Breaking News

ಶಾಸಕರ ಮನವಿಗೆ ಸ್ಪಂದಿಸಿ ಪ್ರತಿಭಟನೆ ಹಿಂಪಡೆದ ರೈತ ಸಂಘಟನೆ

The farmers’ organization withdrew the protest in response to the request of the MLA

ಜಾಹೀರಾತು


ವರದಿ :ಬಂಗಾರಪ್ಪ ಸಿ .
ಹನೂರು: ನಮ್ಮ ಕ್ಷೇತ್ರವು ಸುಮಾರು ಒಂಬೈನೂರ ಅರವತ್ತು ಚದುರ ಕಿಲೊಮಿಟರ್ ,ವಿಸ್ತಿರ್ಣವಿದ್ದು,ಮೂರು ಅರಣ್ಯ ಇಲಾಖೆಯ ವಿಭಾಗಗಳ ವ್ಯಾಪ್ತಿಗೆ ಬರುತ್ತದೆ, ಸರ್ಕಾರವು ರಾತ್ರಿ ಕೊಡುವ ವಿದ್ಯುತ್ ಗಳನ್ನು ಹಗಲಿನಲ್ಲಿ ಕೊಡಬೆಕು ಅಕ್ರಮ ಸಕ್ರಮದಲ್ಲಿ ಹಣ ಕಟ್ಟಿದರು ಯಾವುದೇ ಪ್ರಯೋಜನವಿಲ್ಲ ರೈತರಿಗೆ ದಿನ ನೀತ್ಯ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗೌಡೆಗೌಡ ತಿಳಿಸಿದರು . ಹನೂರು ಪಟ್ಟಣದ ‌ಕೆಇಬಿಯ ಮುಂಬಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಪರವಾಗಿ ಮಾತನಾಡಿದ ಗೌಡೇಗೌಡರು
೨೦೧೩ರಲ್ಲಿ ನಮ್ಮ ಸಂಘವು ಮಾನವ ಹಕ್ಕು ಆಯೋಗದಲ್ಲಿ ದೂರು ನೀಡಿದ್ದರು ಸಹ ಪ್ರಯೋಜನವಿಲ್ಲ ಮಳೆಯಿಲ್ಲ ನಮಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿಲ್ಲ
ನಮ್ಮ ಕ್ಷೇತ್ರದಲ್ಲಿ ಗುಡ್ಡಗಾಡು ಪ್ರದೇಶವಿರುವುದರಿಂದ ನಮಗೆ ಟ್ರಾನ್ಸ್ ಪಾರ್ಮರ್ ಅಳವಡಿಕೆಕಷ್ಟವಾಗಿದೆಈ ಭಾಗದಲ್ಲಿ ಹಂಡ್ರೆಡ್ ಕೆವಿ ಟಿ ಸಿ ಗಳಿವೆ ಅವುಗಳ ದುರಸ್ತಿ ಕಾರ್ಯಮಾಡಲು ಕಷ್ಟವಾಗಿದೆ, ರೈತರಿಗೆ ಬಹಳ ಮೋಸವಾಗಿದೆ. ಸರ್ಕಾರವು ಚೆಸ್ಕಾಂ ಇಲಾಕೆಗೆ ಹದಿನಾಲ್ಕು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದರು ಅದರ ಉಪಯೋಗ ಸಮರ್ಪಕವಾಗಿ ಮಾಡುತ್ತಿಲ್ಲ, ಶಾಸಕರು ನಮ್ಮ ಪರವಾಗಿ ಈಗಾಗಲೆ ಸದನದಲ್ಲಿ ಚೆರ್ಚೆ ಮಾಡಿದ್ದಾರೆ ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆ ನಿರತ ರೈತರ ಮನವಿಗೆ ಸ್ಪಂದಿಸಿದ ಶಾಸಕರಾದ ಎಮ್ ಆರ್ ಮಂಜುನಾಥ್ : ರೈತರು ಪ್ರತಿಭಟನೆ ನಿರತ ಸ್ಥಳಕ್ಕೆ ಬೇಟಿ ನೀಡಿದ ನಂತರ ನಿಮ್ಮ ಸಮಸ್ಯೆಗಳೆಲ್ಲವು ಸತ್ಯವಾಗಿದೆ ನಿಮ್ಮ ದ್ವನಿಗೆ ನಾನು ಚೊಚ್ಚಲ ಸದನದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿದ್ದೆನೆ, ನಮ್ಮ ಕ್ಷೇತ್ರವು ರಾಜ್ಯದಲ್ಲಿ ಅತಿ ದೊಡ್ಡ ಮೂರನೆ ಕ್ಷೇತ್ರ ವಾಗಿದೆ ಅಲ್ಲದೆ ಇಲ್ಲಿ ಹೆಚ್ಚು ಕಾಡು ಪ್ರಾಣಿಗಳ ಹಾವಳಿಯಿದೆ ನಿಮಗೆ ನೀರು ,ವಿದ್ಯುತ್ ನೀಡಿದರೆ ಯಾವುದೆ ಸಮಸ್ಯೆಯಾಗುವುದಿಲ್ಲ ನಮ್ಮ ವ್ಯಾಪ್ತಿಯಲ್ಲಿ ನಾನೂರ ಮೂವತ್ತೋಂಬತ್ತು ಟಿ ಸಿ ಗಳನ್ನು ನೀಡಿಲ್ಲ, ಮತ್ತೋಂದು ಉಪವಿಭಾಗ ರಾಮಪುರದಲ್ಲಿ ಮಾಡಬೇಕು ಬೌಗೋಳಿಕವಾಗಿ ಬಹಳ ದೊಡ್ಡದಿದೆ ರೈತರ ಸಮಸ್ಯೆಯನ್ನು ನಾನು ನಿಮ್ಮ ಪ್ರತಿನಿದಿಯಾಗಿ ಸದನದಲ್ಲಿ ದ್ವನಿಯಾಗುತ್ತೇನೆ , ಇಂದನ ಇಲಾಖೆಯ ತಪ್ಪಿನಿಂದ ನಮ್ಮ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ ಮುಂದಿನ ದಿನಗಳಲ್ಲಿ ಮಳೆಯಿಲ್ಲದೆ ದನ ಕರುಗಳಿಗೆ ತೊಂದರೆಯಾಗದಂತೆ ನಾನು ನಿಮ್ಮ ಜೊತೆಯಲ್ಲಿರುತ್ತೆನೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಲಾಗಿದೆ ಇದರಿಂದ ಶಾಸ್ವತ ಪರಿಹಾರ ನೀಡಲಾಗುವುದು,ಈಗಾಗಲೆ
ಸಚಿವರು ಭರವಸೆ ನೀಡಿದ್ದಾರೆ ಎಲ್ಲಾ ರೀತಿಯಲ್ಲೂ ರೈತರಿಗೆ ಸಹಕಾರ ನೀಡುತ್ತೇನೆ,ನಮಗೆ ಹದಿನೈದು ದಿನ ಕಾಲವಕಾಶ ಕೊಡಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದರು . ಶಾಸಕರ ಮನವಿಗೆ ಸ್ಪಂದಿಸಿದ ರೈತರು ಪ್ರತಿಭಟನೆಯನ್ನು ಕೈಬಿಟ್ಟು ರೈತ ಸಂಘಕ್ಕೆ ಜಯವಾಗಲಿ ಎಂದು ಹೋರಾಟವನ್ನು ನಿಲ್ಲಿಸಿದರು . ಇದೇ ಸಮಯದಲ್ಲಿ ಮಾತನಾಡಿದ ಅಧಿಕಾರಿಗಳಾದ ಅಧಿಕ್ಷಕ ಇಂಜನೀಯರ್ ಶ್ರೀಮತಿ ತಾರ ನೀವು ಮನವಿ ಮಾಡಿದ ಹದಿನೆಂಟನೆ ತಾರಿಖು ಮಾಹಿತಿ ಬಂದಿತು ಅಲ್ಲದೆ ನಮಗೆ ಮಳೆಯಿಲ್ಲದ ಕಾರಣ ಬೇಕಾಗಿರುವ ಹತ್ತು ಸಾವಿರ ಮೆಗವ್ಯಾಟ್ ವಿದ್ಯುತ್ ಆದರೆ ನಮಗೆ ಸಿಗುವುದು ಕೇವಲ ನಾಲ್ಕು ಸಾವಿರ ಮೆಗವ್ಯಾಟ್ ನಾವು ಕೊಡುವ ಕರೆಂಟ್ ಸಾಲುತ್ತಿಲ್ಲ ಸಾರ್ವಜನಿಕರ ಹಿತಶಕ್ತಿ ಬಹಳ ಮುಖ್ಯವಾಗಿದೆ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸುತ್ತೆನೆ ಅದರ ಮುಂದುವರಿದ ಭಾಗವಾಗಿ ಎಲ್ಲಾ ಸಹಕಾರ ನೀಡುತ್ತೆವೆ ಎಂದರು . ಇದೇ ಸಮಯದಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ರೈತ ಮುಖಂಡರು ಹಾಜರಿದ್ದರು .

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.