Background to Mass Marriage Postponement Couples married at Salur Math on scheduled dates.
ವರದಿ :ಬಂಗಾರಪ್ಪ ಸಿ .
ಹನೂರು: ಕ್ಷೇತ್ರ ವ್ಯಾಪ್ತಿಯ ಪ್ರಸಿದ್ದ ಯಾತ್ರ ಸ್ಥಳವಾದ ಮಲೆಮಹದೇಶ್ವರ ಕ್ಷೇತ್ರದ ಶ್ರೀ ಸಾಲೂರು ಮಠದಲ್ಲಿ ಸೋಮವಾರದಂದು ನವ ವಧು ವರರು ಮಠದಲ್ಲಿ ಮತ್ತು ಬೊಮ್ಮೇಶ್ವರ ದೇವಸ್ಥಾನದಲ್ಲಿ ಒಂದು ಜೋಡಿ ಸೇರಿ ಆರೇಳು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರ ಜೀವನ ಸುಖಕರವಾಗಿರಲಿ ಎಂದು ಸಾಲೂರು ಶ್ರೀಗಳು ಆರ್ಶೀವಾದ ಮಾಡಿದರು .
ಘಟನೆ ಹಿನ್ನಲೆ :ಸರ್ಕಾರವು ಈಗಾಗಲೆ
ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆ.23 ರಂದು ಉಚಿತ ಸಾಮೂಹಿಕ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ ಅಧಿಕಾರಿಗಳ ವರ್ಗವಣೆಯ ಕಾರಣಾಂತರದಿಂದ ಇದೇ ತಿಂಗಳು 28ಕ್ಕೆ ಮುಂದೂಡಲಾಗಿದ್ದರು ಸಹ ನಿಗದಿತ ದಿನಾಂಕವನ್ನು ಘೋಷಣೆ ಮಾಡಿಲ್ಲ ಆದಾಗಿಯು ಸುಮಾರು 65 ಜೋಡಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಅಲ್ಲದೆ ಕೆಲವರು ಲಗ್ನ ಪತ್ರಿಕೆಯನ್ನು ನೆಂಟರಿಷ್ಟರಿಗೆ ,ಸ್ನೇಹಿತರಿಗೆ ನೀಡಿದರು ಆಹ್ವಾನ ಮಾಡಿ 28ರಂದು ಮದುವೆಗೆ ಆಗಮಿಸುವಂತೆ ತಿಳಿಸಿದ್ದರು ಅಧಿಕಾರಿಗಳ ವರ್ಗಾವಣೆಯಿಂದ ನಡೆಯಬೇಕಿದ್ದ ಮದುವೆ ನಡೆಯಲಿಲ್ಲ ,ಇನ್ನು ಕೆಲವರು ಲಗ್ನ ಪತ್ರಿಕೆ ಮಾಡಿಸದೆ ವಿವಾಹಕ್ಕೆ ಆಗಮಿಸುವಂತೆ ಸಂಬಂಧಿಕರಿಗೆ 2 ಬಾರಿ ತಿಳಿಸಿದ್ದರು. ಆದಾಗಿಯು ಸಹ ಪ್ರಾಧಿಕಾರ ದಿನಾಂಕವನ್ನು ಮುಂದೂಡಿ ಮದುವೆ ದಿನಾಂಕವನ್ನು ನಿಗದಿಪಡಿಸಿಲ್ಲದ ಕಾರಣ ವಧು- ವರರು ಹಾಗೂ ಕುಟುಂಬಸ್ಥರು ಗೊಂದಲಕ್ಕೆ ಒಳಗಾಗಿ
ಪ್ರಾಧಿಕಾರದ ಕಾರ್ಯವೈಖರಿಯಿಂದ ಬೇಸತ್ತ 7 ಕುಟುಂಬಸ್ಥರು ಜತೆಗೂಡಿ ತಮ್ಮ ಸ್ವಂತ ಖರ್ಚಿನಲ್ಲೆ ಸಾಲೂರು ಮಠದಲ್ಲಿ ಮದುವೆ ಕಾರ್ಯ ನೆರವೇರಿಸಿದರು. ಜತೆಗೆ ಬೊಮ್ಮೇಶ್ವರ ದೇವಸ್ಥಾನ ದಲ್ಲೂ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದ ಒಂದು ಜೋಡಿಯ ಮದುವೆ ಯಾಯಿತು. ಪ್ರಾದಿಕಾರವು ಇನ್ನಾದರು ವಿವಾಹಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ಅತೀ ಶೀಘ್ರದಲ್ಲಿ ದಿನಾಂಕ ನಿಗದಿಪಡಿಸಿ ಸಾಮೂಹಿಕ ವಿವಾಹವನ್ನು ನೆರವೇರಿ ಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.