Folklore worked as a medium - Jeevansaba binna
ಕೊಪ್ಪಳ : ಜಾನಪದ ಹಿಂದಿನ ಕಾಲದಲ್ಲಿ ಸುದ್ದಿ ಮಾಧ್ಯಮದ ಪಾತ್ರವನ್ನು ವಹಿಸುತ್ತಿತ್ತು. ಜಾನಪದ ಕಲಾವಿದರು ಯಾವ ವಿಶ್ವವಿದ್ಯಾಲಯದಲ್ಲಿ ಓದದಿದ್ದರೂ ತಮ್ಮ ಬದುಕಿನ ಸಮಕಾಲೀನ ನೋವುಗಳನ್ನು, ಸಂತಸಗಳನ್ನು ಹಾಡಾಗಿ, ಒಗಟಾಗಿ, ಒಡಪಾಗಿ, ಗೀತೆಯಾಗಿ ಜಾನಪದ ಒಂದು ಮಾಧ್ಯಮವಾಗಿ ಕೆಲಸ ಮಾಡಿದೆ ಎಂದು ಜಾನಪದ ಕಲಾವಿದರು ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಡಾ. ಜೀವನಸಾಬ ಬಿನ್ನಾಳ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಅಳವಂಡಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜರುಗಿದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಹನ ಮಾಧ್ಯಮವಾಗಿ ಜನಪದ ಸಾಹಿತ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಕೊಪ್ಪಳದ ಹಿರಿಯ ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ ಅವರು ಮಾತನಾಡಿ, ಹಿಂದೆ ಯಾವುದೇ ತಾಂತ್ರಿಕ ಸೌಲಭ್ಯಗಳಿರುವ ಸಂದರ್ಭದಲ್ಲಿ ಪತ್ರಿಕೆಗಳನ್ನು ಹೊರತರುವುದು ಸಾಹಸದ ಆದರೂ ಅಂದಿನ ಪತ್ರಕರ್ತರು ಬಹಳ ಸಮರ್ಥವಾಗಿ ನಿಭಾಯಿಸಿರುವುದು ಸಂತಸದ ಸಂಗತಿ. ಪತ್ರಿಕೆಗಳು ನಾಡನ್ನು ಕಟ್ಟುವ, ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿವೆ. ಪತ್ರಕರ್ತರು ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಾರೆ.
ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪೂರ ಅವರು ಮಾತನಾಡುತ್ತಾ, ಅಳವಂಡಿ ಗ್ರಾಮವು ಸ್ವಾತಂತ್ರ ಹೋರಾಟದ ನೆಲವಾಗಿದೆ. ಈ ಗ್ರಾಮ ಸಾಂಸ್ಕöÈತಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ. ಈ ಗ್ರಾಮದ ಯಾವುದಾದರೂ ಒಂದು ಮನೆಗೆ ಕಲ್ಲು ಎಸೆದರೆ ಆ ಕಲ್ಲು ಯಾವುದಾದರೂ ಒಬ್ಬ ಶಿಕ್ಷಕನ ಮನೆಗೆ ಬೀಳುತ್ತದೆ. ಅಷ್ಟೊಂದು ಶಿಕ್ಷಕರು ಈ ಗ್ರಾಮದಲ್ಲಿರುವುದು ಅಭಿಮಾನದ ಸಂಗತಿ. ಪತ್ರಕರ್ತನ ಧ್ವನಿ ಯಾವಾಗಲೂ ಸತ್ಯದ ಕಡೆ ಇರುತ್ತದೆ. ಸಾರ್ವಜನಿಕರು, ಸಮಾಜ ಆ ಧ್ವನಿಯನ್ನು ಬೆಂಬಲಿಸುವ ಕೆಲಸ ಮಾಡಬೇಕಿದೆ ಎಂದರು.
ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಇಂದು ಮೂಲ ಜಾನಪದ ಸಾಹಿತ್ಯ ಕಣ್ಮರೆಯಾಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಮಕ್ಕಳು ಶಿಶುಪ್ರಾಸಗಳನ್ನು ರಚಿಸಿ ಅವುಗಳನ್ನು ರಾಗಬದ್ಧವಾಗಿ ಹಾಡುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳುವುದರ ಜೊತೆಗೆ ಚುಟುಕುಗಳನ್ನು ಹೇಳಿ, ಜಾನಪದ ಶಿಶುಪ್ರಾಸಗಳನ್ನು ಹೇಳುವುದರ ಮೂಲಕ ಸಭಿಕರನ್ನು ರಂಜಿಸಿದರು.
ಹಿರಿಯ ಪತ್ರಕರ್ತರಾದ ಜಿ.ಎಸ್ .ಗೋನಾಳ ಮಾತನಾಡುತ್ತಾ, ವಿದ್ಯಾರ್ಥಿಗಳು ನಾಳಿನ ಭವ್ಯ ಪ್ರಜೆಗಳು. ಬಡತನ, ಹಸಿವು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ. ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶಪ್ರಾಯವಾಗುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕöÈತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಹಿರಿಯ ಪತ್ರಕರ್ತರಾದ ಪ್ರಮೋದ ಕುಲಕರ್ಣಿ. ರವೀಂದ್ರ ವಿ.ಕೆ., ಸಾಹಿತಿಯಾದ ಷಣ್ಮುಖಯ್ಯ ತೋಟದ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಫಕೀರಪ್ಪ ಚೌಡಕಿ, ವೈದ್ಯರಾದ ಎಂ. ಆರ್ .ಕುಲಕರಣಿ, ಹಿರಿಯರಾದ ಮಹಾಂತೇಶ ಸಿಂದೋಗಿ, ಮಲ್ಲಪ್ಪ ಬೆಣಕಲ್ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪೂಜ್ಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಿದ್ದೇಶ್ವರಮಠ ಅಳವಂಡಿ ಇವರು ಸಾನಿಧ್ಯ ವಹಿಸಿ ಮಾತನಾಡುತ್ತಾ, ಪತ್ರಕರ್ತರು ನಿಸ್ವಾರ್ಥತೆಯಿಂದ ಸುದ್ದಿಯನ್ನು ಮಾಡಿ ಜನಸಾಮಾನ್ಯರಿಗೆ ತಲುಪಿಸುವ ಪವಿತ್ರವಾದ ಕೆಲಸ ಮಾಡುತ್ತಾರೆ. ಪತ್ರಿಕೆಗಳು ಈ ನಾಡಿನಲ್ಲಿ ಸಾಂಸ್ಕöÈತಿಕ, ಶೈಕ್ಷಣಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತವೆ ಎಂದರು.
ಭುಜಂಗಸ್ವಾಮಿ ಇನಾಮದಾರ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕರ ಕಲರವ ತಂಡದ ಬೀರಪ್ಪ ಅಂಡಗಿ ಚಿಲವಾಡಗಿ, ಮಲ್ಲಪ್ಪ ಗುಡದಣ್ಣವರ್, ಕಾಶಿನಾಥ ಸಿರಿಗೇರಿ, ಶರಣಪ್ಪ ರಡ್ಡೇರ, ಚಂದ್ರು ಅವಳಣ್ಣವರ್, ಸುರೇಶ ಕಂಬಳಿ, ಹನುಮಂತಪ್ಪ ಕುರಿ, ಯಲ್ಲಪ್ಪ ಹರನಾಳಗಿ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಪಡೆದ ಮತ್ತು ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಅಳವಂಡಿ ಹೋಬಳಿ ಪತ್ರಕರ್ತರಾದ ಸುರೇಶ ಸಂಗರೆಡ್ಡಿ, ಬಿ.ಎನ್. ಹೊರಪೇಟಿ. ಜುನಸಾಬ್ ವಡ್ಡಟ್ಟಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸೃಷ್ಟಿ ಶೆಟ್ಟರ್ ಪ್ರಾರ್ಥಿಸಿದರು. ನೀಲಪ್ಪ ಹಕ್ಕಂಡಿ ನಿರೂಪಿಸಿದರು. ನವೀನ ಇನಾಮದಾರ ಸ್ವಾಗತಿಸಿದರು. ಎಚ್. ಮಹಾನಂದಿ ವಂದಿಸಿದರು.