Breaking News

ಸಂಸದರ ಕಾರ್ಯದರ್ಶಿ ಶ್ರೀನಿವಾಸಜೋಶಿಯವರಿಗೆ ಸನ್ಮಾನ.

Honors to MP Secretary Srinivasa Joshi.

ಜಾಹೀರಾತು

MP Secretary Srinivasa Joshi was felicitated.

ಸಂಸದ ಕಾರ್ಯದರ್ಶಿ ಶ್ರೀನಿವಾಸ ಜೋಶಿ ಅವರನ್ನು ಸನ್ಮಾನಿಸಲಾಯಿತು.

ಗಂಗಾವತಿ: ಹೃದಯ ಆರೋಗ್ಯ ದಿನವಾದ ಶುಕ್ರವಾರದಂದು ನಗರದ ಔಷಧೀಯ ಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿದ ಸಂಸದ ಕರಡಿ ಸಂಗಣ್ಣ ಅವರ ಸರಕಾರಿ ಕಾರ್ಯದರ್ಶಿ ಶ್ರೀನಿವಾಸ ಜೋಶಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸರಳ-ಸಜ್ಜನ,ಮೃದು ಭಾಷಿ,ಸಾತ್ವಿಕ ವ್ಯಕ್ತಿತ್ವದ ಶ್ರೀನಿವಾಸ ಜೋಶಿಯವರು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ,ಸಾರ್ವಜನಿಕ ಸೇವೆಯಿಂದ ದೂರ ಇರಬಾರದೆಂದು ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಜೋಶಿಯವರಲ್ಲಿ ವಿನಂತಿಸಿದರು.ಸಕಾರಾತ್ಮಕವಾಗಿ ಸ್ಪಂದಿಸಿದ ಜೋಶಿಯವರು ಅಭಿವೃದ್ಧಿ ಕೆಲಸಗಳಿಗಾಗಿ ಸಂಸದರೊಂದಿಗೆ ಸಹಕರಿಸುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಫ಼ಾರ್ಮಸಿ ಕಾಲೇಜ್ ಪ್ರಿನ್ಸಿಪಾಲ್ ಮಂಜುನಾಥ ಬೂದಗುಂಪಾ,ಔಷಧ ವ್ಯಾಪಾರಿಗಳಾದ ಚಂದ್ರಶೇಖರ ಹೇರೂರ, ಹನುಮ ರೆಡ್ಡಿ, ಪಾಂಡುರಂಗ ಜನಾದ್ರಿ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ನಿರ್ದೇಶಕ ಶರಣಗೌಡ ಮಾಲಿ ಪಾಟೀಲ್, ನಗರ ಸಭಾ ಸದಸ್ಯರಾದ ಮನೋಹರ ಹಿರೇಮಠ, ನವೀನ ಕುಮಾರ ಮಾಲಿ ಪಾಟೀಲ್,ವಾಸುದೇವ ನವಲಿ,ಮಾಜಿ ಅಧ್ಯಕ್ಷರಾದ ರಾಘವೇಂದ್ರ ಶ್ರೇಷ್ಟಿ ಮುಂತಾದವರು ಹಾಜರಿದ್ದರು.

ವಿಶ್ವ ಫ಼ಾರ್ಮಸಿಸ್ಟ ಡೇ ಅಂಗವಾಗಿ ನಡೆದ ಅಂದಿನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನ ಔಷಧ ವ್ಯಾಪಾರಿಗಳು ಪಾಲ್ಗೊಂಡಿದ್ದರು.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.