Breaking News

ಗಿಣಿಗೇರ ಗ್ರಾಮದ ಅಭಿವೃದ್ಧಿಗೆ ಸಿ ಎಸ್ ಆರ್ ನಿಧಿಯನ್ನು ಬಳಕೆ ಮಾಡಿ.ಗಿಣಿಗೇರ ನಾಗರೀಕ ಹೋರಾಟ ಸಮಿತಿ ಆಗ್ರಹ

Use CSR funds for the development of Ginigera village. Ginigera Civil Struggle Committee demands.

ಜಾಹೀರಾತು
ಜಾಹೀರಾತು

ಗಿಣಿಗೇರಾ ಗ್ರಾಮ ದಿನೇ ದಿನೇ ಜನ ಬಿಡಿ ಪ್ರದೇಶವಾಗುತ್ತಿದ್ದು ವಲಸೆ ಕಾರ್ಮಿಕರು ಬೀಡಾಗುತ್ತಿದೆ.ಗ್ರಾಮದ ಸುತ್ತ ಬೃಹತ್ ಕೈಗಾರಿಕೆಗಳು ಹೊರಸೂಸುವ ಹಾನಿಕಾರಕ ಹೊಗೆ, ಧೂಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಕೆಮ್ಮು, ನೆಗಡಿ,ಅಸ್ತಮಾ, ಟಿಬಿ, ಕ್ಯಾನ್ಸರ್, ಉಸಿರಾಟದ ತೊಂದರೆಗಳು ಮುಂತಾದ ಮರಣಾಂತಕ ಕಾಯಿಲೆಗಳು ಜನರನ್ನ ಆತಂಕಗೊಳಿಸಿದೆ.
ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯಕ್ಕೆ ಸಂಬಂಧಪಟ್ಟ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು
ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಗ್ರಾಮದಲ್ಲಿ ಸ್ವಚ್ಛತೆ ನೈರ್ಮಲ್ಯ ಇಲ್ಲದಂತಾಗಿದೆ  ಗ್ರಾಮದ ಒಂದನೇ ವಾರ್ಡಿನಲ್ಲಿ ಮಳೆ ಬಂದರೆ ಸಾಕು ಚರಂಡಿ ನೀರು ಮನೆ ಒಳಗೆ ನುಗ್ಗುತ್ತದೆ. ಹಲವು ಏರಿಯಾಗಳಲ್ಲಿ ಈ ಸಮಸ್ಯೆ ಇದ್ದರೂ ಯಾವುದೇ ಪರಿಹಾರ ಕೈಗೊಂಡಿಲ್ಲ.
ಊರಿನ ಮುಖ್ಯ ರಸ್ತೆ ಸಿಮೆಂಟ್ ಆಗಿರುವುದರಿಂದ ಬಿಸಿಲಿನ ತಾಪ ಸಹಿಸಲಾಗುತ್ತಿಲ್ಲ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಬೇಕು.ಊರಿನ ಜನರ ಆರೋಗ್ಯ ಕಾಪಾಡಬೇಕೆಂದರೆ ರಸ್ತೆ ಬದಿಯಲ್ಲಿ  ಹಾಗೂ ಮನೆಗೊಂದು ಮರಗಳ ನೆಡುವ ಅವಶ್ಯಕತೆ ಜೊತೆ ಅನಿವಾರ್ಯವಾಗಿದೆ.ಗ್ರಾಮದ ಯುವಕರು ಆಟವಾಡಲು ಒಂದು ಆಟದ ಮೈದಾನವಿಲ್ಲ ಹಾಗೂ ಸರ್ಕಾರಿ ಪಿಯುಸಿ ಕಾಲೇಜ್ ಅವಶ್ಯಕತೆ ಇದೆ.
ಇನ್ನಿತರ ಬೇಡಿಕೆಗಳಿಗೆ ಸಂಬಂಧಪಟ್ಟ ಮನವಿಯನ್ನು ಗಿಣಿಗೇರ ಪಿ ಡಿ ಓ ಗೆ ಸಲ್ಲಿಸಲು ಹೋದಾಗ ಮನವಿ ಪತ್ರವನ್ನು ಸ್ವೀಕರಿಸದೆ ಸಮಸ್ಯೆ ಕೇಳಲು ಬಂದವರನ್ನೇ ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಣ ಡೊಳ್ಳಿನ್ ತಪ್ಪಿತಸ್ಥರನ್ನುವಂತೆ ವರ್ತಿಸಿದ್ದಾರೆ. ಇದನ್ನು ಗಿಣಿಗೇರ ಹೋರಾಟ ಸಮಿತಿ ಖಂಡಿಸುತ್ತದೆ.
ಪಿ ಡಿ ಓ ಸುಮ್ಮನಿದ್ದು ಮನವಿ ಸ್ವೀಕರಿಸದ ಈ ನಡೆಯನ್ನು ಖಂಡಿಸಿ ಮಾನ್ಯ ತಾಲ್ಲೂಕು ಪಂಚಾಯತ್ ಅಧಿಕಾರಿಗಳಾದ ದುಂಡಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಅಧಿಕಾರಿಗಳು ಪಿ ಡಿ ಓ ಯವರನ್ನು ಕರೆಯಿಸಿ ಮಾತನಾಡಿದಾಗ ಪಿ ಡಿ ಓ ಇಲ್ಲದ ಸಬೂಬ್ ಹೇಳಿದರು.ಅಧಿಕಾರಿಗಳ ಒತ್ತಡದಿಂದ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸುತ್ತೇವೆಂದು ಭರವಸೆ ನೀಡಿದರು

ಈ ಸಂದರ್ಭದಲ್ಲಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕರಾದ ಶರಣು ಗಡ್ಡಿ,ಮುಖಂಡರಾದ ಮಂಗಳೇಶ ರಾತೋಡ್, ಮೌನೇಶ್ ಹಲಗೇರಿ, ವಿರುಪಾಕ್ಷಿ ಪಲ್ಲೆದ, ಹನುಮಂತಪ್ಪ ಕಟಿಗಿ ಮುಂತಾದವರು ಭಾಗವಹಿಸಿದ್ದ

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.