Breaking News

ಶಿಕ್ಷಕಿಗೆ ಅಶ್ಲೀಲ ಮೇಸೇಜ್ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ ಮುಖ್ಯಗುರು

The obscene message to the teacher fell at the feet of the teacher and apologized to the head teacher

ಜಾಹೀರಾತು

ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೇಸೇಜ್ ಮಾಡುತ್ತಿದ್ದ ಮುಖ್ಯಗುರು ಮೆಹಬೂಬ್ ಅಲಿ ಎಂಬಾತನಿಗೆ ಶಿಕ್ಷಕಿಯ ಸಂಬಂಧಿಕರು ಧರ್ಮದೇಟು ನೀಡಿ ತಪ್ರೊಪ್ಪಿಗೆ ಪತ್ರ ಬರೆಸಿಕೊಂಡ ಘಟನೆ ನಗರದ ಹೊರವಲಯದ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಸೋಮವಾರ ನಡೆದಿದೆ.

ತರಬೇತಿ ಶಿಕ್ಷಕಿಗೆ ದಿನನಿತ್ಯ ಅಶ್ಲೀಲ ಸಂದೇಶಗಳನ್ನು ಎಚ್‌ಎಂ ಮೆಹಬೂಬ್ ಅಲಿ ಕಳಿಸುತ್ತಿದ್ದ . ಮುಖ್ಯಗುರು ಮೆಹಬೂಬ್ ಅಲಿ ಮೇಸೇಜ್ ಮಾಡುತ್ತಿದ್ದ ಬಗ್ಗೆ ಕಿರುಕುಳಕ್ಕೊಳಗಾದ ಶಿಕ್ಷಕಿ ಮನೆಯಲ್ಲಿ ತಿಳಿಸಿದ್ದರು. ನಂತರ ಈತನ ಸಂದೇಶಗಳು ಅತಿರೇಖಕ್ಕೆ ತಲುಪಿದಾಗ. ಶಿಕ್ಷಕಿಯ ಸಂಬಂಧಿಕರು ಆಕ್ರೋಶಗೊಂಡು ಮೆಹಬೂಬ್ ಅಲಿಗೆ ಸರಿಯಾಗಿ ಬಾರಿಸಿದ್ದಾರೆ. ನಂತರ ತಪ್ರೊಪ್ಪಿಕೊಂಡ ಆತ ತಪ್ರೊಪ್ಪಿಗೆ ಪತ್ರವನ್ನು ಬರೆದು ಸಹಿ ಮಾಡಿ ಕೊಟ್ಟಿದ್ದಾನೆ.

ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿರುವ ಮುಖ್ಯ ಶಿಕ್ಷಕ ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ದುಡ್ಡು ಕೊಡುವುದಾಗಿ ಮೇಸೇಜ್ ಮಾಡಿದ್ದು ಸತ್ಯವಿರುತ್ತದೆ. ಇನ್ನು ಮುಂದೆ ಈ ತರಹದ ಮೇಸೇಜ್ ಮಾಡುವುದಿಲ್ಲ ಹಾಗೂ ಶಿಕ್ಷಕಿಗೆ ಮುಂದಿನ ದಿನಗಳಲ್ಲಿ ಶೈಕ್ಷಣಿಕ ವೃತ್ತಿಯಲ್ಲಿ ನನ್ನಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಪ್ರೊಪ್ಪಿಗೆ ಬರೆದಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

About Mallikarjun

Check Also

ವಿಶೇಷ ಚೇತನರಿಗೆ  ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ,  ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳ ವಿತರಣೆ

Distribution of motorized three-wheelers and sewing, carpentry, and laundry tools to the specially-abled ಜಮಖಂಡಿ 05-01 …

Leave a Reply

Your email address will not be published. Required fields are marked *