ರಸ್ತೆಯಲ್ಲಿನ ಗುಂಡಿಗಳನ್ನು ರಿಪೇರಿ ಮಾಡುವದು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ತೆರವುಗೊಳಿಸುವಂತೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯ.

H.Mallikarjun
H.Mallikarjun - Kalyanasiri
2 Min Read
The All-round Development Struggle Committee demands the repair of potholes on the road and the removal of encroachment on government land.

ರಸ್ತೆಯಲ್ಲಿನ ಗುಂಡಿಗಳನ್ನು ರಿಪೇರಿ ಮಾಡುವದು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ತೆರವುಗೊಳಿಸುವಂತೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯ.


ಗಂಗಾವತಿ: ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ, ತಗ್ಗು — ಗುಂಡಿಗಳಿಂದ ಕೂಡಿವೆ ರಿಪೇರಿ ಮಾಡಬೇಕೆಂದು ಸರ್ವಾO ಗೀ ಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದರು. ನಗರದ ನೀಲಕಂಠಶ್ವರ ಸರ್ಕಲ್ ನಲ್ಲಿ ನಗರ ಸಭೆಯ ಆರೋಗ್ಯ ನೀರಿಕ್ಷಕ ನಾಗರಾಜ್ ಇವರಿಗೆ. ತಾಲೂಕ ಘಟಕವು ಮನವಿ ಸಲ್ಲಿದ ನಂತರ ಮಾತನಾಡಿ ನಗರದಾದ್ಯಂತ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು, ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ರಸ್ತೆಗಳನ್ನು ರಿಪೇರಿ ಮಾಡಬೇಕು.
ಸರ್ಕಾರಿ ಜಾಗಗಳ ಸಂರಕ್ಷಣೆ: ನಗರಸಭೆ ವ್ಯಾಪ್ತಿಯ ಸಿ.ಎ. ಸೈಟ್ ಸೇರಿದಂತೆ ಸರ್ಕಾರಿ ಜಾಗಗಳನ್ನು ಗುರುತಿಸಿ, ಬೇಲಿ ಹಾಕಿ ನಾಮಫಲಕ ಅಳವಡಿಸಬೇಕು.
ಒತ್ತುವರಿ ತೆರವು: ಪ್ರಭಾವಿಗಳು ಅತಿಕ್ರಮಿಸಿಕೊಂಡಿರುವ ಸರ್ಕಾರಿ ಜಾಗ ಹಾಗೂ ಉದ್ಯಾನವನಗಳನ್ನು ತೆರವುಗೊಳಿಸಿ ವಶಕ್ಕೆ ಪಡೆಯಬೇಕು.


ಸರ್ಕಾರಿ ಕಚೇರಿಗಳಿಗೆ ಸ್ಥಳಾವಕಾಶ: ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಸರ್ಕಾರಿ ಕಚೇರಿಗಳು, ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರಿ ಜಾಗದಲ್ಲಿ ವ್ಯವಸ್ಥೆ ಕಲ್ಪಿಸಬೇಕು.
ಫುಟ್‌ಪಾತ್ ತೆರವು: ನಿಯಮ ಮೀರಿ ಫುಟ್‌ಪಾತ್ ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ಪತ್ತೆ ಮಾಡಿ, ಅಳತೆ ಮಾಡುವ ಮೂಲಕ ತೆರವುಗೊಳಿಸಬೇಕು.
ಯುಜಿಡಿ ಸಮಸ್ಯೆ: ಯುಜಿಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು.
ಮೂತ್ರಾಲಯ ನಿರ್ಮಾಣ: ಸಾರ್ವಜನಿಕ ಸ್ಥಳಗಳಾದ ಗಾಂಧಿ ಸರ್ಕಲ್, ಮಹಾವೀರ ಸರ್ಕಲ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ತುರ್ತಾಗಿ ಮೂತ್ರಾಲಯಗಳನ್ನು ನಿರ್ಮಿಸಬೇಕು.
ನಗರಸಭೆ ಈ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮ್ಯಾಗಳಮನಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರು ನಿಸರ್ಗ ತಾಲೂಕ ಅಧ್ಯಕ್ಷ ಜಡಿಯಪ್ಪ ಹಂಚಿನಾಳ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಘವೇಂದ್ರ ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಕೆ ಎಂ ಅರವಿಂದ್ ಯೋಗಿ, ಮಂಜುನಾಥ ಚನ್ನಾದಾಸರ, ಬೋಗೇಶ್ ಆನೆಗುಂದಿ, ಮೇಘರಾಜ್, ರಗಡಪ್ಪ ಹೊಸಳ್ಳಿ, ಬಿ ಕೆ ಗಣೇಶ್, ಮಂಜುನಾಥ ಹಿರೇಮಠ್, ರೆಹಮಾನ್, ಹರೀಶ್, ಮಹೇಬುಬ್ ಹನುಮೇಶ್ ಸೋಮಶೇಖರ್, ಮತ್ತಿತರರು ಇದ್ದರು

Total Views: 0
Share This Article