Breaking News

ಜಿಲ್ಲಾ ಅಮೇಚುರ್ ನೆಟ್‌ಬಾಲ್ ಅಸೋಸಿಯೇಷನ್‌ಗೆ ಆಯ್ಕೆ

Elected to District Amateur Netball Association

ಜಾಹೀರಾತು
ಜಾಹೀರಾತು


ಕೊಪ್ಪಳ: ಕರ್ನಾಟಕ ಅಮೇಚುರ್ ನೆಟ್‌ಬಾಲ್ ಅಸೋಷಿಯೇಷನ್ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಅಶ್ಫಕ್ ಅಹ್ಮದ್ ಮತ್ತು ಪ್ರಧಾನ ಕಾರ್ಯದರ್ಶಿ ಗಿರೀಶ್ ಸಿ. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು, ನೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಒಲಿಂಪಿಕ್ ಅಸೋಷಿಯೇಷನ್ ಸಂಯೋಜನೆ ಹೊಂದಿರುವ ರಾಜ್ಯಮಟ್ಟದ ಸಂಸ್ಥೆಯನ್ನು ಜಿಲ್ಲೆಯಲ್ಲಿ ಬೆಳೆಸಲು, ಕ್ರೀಡೆಯಲ್ಲಿ ಸಾಧನೆ ಮಾಡಲು ನೂತನ ಸಮಿತಿ ನೇಮಿಸಿದೆ. ಜಿಲ್ಲಾ ಅಧ್ಯಕ್ಷರನ್ನಾಗಿ ಅಬ್ದುಲ್ ರಜಾಕ್ ಟೇಲರ್ ಹನುಮಸಾಗರ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಉಪಾಧ್ಯಕ್ಷರಾಗಿ ಮೌನೇಶ ವಡ್ಡಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಹಂಚಿನಾಳ ಗಂಗಾವತಿ ಅವರನ್ನು ಆಯ್ಕೆ ಮಾಡಲಾಗಿದ್ದು ಉಳಿದ ಪದಾಧಿಕಾರಿಗಳನ್ನು ನೂತನ ಸಮಿತಿ ಆಯ್ಕೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಮೊದಲ ಸೀನಿಯರ್ ಸ್ಟೇಟ್ ಮಿಕ್ಸೆಡ್ ನೆಟ್‌ಬಾಲ್ ಚಾಂಪಿಯನ್‌ಶಿಪ್ ಅನ್ನು ಸೆಪ್ಟೆಂಬರ್ ೨೨ ರಂದು ಬೆಂಗಳೂರಿನ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿ ಸ್ಟೇಡಿಯಂನಲ್ಲಿ ನಡೆಸಲಿದೆ, ರಾಜ್ಯದ ಅನೇಕ ಜಿಲ್ಲೆಯ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಜಿಲ್ಲೆಯ ಆರು ಜನ ಮಹಿಳೆಯರು ಮತ್ತು ಆರು ಜನ ಪುರುಷರ ತಂಡ ಇದರಲ್ಲಿ ಭಾಗವಹಿಸಲಿದೆ.
ಏಷಿಯನ್, ಓಲಂಪಿಕ್, ಸ್ಕೂಲ್ ಗೇಮ್, ದಸರಾದಲ್ಲಿ ಇರುವ ನೆಟ್‌ಬಾಲ್ ಅನ್ನು ಜಿಲ್ಲೆಯಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ, ಅದಕ್ಕಾಗಿ ಮಹಿಳೆ ಮತ್ತು ಪುರುಷರ ತಂಡಗಳನ್ನು ಕಟ್ಟಿ ತರಬೇತುಗೊಳಿಸಲಾಗುವದು. ನೂತನ ಸಮಿತಿಯ ಪದಗ್ರಹಣ ಮತ್ತು ನೆಟ್‌ಬಾಲ್ ಪುರುಷ ಮತ್ತು ಮಹಿಳೆಯರ ಆಹ್ವಾನಿತ ಕಪ್ ಸ್ಪರ್ಧೆ ಶೀಘ್ರ ಏರ್ಪಡಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.