Police operation arrests kidnappers from Maharashtra
ಸಿಂಧನೂರು,ಅ 2:ಮಹಾರಾಷ್ಟ್ರ ಹಾಗೂ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಮಹಾರಾಷ್ಟ್ರ ಮೂಲದ ಇಬ್ಬರು ಅಪಹರಣಕಾರರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಹಣಕ್ಕಾಗಿ ಮಹಾರಾಷ್ಟçದಿಂದ ನಾಲ್ವರು ವಿದ್ಯಾರ್ಥಿಗಳನ್ನು ಕಳೆದ ನಾಲ್ಕೈದು ದಿನಗಳಿಂದ ಅಪಹರಣ ಮಾಡಿಕೊಂಡು ಬಂದ ತಾಲ್ಲೂಕಿನ ಕುನ್ನಟಗಿ ಕ್ಯಾಂಪ್‌ನಲ್ಲಿ ಇರಿಸಲಾಗಿದ್ದು, ಮಹಾರಾಷ್ಟç ರಾಜ್ಯದ ಪೊಲೀಸರು ಹಾಗೂ ಸಿಂಧನೂರು ಗ್ರಾಮೀಣ ಪೊಲೀಸರು ಅಪರಹಣಕ್ಕೊಳಗಾದ ನಾಲ್ವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಪುನಾ ಪಟ್ಟಣದವರಾದ ಓಂಕಾರ. ಕೃಷ್ಣ. ಶುಭಂ ಪಾಂಡೆ, ಸ್ವಂಪ್ನಿ ಪಾಟೀಲ್ ಅಪಹಣಕ್ಕೊಳಗಾದ ನಾಲ್ವರು ವಿದ್ಯಾರ್ಥಿಗಳಾಗಿದ್ದಾರೆ. ಇವರನ್ನು ಅಪಹರಣ ಮಾಡಿ ಆರೋಪಿಗಳಾದ ದತ್ತು ಹಾಗೂ ರಾಮು ಸೇರಿದಂತೆ ನಾಲ್ವರಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.