ಬೇಟೆಗಾರರ ಹತ್ಯೆ ಮನವೊಲಿಕೆ ಸಫಲ, ಧರಣಿ ಕೈ ಬಿಟ್ಟ ಹೋರಾಟಗಾರರು .

H.Mallikarjun
H.Mallikarjun - Kalyanasiri
2 Min Read

Successful persuasion regarding the killing of hunters; protesters call off the sit-in.

ಬೇಟೆಗಾರರ ಹತ್ಯೆ ಮನವೊಲಿಕೆ ಸಫಲ, ಧರಣಿ ಕೈ ಬಿಟ್ಟ ಹೋರಾಟಗಾರರು .

ಜಾಹೀರಾತು
ಜಾಹೀರಾತು


ವರದಿ: ಬಂಗಾರಪ್ಪ .ಸಿ.‌
ಹನೂರು:ಕ್ಷೇತ್ರದ ಕಾವೇರಿ ವನ್ಯಜೀವಿಧಾಮದ ಶಾಗ್ಯ ವಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು ಒಬ್ಬ ಗಾಯಳು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡು ಧರಣಿ ನಡೆಸುತ್ತಿದ್ದ ಕುಟುಂಬಸ್ಥರು ಹಾಗೂ ಹನೂರು ತಾಲ್ಲೂಕು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಹೋರಾಟವನ್ನು ಕೈಬಿಟ್ಟಿದ್ದಾರೆ.
ಹನೂರು ಪಟ್ಟಣದ ಪೋಲಿಸ್ ಠಾಣೆಯ ಮುಂಬಾಗದಲಿ ಮೃತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು
ಸ್ಥಳಿಯ ಶಾಸಕ ಎಂ.ಆರ್. ಮಂಜುನಾಥ್ ,ಮಾಜಿ ಶಾಸಕ ಆರ್ ನರೇಂದ್ರ , ಪೋಲಿಸ್ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಸೇರಿ ಪ್ರತಿಭಟನಾನಿರತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಒಟ್ಟು 15 ಲಕ್ಷ ಪರಿಹಾರ ನೀಡಲಾಗುವುದು. ರಾಜ್ಯ ಸರ್ಕಾರವು ಪ್ರಕರಣದ ತನಿಖೆಯ ಹೊಣೆಯನ್ನು ನ್ಯಾಯದೀಶರಿಗೆ ವಹಿಸಿದೆ ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ, ಅಮಾನತಿಗೂ ಸಹ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮನವರಿಕೆ ಮಾಡಿದರು.
ಮುಂದುವರೆದ ಭಾಗವಾಗಿ
ಸರ್ಕಾರದಿಂದ ತಾತ್ಕಾಲಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಜೊತೆಗೆ ವೈಯಕ್ತಿಕವಾಗಿ ತಾನು 10 ರೂ. ಲಕ್ಷ ಪರಿಹಾರ ನೀಡಲಿದ್ದು, ಒಟ್ಟು 15 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಶಾಸಕರಾದ ಎಂ ಆರ್ ಮಂಜುನಾಥ್ ತಿಳಿಸಿದರು.
ಗುಂಡು ಹಾರಿಸಿದ ಪ್ರಕರಣ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ. ತನಿಖಾ ತಂಡವನ್ನೂ ರಚಿಸಲಾಗಿದ್ದು, ವರದಿ ಸಲ್ಲಿಕೆಯಾದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದರು. ಶಾಸಕರು ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ನಮ್ಮ ಹೋರಾಟವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ರೈತ ಮುಖಂಡರು ಘೋಷಣೆ ಮಾಡಿದರು.

ಧರಣಿನಿರತರು ಶಾಂತರಾದ ಹಿನ್ನೆಲೆಯಲ್ಲಿ ನಿನ್ನೆಯಿಂದಲೂ ಬಂದ್​ ಆಗಿದ್ದ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ. ಪಟ್ಟಣದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೂರು ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.ಶವಗಳನ್ನು ಸಂಜೆ ವೇಳೆಗೆ ವಾರಸುದಾರರ ಜೊತೆಯಲ್ಲಿ ಅವರ ಸ್ವಗ್ರಾಮಕ್ಕೆ ಶವಗಳನ್ನು ತರಲಿದ್ದಾರೆ.

ತನಿಖೆಗೆ ಸರ್ಕಾರದಿಂದ ಸೂಚನೆ ಅಧಿಕಾರಿಗಳಿಗೆ
ತನಿಖಾ ವರದಿಯನ್ನು ಸಲ್ಲಿಸಲು 7 ದಿನ ಕಾಲಾವಕಾಶ ನೀಡಲಾಗಿದ್ದು. ಪ್ರಕರಣದ ಬಗ್ಗೆ ಕೊಳ್ಳೇಗಾಲ ಉಪವಿಭಾಗಾಧಿಕಾರಿ (ಎಸಿ) ದಿನೇಶ್ ಕುಮಾರ್ ಮೀನಾ ರವರು ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುತ್ತದೆ.‌ ಈಗಾಗಲೇ ತನಿಖೆ ಆರಂಭವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದೇನೆ.‌ ಗುಂಡೇಟಿಗೆ ಬಲಿಯಾದವರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ರೈತ ಸಂಘಟನೆಯ ಪ್ರಮುಖರುಗಳಾದ ಗೌಡೆ ಗೌಡ .ಹೊನ್ನೂರು ಪ್ರಕಾಶ್ , ಶೈಲೇಂದ್ರ ,ಅಮ್ಜಾದ್ ಖಾನ್ . ರಾಜಣ್ಣ ,ಪಳನಿಸ್ವಾಮಿ. ಸೇರಿದಂತೆ ಅನೇಕ ಹೋರಾಟಗಾರರು ಜೊತೆಯಲ್ಲಿ ಅಧಿಕಾರಿಗಳು ಹಾಜರಿದ್ದರು.

Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article