Demand to release left bank canal water: Lankesha Guldala
ಗಂಗಾವತಿ: ತುಂಗಭದ್ರಾ ಜಲಾಶಯದಿಂದ ತಕ್ಷಣವೇ ಎಡದಂಡೆ ಕಾಲುವೆ ನೀರು ಬಿಡುವಂತೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಲಂಕೇಶ ಗುಳದಾಳ ಪ್ರಕಟಣೆಯಲ್ಲಿ ತಿಳಿಸಿದರು.
ತುಂಗಭಧ್ರಾ ಜಲಾಶಯದ ಹಿನ್ನೀರಿನ ಮಟ್ಟ ಹೆಚ್ಚಾಗಿ ಜಲಾಶಯ ಭರ್ತಿಯಾಗಿದ್ದು, ರೈತರು ಬಿತ್ತನೆ ಮಾಡಿದ ಬೀಜಗಳಿಂದ ಈಗಾಗಲೇ ಸಸಿಗಳು ಬಂದಿದ್ದು, ರೈತರಿಗೆ ನೀರಿನ ಅವಶ್ಯಕತೆ ತುಂಬಾ ಇರುತ್ತದೆ. ಸರಿಯಾದ ಸಮಯಕ್ಕೆ ನೀರು ಬಿಡದೇ ಇದ್ದರೆ, ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಳು ಮುಂದೆ ಸರಿಯಾದ ರೀತಿಯಲ್ಲಿ ಇಳುವರಿ ಬರುವುದಿಲ್ಲ. ಬೆಳೆಗಳು ರೋಗ-ರುಜಿನಗಳಿಗೆ ಒಳಗಾಗುವ ಭೀತಿ ಇರುತ್ತದೆ. ಕಾರಣ ಕೂಡಲೇ ಎಡದಂಡೆ ನಾಲೆಗೆ ನೀರು ಬಿಡುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಜಿಲ್ಲೆಯಾಧ್ಯಂತ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.