Two centenarian women of Basapattanagram were felicitated under the chairmanship of Tehsildar Manjunath.
ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಇಬ್ಬರು ಶತಾಯುಷಿ ಮಹಿಳೆಯರನ್ನು ತಹಸೀಲ್ದಾರರಾದ ಶ್ರೀ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಬಸಾಪಟ್ಟಣ ಗ್ರಾಮದ ಗಂಗಮ್ಮ (106), ಮಾರೆಮ್ಮ ((103) ಅವರಿಂದ ಕೇಕ್ ಕತ್ತರಿಸಿ ವಿಶ್ವ ಹಿರಿಯರ ದಿನ ಆಚರಿಸಲಾಯಿತು. ನಂತರ ಜಿಲ್ಲಾಡಳಿತದಿಂದ ನೀಡಿದ್ದ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು.
ಖುಷಿಗೊಂಡ ಗ್ರಾಮಸ್ಥರು : ತಾಲೂಕು ಆಡಳಿತದ ಅಧಿಕಾರಿಗಳು ಮನೆಗೆ ಬಂದು ಶತಾಯುಷಿ ಅವರನ್ನು ಸನ್ಮಾನಿಸಿದ್ದಕ್ಕೆ ಶತಾಯುಷಿ ಅಜ್ಜಿ ಅವರ ಕುಟುಂಬಸ್ಥರು ಖುಷಿಗೊಂಡರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀದೇವಿ, ಉಪ ತಹಸೀಲ್ದಾರರು,
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ವಿದ್ಯಾವತಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಪಂ, ತಾಪಂ ಸಿಬ್ಬಂದಿಗಳು, ಎನ್ ಆರ್ ಎಲ್ ಎಂ, ಆಶಾ, ಅಂಗನವಾಡಿ ಕಾರ್ಯಕರ್ತರು, ಸ್ನೇಹ ಸಂಸ್ಥೆ ಸದಸ್ಯರು ಇದ್ದರು.