Breaking News

ಸ್ವಚ್ಛತೆ, ಶುಚಿತ್ವ ಕಡೆ ಗಮನಹರಿಸಿಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಸದಾನಂದ ನಾಗಪ್ಪ ನಾಯ್ಕ್ ಹೇಳಿಕೆ

Focus on cleanliness, cleanliness First Additional District and Sessions Judge Mr. Sadananda Nagappa Naik’s Statement

ಜಾಹೀರಾತು

ಗಂಗಾವತಿ : ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಜನ ಸೊಳ್ಳೆ ಕಡಿತದಿಂದ ವಿವಿಧ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ, ಪ್ರತೊಯೊಬ್ಬರೂ ಸೊಳ್ಳೆ ಸಮಸ್ಯೆಯಿಂದ ಮುಕ್ತಿ ಹೊಂದಲು ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಸಲಹೆ ನೀಡಿದರು.

ತಾಲೂಕಿನ ಆನೆಗೊಂದಿ ಗ್ರಾಮದ
ಸರಕಾರಿ ಪ್ರೌಢಶಾಲೆ ಆವರಣದಲ್ಲಿ
ತಾಲೂಕ ಕಾನೂನು ಸೇವಾ ಸಮಿತಿ, ಗಂಗಾವತಿ. ವಕೀಲರ ಸಂಘ, ಗಂಗಾವತಿ, ಗ್ರಾಮ ಪಂಚಾಯತ್ ಆನೆಗುಂದಿ ಇತರೆ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹಿ ಸೇವಾ 2024ರ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನದಡಿಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ,ಗಂಗಾವತಿ ಇವರಿಂದ ಬುಧವಾರ ಆಯೋಜಿಸಿದ್ದ “ಆನೆಗುಂದಿ ಗ್ರಾಮ ದತ್ತು ಸ್ವೀಕಾರ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂವಿಧಾನ ಹಕ್ಕುಗಳ ಜೊತೆ ಕರ್ತವ್ಯಗಳನ್ನು ನೀಡಿದ್ದು, ನಮ್ಮ ಕರ್ತವ್ಯಗಳನ್ನು ಎಲ್ಲರೂ ಪಾಲಿಸಬೇಕು. ಆನೆಗೊಂದಿ ಪರಂಪರೆ ಕಾಪಾಡಿಕೊಳ್ಳುವುದು ಎಲ್ಲರ ಹಕ್ಕಾಗಿದೆ. ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ವಹಿಸಬಾರದು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ್ ಗಾಣಿಗೇರ ಅವರು ಮಾತನಾಡಿ, ಗ್ರಾಮದಲ್ಲಿ 570 ಕ್ಕೂ ಹೆಚ್ಚು ಸಮಸ್ಯೆಗಳು ಇರುವುದು ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿಗಳು ಅಧ್ಯಯನ ಮಾಡಿ, ಮಾಹಿತಿ ನೀಡಿದ್ದರಿಂದ ಗ್ರಾಮವನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದರು.

ಹಾಸ್ಯ ಕಲಾವಿದ ಪ್ರಾಣೇಶ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ್ ಶಾಸ್ತ್ರಿ ಅವರ ಆದರ್ಶ ಗುಣಗಳನ್ನು ಎಲ್ಲರೂ ಪಾಲಿಸಬೇಕು. ಪಾಲಕರು ಮಕ್ಕಳಲ್ಲಿ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ಸಾಹಿತ್ಯ ಓದುವ ಅಭ್ಯಾಸ ಬೆಳೆಸಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಅವರು ಮಾತನಾಡಿದರು. ಪ್ರಾಸ್ತಾವಿಕವಾಗಿ ವಕೀಲರ ಸಂಘದ ಕಾರ್ಯದರ್ಶಿಗಳಾದ ಎಚ್ ಎಂ ಮಂಜುನಾಥ ಅವರು ಮಾತನಾಡಿದರು.

ಶ್ರಮದಾನ : ಆನೆಗೊಂದಿ ಗ್ರಾಮದ ಕೃಷ್ಣದೇವರಾಯ ವೃತ್ತದ ಬಳಿ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಎಲ್ಲ ಅಧಿಕಾರಿಗಳು ಹಾಗೂ ಗಂಗಾವತಿ ಚಾರಣ ಬಳಗ,  ಕಿಷ್ಕಿಂದ ಯುವ ಚಾರಣ ಬಳಗದವರು ಸ್ವಚ್ಛತಾ ಕಾರ್ಯ ಕೈಗೊಂಡರು. ನಂತರ ಗ್ರಾಪಂ ಸ್ವಚ್ಛತಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಿದರು.

ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ದಾಸೋಹರತ್ನ ಬ್ರಹ್ಮನಂದ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.
ಗ್ರಾಪಂ ಅಧ್ಯಕ್ಷರಾದ ಮಹಾದೇವಿ ತಿಮ್ಮಪ್ಪ ಬಾಳೆಕಾಯಿ ಅವರು ಅಧ್ಯಕ್ಷತೆ ವಹಿಸಿದ್ದರು.

ರಾಜವಂಶಸ್ಥರಾದ ಲಲಿತರಾಣಿ ಶ್ರೀರಂಗದೇವರಾಯಲು, ರಾಜ ಹರಿಹರ ದೇವರಾಯಲು, ರತ್ನಶ್ರೀ ಕೃಷ್ಣದೇವರಾಯ, ಕಿಷ್ಕಿಂದ ಟ್ರಸ್ಟ್ ಕಾರ್ಯದರ್ಶಿ ಡಾ.ಎ.ಸೋಮರಾಜು, ಹಾಸ್ಯ ಕಲಾವಿದ ಪ್ರಾಣೇಶ, ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ, ಡಿವೈಎಸ್ಪಿ ಸಿದ್ಧಲಿಂಗಪ್ಪಗೌಡ ಪೊಲೀಸ ಪಾಟೀಲ, ಗಂಗಾವತಿ ಚಾರಣ ಬಳಗ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ, ವಕೀಲರ ಸಂಘದ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ, ತಾಪಂ ಇಓ ಲಕ್ಷ್ಮೀದೇವಿ ಹಾಗೂ ತಾಲೂಕು ಅನುಷ್ಠಾನ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಸದಸ್ಯರು ಇದ್ದರು.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.