Every Monday and Tuesday in the office of Kudligi tasildar poti/heir account opening M Renuka
ಕೂಡ್ಲಿಗಿ.. ಜಿಲ್ಲಾ ಅಧಿಕಾರಿಗಳಾದ ಎಂ.ಎಸ್ ದಿವಾಕರ್ ರವರ
ಸೂಚನೆಯಂತೆ ಕೂಡ್ಲಿಗಿ ತಾಲೂಕಿನಾದ್ಯಂತ ಪ್ರತಿ ಸೋಮವಾರ ಹಾಗೂ ಮಂಗಳವಾರ ಪೋತಿ\ವಾರಸು ಖಾತೆ ಆರಂಭ ಮಾಡಲಾಗಿದೆ. ಇದೇ ಸೋಮವಾರ ಈ ಆದೋಂಲನಕ್ಕೆ ಚಾಲನೆ ನೀಡಲಾಗಿದೆ ಸಾರ್ವಜನಿಕರು ಹಾಗೂ ರೈತರು ಇದರ ಸದುಪಯೋಗ ಪಡೆಯುವಂತ ತಹಸೀಲ್ದಾರ್ ಎಂ. ರೇಣುಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. ಸಾರ್ವಜನಿಕರು ಪೋತಿ ಹಕ್ಕು ಬದಲಾವಣೆಗೆ ತಮ್ಮ ಗ್ರಾಮಗಳಲ್ಲೆ ಸಂಭಂದಿಸಿದ ಗ್ರಾಮ ಆಡಳಿತ ಅಧಿಕಾರಿ ಭೇಟಿ ಮಾಡಿ, ಪಹಣಿಯಲ್ಲಿ ದಾಖಲಿರುವ, ಪೌತಿಯಾದವರ ವಾರಸುದಾರ ಪಟ್ಟಾದಾರರು ಮರಣ ಪ್ರಮಾಣ ಪತ್ರ, ಇಲ್ಲವಾದಲ್ಲಿ ಕಡ್ಡಾಯವಾಗಿ ಅಫಿಡೆವಿಟ್ ಸಲ್ಲಿಸುವುದು. ತಹಸೀಲ್ದಾರ್ ಕಚೇರಿಯಲ್ಲಿ ಪಡೆದ ವಂಶವೃಕ್ಷ ಮತ್ತು ನೋಟರಿ ಪ್ರಮಾಣ ಪತ್ರ, ವಾರಸುದಾರರ ಎಲ್ಲಾ ಸದಸ್ಯರ ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ, ಕೈ ಬರಹ ಮತ್ತು ಗಣಕೀಕೃತ ಚಾಲ್ತಿ ಪಹಣಿ, ಮೃತ ಖಾತದಾರರಿಗೆ ಜಮೀನು ಹಕ್ಕು ಹೊಂದಿದ ಬಗ್ಗೆ ಮುಟೇಶನ್ ಪ್ರತಿಯ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪೌತಿ\ವಾರಸು ಖಾತೆ ಬದಲಾವಣೆ ಮಾಡಿಸಿಕೊಳ್ಳಬಹುದಾಗಿ ಎಂದು ಅವರು ತಿಳಿಸಿದ್ದಾರೆ.