Attack on Photographers: A Call for Action
ಕೊಪ್ಪಳ :ಇತ್ತೀಚೆಗೆ ಬೆಂಗಳೂರಿನ ಶಿವಾಜಿನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊAದರ ವಿಡಿಯೋ ಶೂಟಿಂಗ್‌ಗೆ ಹೋಗಿದ್ದ ಛಾಯಾಗ್ರಾಹಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೆಲ ಪುಂಡರು ಹಲ್ಲೆ ಮಾಡಿ ಕ್ಯಾಮರಾ ಮತ್ತು ಇತರ ಪರಿಕರಗಳನ್ನು ಹಾಳು ಮಾಡಿದ್ದು ಇದು ನಾಡಿನ ಎಲ್ಲಾ ವೃತ್ತಿಪರ ಛಾಯಾಗ್ರಾಹಕರಿಗೆ ತೀರ್ವತರವಾದ ಆಘಾತವನ್ನು ಉಂಟುಮಾಡಿದೆ. ಇಷ್ಟೆ ಅಲ್ಲದೇ ಇತ್ತೀಚೆಗೆ ಕ್ಯಾಮರಾ ಉದ್ಯಮ ಡಿಜಿಟಲೀಕರಣವಾದ ಮೇಲೆ ಎಲ್ಲಾ ಕ್ಯಾಮರಾ ಪರಿಕರಗಳು ಬೆಲೆಯು ಹೆಚ್ಚಾಗಿದ್ದು ಹಲವು ಕಡೆ ಸ್ಟುಡಿಯೋಗಳಲ್ಲಿ ಕ್ಯಾಮರಾ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕಳ್ಳರು ಮತ್ತು ಪುಂಡರಿAದ ರಕ್ಷಸಿ ಛಾಯಾಗ್ರಾಹಕರನ್ನು ಮತ್ತು ಪರಿಕರಗಳನ್ನು ರಕ್ಷಸಿ. ಎಂದು ಕೊಪ್ಪಳ ಜಿಲ್ಲಾ ಮತ್ತು ತಾಲೂಕ ಛಾಯಾಗ್ರಾಹಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷರು ಹಲ್ಲೆ ನಡೆಸಿದವರ ಮೇಲೆ ಪೊಲೀಸರಿಗೆ ದೂರು ನೀಡಿರುತ್ತಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಹಲ್ಲೆಗೋಳಗಾದ ಛಾಯಾಗ್ರಾಹಕನಿಗೆ ಸೂಕ್ತವಾದ ನ್ಯಾಯ ದೊರಕಿಸಿಕೊಡಬೇಕು ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಛಾಯಾಗ್ರಕರ ಸಂಘದ ಅಧ್ಯಕ್ಷರಾದ ವಿಜಯಕುಮಾರ ವಸ್ತçದ, ಪ್ರಧಾನ ಕಾರ್ಯದಶಿಗಳಾದ ಪ್ರಾಣೇಶ ಕಂಪ್ಲಿ ಮತ್ತು ಪದಾಧಿಕಾರಿಗಳು ಹಾಗೂ ತಾಲೂಕ ಛಾಯಾಗ್ರಹರ ಸಂಘದ ಅಧ್ಯಕ್ಷರಾದ ಬಸವರಾಜ ಕಂಪ್ಲಿ, ಉಪಾಧ್ಯಕ್ಷರಾದ ರವಿ ಮುನಿರಾಬಾದ, ಪ್ರಧಾನ ಕಾರ್ಯದರ್ಶಿ ರವಿ ಕುರುಗೋಡ, ಇತರ ಪದಾಧಿಗರಿಗಳು, ಸದಸ್ಯರು ಇದ್ದರು.