯಂತ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ತಾವುಗಳು ಮೇಲಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕರ್ನಾಟಕದ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕೆಂದು ವಿನಂತಿಸಿದ್ದಾರೆ
.