ದೇಶಕ್ಕೆ ಇಂದು ವ್ಯಸನಮುಕ್ತ ಕ್ರಾಂತಿಯ ಅಗತ್ಯವಿದೆ: ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ

H.Mallikarjun
H.Mallikarjun - Kalyanasiri
3 Min Read

The country needs an addiction-free revolution today: Koppal MP K. Rajashekar Hitnal

ದೇಶಕ್ಕೆ ಇಂದು ವ್ಯಸನಮುಕ್ತ ಕ್ರಾಂತಿಯ ಅಗತ್ಯವಿದೆ: ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ

ಜಾಹೀರಾತು
ಜಾಹೀರಾತು

 ಕೊಪ್ಪಳ ಆಗಸ್ಟ್ 17, (ಕರ್ನಾಟಕ ವಾರ್ತೆ): ಭಾರತಕ್ಕೆ ಸ್ವಾತಂತ್ರö್ಯ ಸಿಕ್ಕಾಗ ಹಸಿರು ಕ್ರಾಂತಿ ಹಾಗೂ ಬಿಳಿ ಕ್ರಾಂತಿಗಳ ಮೂಲಕ ಆಹಾರ ಮತ್ತು ಹಾಲಿನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಯಿತು. ಆದರೆ, ಇಂದಿನ ದಿನಮಾನಗಳಲ್ಲಿ ದೇಶಕ್ಕೆ ದೊಡ್ಡ ಮಟ್ಟದ `ವ್ಯಸನಮುಕ್ತ ಕ್ರಾಂತಿ’ಯ ಅಗತ್ಯವಿದೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲೆ, ತಾಲ್ಲೂಕು ಆಡಳಿತ, ನಗರಸಭೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ (ಆ. 16ರಂದು) ಹಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ “ಸಂಯಮ ಪ್ರಶಸ್ತಿ” ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ಹೆಗ್ಗಳಿಕೆ ಭಾರತಕ್ಕಿದೆ. ಆದರೆ, ಇಂದಿನ ಯುವಪೀಳಿಗೆ ಮದ್ಯ, ಗುಟ್ಕಾ, ಗಾಂಜಾದAತಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಶಕ್ತಿ ಮತ್ತು ಸಮಯವನ್ನು ವ್ಯರ್ಥ ಮಾಡುತ್ತಿರುವುದು ದೇಶದ ಹಿನ್ನಡೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಯುವಶಕ್ತಿಯನ್ನು ಸನ್ಮಾರ್ಗಕ್ಕೆ ತರಲು ವ್ಯಸನಮುಕ್ತ ಅಭಿಯಾನ ಚಳವಳಿಯಾಗಬೇಕು.ಬ್ರಿಟೀಷರಿಂದ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕರೆ ಮಾತ್ರ ಸಾಲದು, ಗ್ರಾಮಗಳು ಸಂಪೂರ್ಣವಾಗಿ ದುಶ್ಚಟಗಳಿಂದ ಮುಕ್ತವಾಗಿ, ಶಾಂತಿ-ನೆಮ್ಮದಿಯ ಬದುಕು ಕಂಡುಕೊAಡಾಗ ಮಾತ್ರ ಗಾಂಧೀಜಿಯವರ ನೈಜ `ಗ್ರಾಮ ಸ್ವರಾಜ್ಯ’ದ ಕನಸು ನನಸಾಗಲು ಸಾಧ್ಯ ಎಂದರು.
ಜನಪ್ರತಿನಿಧಿಗಳು ರಸ್ತೆ, ಕುಡಿಯುವ ನೀರು, ಸಮುದಾಯ ಭವನಗಳಂತಹ ಸೌಲಭ್ಯಗಳನ್ನು ಕಲ್ಪಿಸಬಹುದು. ಆದರೆ ಮದ್ಯಮುಕ್ತ ಗ್ರಾಮ ನಿರ್ಮಾಣವು ಇಡೀ ಊರಿಗೆ ಶಾಶ್ವತ ನೆಮ್ಮದಿ ತಂದುಕೊಡುವ ಶ್ರೇಷ್ಠ ಕಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹಟ್ಟಿ ಗ್ರಾಮವು ಮಾದರಿಯಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಸುಮಾರು 10 ಗ್ರಾಮಗಳು ಮದ್ಯಮುಕ್ತವಾಗಿರುವುದು ಹೆಮ್ಮೆಯ ವಿಚಾರ. ಗ್ರಾಮದ ಅಭಿವೃದ್ಧಿ ಹಾಗೂ ಮದ್ಯಮುಕ್ತ ಧ್ಯೇಯಕ್ಕಾಗಿ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಶ್ರಮಿಸಿದ ಹಟ್ಟಿ ಗ್ರಾಮಸ್ಥರ ಬದ್ಧತೆ ಶ್ಲಾಘನೀಯ. ಮುಂದೆಯೂ ಗ್ರಾಮದಲ್ಲಿ ಮದ್ಯ ಪ್ರವೇಶಿಸದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ ಎಂದ ಅವರು, ಹಟ್ಟಿ ಗ್ರಾಮವನ್ನು ಪ್ರೇರಣೆಯಾಗಿಟ್ಟುಕೊಂಡು ಇತರ ಗ್ರಾಮಗಳೂ ಮದ್ಯಮುಕ್ತವಾಗಲಿ ಎಂದು ಹಾರೈಸಿದರು.
ಕೊಪ್ಪಳದ ಶ್ರೀ ಗವಿಸಿದ್ದೇಶ್ವ ಮಠದ ಅಭಿನವ ಗವಿಸಿದ್ದೇಶ್ವ ಸ್ವಾಮೀಜಿ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್‌ದ ಗುರುಮಹಾಂತ ಶ್ರೀಗಳು ಹಾಗೂ ಮುನಿಪ್ರ ಗುರು ಸ್ವಾಮಿಗಳು ರಬಕವಿ ರವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲಾದಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರು ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ಭವನದ ಕೋಶಾಧ್ಯಕ್ಷರಾದ ಹೆಚ್.ಬಿ ದಿನೇಶ್, ಗಾಂಧಿ ಸ್ಮಾರಕ ಭವನದ ಅಧ್ಯಕ್ಷರಾದ ನಾಡೋಜ ಉಡೇ ಪಿ. ಕೃಷ್ಣ, ಕೊಪ್ಪಳ ಸಹಾಯಕ ಆಯುಕ್ತರಾದ ಮಹೇಬೂಬ್ ಜೀಲಾನ್, ತಾ.ಪಂ. ಇಒ ದುಂಡಪ್ಪ ತುರಾದಿ, ಗಾಂಧಿ ಸ್ಮಾರಕ ಭವನದ ಸಲಹೆಗಾರರಾದ ಪ್ರೊ. ಶಿವರಾಜ, ಲೇಖಕರಾದ ಪ್ರೊ. ಕೆ.ಪುಟ್ಟರಂಗಪ್ಪ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರಾದ ನಾಗರಾಜ ಜುಮ್ಮನ್ನನವರ, ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯಕರ್ಶಿ ಎನ್.ಎಸ್. ಮಹೇಶ, ಕೊಪ್ಪಳ ಅಬಕಾರಿ ಇಲಾಖೆಯ ಅಧಿಕಾರಿ ಕೆ.ಪ್ರಶಾಂತ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಮುಖಂಡರಾದ ರಾಮಣ್ಣ ಚೌಡ್ಕಿ ಸೇರಿದಂತೆ ಕೊಪ್ಪಳ ಗಾಂಧಿ ಬಳಗದ ಸದಸ್ಯರು, ಹಟ್ಟಿ ಗ್ರಾಮದ ಮುಖಂಡರು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಯಮ ಪ್ರಶಸ್ತಿ ಪ್ರದಾನ: ಹಟ್ಟಿ ಗ್ರಾಮದ ಮಹಿಳೆಯರಿಗೆ ಸನ್ಮಾನಿಸಿ, ಕೊಪ್ಪಳ ಜಿಲ್ಲೆ ಮದ್ಯಮುಕ್ತ ಹಟ್ಟಿ ಗ್ರಾಮಕ್ಕೆ “ಸಂಯಮ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಮದ್ಯ ಮಾರಾಟ ಮುಕ್ತ ಅಭಿನಂದನಾ ಪ್ರಶಸ್ತಿ ವಿತರಣೆ: ಕೊಪ್ಪಳ ತಾಲ್ಲೂಕಿನ ಹಟ್ಟಿ, ತಾಳ ಕನಕಾಪುರ, ಕಾಮನೂರು, ಹನುಮನಹಳ್ಳಿ ಹಾಗೂ ಲೇಬಗೇರಿ, ಕುಕನೂರು ತಾಲ್ಲೂಕಿನ ಬಿನ್ನಾಳ ಮತ್ತು ಚಿಕ್ಕೇನಕೊಪ್ಪ, ಕುಷ್ಟಗಿ ತಾಲ್ಲೂಕಿನ ಮದ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಒಳಗೊಂಡAತೆ ಈ ಎಲ್ಲ ಪ್ರಮುಖ ಗ್ರಾಮಗಳಿಗೆ ಕಾರ್ಯಕ್ರಮದಲ್ಲಿ ಮದ್ಯ ಮಾರಾಟ ಮುಕ್ತ ಅಭಿನಂದನಾ ಪ್ರಶಸ್ತಿ ವಿತರಣೆ ಮಾಡಲಾಯಿತು.
ಪುಸ್ತಕ ಬಿಡುಗಡೆ: ಪ್ರೊ. ಕೆ.ಪುಟ್ಟರಂಗಪ್ಪ ಅವರು ರಚಿಸಿದ “ಪಾನನಿರೋಧ ಚಳುವಳಿ” ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಗಾಂಧಿ ಬಳಗದ ಸದಸ್ಯರಾದ ಸಾವಿತ್ರಿ ಮುಜುಮದಾರ ಅವರು ಕಾರ್ಯಕ್ರಮ ನಿರೂಪಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶಂಕರ ಬಿನ್ನಾಳ ಹಾಗೂ ತಂಡದವರು ನಾಡಗೀತೆ ಮತ್ತು ಗಾಂಧೀಜಿಯವರ ಪ್ರೀತಿಯ ಭಜನೆ ಗೀತೆಗಳ ಗಾಯನ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಜ್ಞೆ ಸ್ವೀಕರಿಸಲಾಯಿತು.

Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article