ಶಾರದಾ ದೇಗುಲದಲ್ಲಿ ಸಂಭ್ರಮದ ಶಂಕರ್ ಜಯಂತೋತ್ಸವ ಆಚರಣೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Shankar Jayanti celebrated with fervour at Sharada Temple




ಶಾರದಾ ದೇಗುಲದಲ್ಲಿ ಸಂಭ್ರಮದ ಶಂಕರ್ ಜಯಂತೋತ್ಸವ ಆಚರಣೆ

ಜಾಹೀರಾತು


ಧರ್ಮ ರಕ್ಷಣೆಗೆ ಸಂಘಟನೆಯೇ ಬಲ. ಧರ್ಮದರ್ಶಿ ನಾರಾಯಣರಾವ್ ವೈದ್ಯ


ಗಂಗಾವತಿ: ಸನಾತನ ಧರ್ಮವಾದ ಹಿಂದೂ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಂಘಟಿತ ರಾಗಬೇಕಾದ ಅವಶ್ಯಕತೆ ಇದ್ದು ಸಂಘಟನೆಯಿಂದ ಮಾತ್ರ ಒಗ್ಗಟ್ಟು ಮೂಡಿಸಲು ಸಾಧ್ಯ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು
ಅವರು ಮಂಗಳವಾರದಂದು ನಗರದ ಶಾರದಾ ದೇಗುಲದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮದ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಧರ್ಮಕ್ಕೆ ಆಪತ್ತು ಬಂದಾಗ ಭಗವಂತ ಯಾವುದೇ ರೂಪದಲ್ಲಿ ಭೂಮಿಗೆ ಆಗಮಿಸಿ ಧರ್ಮ ರಕ್ಷಣೆ ಮಾಡುತ್ತಾರೆ ಎಂಬುವುದಕ್ಕೆ ಆದಿ ಗುರು ಶ್ರೀ ಶಂಕರಾಚಾರ್ಯ ಸಾಕ್ಷಿಯಾಗಿದ್ದಾರೆ
ಕೇಂದ್ರ ಸರ್ಕಾರದ ಆದೇಶದ ಅನ್ವಯ ವಿಶ್ವ ದಾರ್ಶನಿಕರ ದಿನಾಚರಣೆಯನ್ನಾಗಿ ಶ್ರೀ ಶಂಕರಾಚಾರ್ಯರ ಜಯಂತಿ ಉತ್ಸವವನ್ನು ಆಚರಿಸುವಂತೆ ಆದೇಶಿಸಿದೆ. ಅದ್ವೈತ ಸಿದ್ದಾಂತದ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲಿ ಶ್ರೀಮಠಗಳನ್ನು ಸ್ಥಾಪಿಸಿ ದೇಶದ ಜನತೆ ಒಗ್ಗಟ್ಟಿನಿಂದ ಧರ್ಮ ರಕ್ಷಣೆಯ ಮೂಲವಾಗಿದೆ ಧರ್ಮ ಜನರನ್ನು ಒಂದು ಗೋಡಿಸುವ ಸಾಧನವಾಗಿದೆ ಈ ಹಿನ್ನೆಲೆಯಲ್ಲಿ ವಿಪ್ರ ಸಮಾಜ ಸಂಘಟನೆ ಆಗಬೇಕೆಂದು ತಿಳಿಸಿದರು. ಬೆಳಿಗ್ಗೆ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ ಅಷ್ಟೋತ್ತರ ಪಾರಾಯಣ ಭಜನೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಶಂಕರಾಚಾರ್ಯರ ಉತ್ಸವ ಮೂರ್ತಿಯ ಹಾಗೂ ಪಾದು ಕೆ ಗಳ ತೊಟ್ಟಿಲು ಉತ್ಸವ ಮತ್ತಿತರ ಕಾರ್ಯಕ್ರಮಗಳನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಶಕುಂತಲಾ ಹಾಗೂ ಕವಿತಾ. ದಿಗ್ಗಾವಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಜಗನ್ನಾಥ ಅಳವಂಡಿ ಕರ್. ಕಾಶೀನಾಥ್ ಜೋಶಿ. ಕೆವಿ ಜೋಶಿ ಕೃಷ್ಣ ಗೋಪಾಲ್ ಭಟ್ ರ್ಮಾಧಿಕಾರಿ. ರಾಘವೇಂದ್ರ ಅಳವಂಡಿ ಕರ್ ವಿನಾಯಕ ಭಟ್ ವೈದ್ಯ. ಭೀಮ್ ಭಟ್ ಕರ್ಮುಡಿ. ದತ್ತಾತ್ರೇಯ ಗಾಣಿಕರ್ ಚಿತ್ರಗಾರ ಸುವರ್ಣ. ಗಾಯತ್ರಿ ಅಳವಂಡಿ ಕರ್. ಶೇಷಗಿರಿ ಗಡಾದ್. ಅನಿಲ್ ಅಳವಂಡಿ ಸೇರಿದಂತೆ ಶಾರದಾ ಶಂಕರ ಭಕ್ತ ಭಜನಾ ಮಂಡಳಿ. ಸತ್ಯದೇವೇಶ ಭಜನಾ ಮಂಡಳಿ. ಯೋಗೀಶ್ವರ ಯಾಜ್ಞವಲ್ಕ್ಯ ಭಜನಾ ಮಂಡಳಿ ಗಂಗಾದೇಶ್ವರ ಮಹಿಳಾ ಭಜನಾ ಮಂಡಳಿ ಸೇರಿದಂತೆ ಅಪಾರ ಆಸ್ತಿಕ ಬಂಧುಗಳು ಪಾಲ್ಗೊಂಡಿದ್ದರು.

Total Views: 0
Share This Article