Breaking News

ಹಳೆಯ ಕೃಷಿ ಸಾಲವನ್ನು ಕಟ್ಟುಬಾಕಿ ದಾರರನ್ನಾಗಿ NPA ಮಾಡಿ OTS ಸೌಲತ್ತ ವದಗಿಸಲು ಮನವಿ

Appeal to OTS to convert old agricultural loan as defaulter into NPA




ಬೆಳಗಾವಿ : ಹಿಂದಿನ ಕಾರ್ಪೋರೇಶನ್ ಬ್ಯಾಂಕ್ 15 ವರ್ಷಗಳಷ್ಟು ಹಳೆಯ ಕೃಷಿ ಸಾಲವನ್ನು ಕಟಬಾಕಿಯಾಗಿದ್ದರೂ ಆಗಿನಿಂದಇಂದಿನ ವರೆಗೂ ಈಗಿನ ಯೂನಿಯನ್ ಬ್ಯಾಂಕ್ ಚಾಲ್ತಿ ತೋರಿಸುತ್ತಾ NPA ಮಾಡದೆ ರೈತರನ್ನು OTS ಸೌಲತ್ತಿನಿಂದ ವಂಚಿಸುತ್ತಾ ಬಂದಿರುತ್ತದೆ .
ಈ ರೀತಿಯ ಹಳೆಯ ಕೃಷಿ ಸಾಲಗಳನ್ನು ಇನ್ನಿತರ ಎಲ್ಲಾ ಬ್ಯಾಂಕ್ ಗಳು ಈಗಾಗಲೇ NPA ಮಾಡಿ OTS ಮೂಲಕ ಅಸಲಿನಲ್ಲಿ ಶೇ30 ರಿಂದ 60ರ ವರೆಗೆ ತುಂಬಿಸಿಕೊಂಡು ಸಾಲಮುಕ್ತ ಮಾಡಿರುತ್ತವೆ.
ಅದೇ ರೀತಿ ಹಿಂದಿನಕಾರ್ಪೋರೇಶನ್ ಬ್ಯಾಂಕ್ ನಿಂದ ಪಡೆದ ಕೃಷಿ ಸಾಲವನ್ನು ಈಗಿನ ಯೂನಿಯನ್ ಬ್ಯಾಂಕ್ NPA ಮಾಡಿ OTS ಸೌಲಭ್ಯ ನೀಡಿದರೆ ಅಸಲಿ ನಲ್ಲಿ ಕಡಿತ ಗೊಳಸಿದರೆ ನಾವೆಲ್ಲರೂ ಬರಣಾ ಮಾಡಲು ಸಿದ್ದರಿರುವದಾಗಿ ರೈತ ಸಂಘದ ಅಧ್ಯಕ್ಷ ಶ್ರೀ ಮಾಹಾಂತೇಶ ಕಮತ ಹಾಗು “ಮಲಪ್ರಭೆ ಮಡಿಲು”ಹೋರಾಟ ವೇದಿಕೆ ಮುಖ್ಯ ಸಂಘಟಿಕ ಶ್ರೀಬಿ.ಎಂ. ಚಿಕ್ಕನಗೌಡರ ನೇತೃತ್ವದಲ್ಲಿ ಬೆಳಗಾವಿ ಪ್ರಾದೇಶಿಕ ಮುಖ್ಯ ಕಚೇರಿಗೆರೈತರೆಲ್ಲ ವ್ಯವಸ್ಥಾಪಕರಾದ ಶ್ರೀಮತಿಆರತಿ ರವರನ್ನು ಬೇಟಿಮಾಡಿ ಚರ್ಚಿಸಿ ಮನವಿಯನ್ನು ಅರ್ಪಿಸಿದರು.
ಪ್ರಾದೇಶಿಕ ವ್ಯ‌ವಸ್ಥಪಕರಾದ ಶ್ರೀಮತಿ ಆರತಿಯವರು “ಹಂತಹಂತವಾಗಿ ಎಲ್ಲಾ ಕಟಬಾಕಿಯಾಗಿರವ ಕೃಷಿ ಸಾಲವನ್ನು NPA ಮಾಡಿ OTS ಮೂಲಕ ಬಗಿಹರಸಲಾಗು ವದೆಂದು ತಿಳಿಸಿದ್ದಾರೆ.
ಉದ್ದಿಮೆದಾರರ ಸಾಲವನ್ನು ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ NPA ಮಾಡಿ OTS ಮೂಲಕ 10ಲಕ್ಷ ಕೋಟಿಗೂ ಹೆಚ್ಚು ಹಣ ಅಸಲು ಬಡ್ಡಿ ಸಮೇತಸಾಲ ಮುಕ್ತ ಮಾಡಿದ್ದು ಯೂನಿಯನ್ ಬ್ಯಾಂಕ್ ಕೃಷಿ ಸಾಲವೂ ಅವದಿ ಮೀರಿಕಟಬಾಕಿ ಆಗಿದ್ದರೂ NPA ಮಾಡದೆ OTS ಸೌಲಭ್ಯ ನೀಡದೆ ಪಡೆದ ಸಾಲಕ್ಕೆ ಬಡ್ಡಿಯನ್ನು ಸೇರಿಸಿ ಚಾಲ್ತಿಸಾಲವೆಂದು ತೋರಿಸುತ್ತಾ ರೈತರಿಗೆ ವಂಚಿಸುತ್ತಿದೆ ಎಂದು ವೇದಿಕೆಯ ಪ್ರಮುಖ ಬಿ.ಎಂ.ಚಿಕ್ಕನಗೌಡರ ಆಗ್ರಹಿಸಿದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.