The cooperation of local associations and organizations is necessary for the success of the meeting with the leaders of the district associations and organizations on the background and outlook of the Gokak movement; Nitish K
ರಾಯಚೂರು,ಅ.01,:- ಇದೇ ಅಕ್ಟೋಬರ್ 05ರಂದು ಕಲಬುರಗಿ ವಿಭಾಗ ಮಟ್ಟದ ಗೋಕಾಕ್ ಚಳವಳಿಯ ಹಿನ್ನೋಟ ಮತ್ತು ಮುನ್ನೋಟ ಸಮಾವೇಶವನ್ನು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಂಘ-ಸಂಸ್ಥೆಗಳಮುಖಂಡರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಅವರು ಕರೆ ನೀಡಿದರು.
ಅವರು ಅ.01ರ ಮಂಗಳವಾರದAದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಸಂಭ್ರಮ-50ರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಂಗವಾಗಿ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಸಮಾವೇಶÀದ ಕುರಿತು ಜಿಲ್ಲೆಯ ಸಂಘ-ಸಂಸ್ಥೆಗಳಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಸಂಘ-ಸಂಸ್ಥೆಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಮಾವೇಶದ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮುದಾಯಕ್ಕೆ ಗೋಕಾಕ್ ಚಳವಳಿಯ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯ ಆಗಬೇಕಾಗಿದೆ. ಗೋಕಾಕ್ ಚಳವಳಿಯಲ್ಲಿ ಜಿಲ್ಲೆಯಿಂದ ಅನೇಕ ಹೋರಾಟಗಾರರು ಭಾಗಿಯಾಗಿದ್ದು, ಜಿಲ್ಲೆಯ ಹೋರಾಟಗಾರರನ್ನು ಗುರುತಿಸಿ, ಅವರಿಗೆ ಗೌರವ ಸಲ್ಲಿಸಲು ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚೆಸಲಾಗುತ್ತದ ಎಂದರು.
1980ರ ದಶಕದಲ್ಲಿ ನಡೆದ ಗೋಕಾಕ ಚಳವಳಿಯನ್ನು ಕೇಂದ್ರದಲ್ಲಿರಿಸಿಕೊAಡು ಚಳವಳಿಯ ಹಿನ್ನೋಟ ಮತ್ತು ಮುನ್ನೋಟದ ಬಗೆಗೆ ಚರ್ಚಿಸುವ ಉದ್ದೇಶವನ್ನು ಸಮಾವೇಶದಲ್ಲಿ ಹೊಂದಲಾಗಿದೆ. ಈ ಚಳವಳಿಯಲ್ಲಿ ಭಾಗವಹಿಸಿದ ಅನೇಕ ಹಿರಿಯ ಹೋರಾಟಗಾರರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಕನ್ನಡ ಚಳವಳಿಯು ಮುಂದೆ ಸಾಗಬೇಕಾದ ಹಾದಿಗಳ ಬಗ್ಗೆ ಅನೇಕ ವಿಧ್ವಾಂಸರು ಬೆಳಕು ಚೆಲ್ಲಲಿದ್ದಾರೆ. ಗೋಕಾಕ ಚಳವಳಿಯನ್ನು ಮುನ್ನಡೆಸಿದ ಹಿರಿಯ ಹೋರಾಟಗಾರರನ್ನು ಈ ಸಂದAರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಈ ವೇಳೆ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಮಾತನಾಡಿ, ಸಮಾವೇಶದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ವಿದ್ಯಾರ್ಥಿಗಳು ಹಾಗೂ ಶಾಲಾ ಮತ್ತು ಕಾಲೇಜು ಶಿಕ್ಷಕರು ಭಾಗವಹಿಸಬೇಕು. ದೊಡ್ಡ ಮಟ್ಟದ ಕನ್ನಡ ಧ್ವಜ ಅನಾವರಣ ಮಾಡಬೇಕು. ಸಮಾವೇಶದ ಕೆಲಸ ಕಾರ್ಯಗಳಲ್ಲಿ ವಿವಿಧ ಕನ್ನಡಪರ ಸಂಘಟನೆಗಳನ್ನು ತೊಡಗಿಸಿಕೊಂಡು ಅವುಗಳಿಗೆ ಕೆಲಸ ಕಾರ್ಯವನ್ನು ನೀಡಬೇಕು. ಅಲ್ಲದೆ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ವಿವಿಧ ಸಮಿತಿಗಳ ನೇಮಕ: ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸ್ವಾಗತ ಸಮಿತಿ, ವಸತಿ ಸಮಿತಿ, ಊಟೋಪಚಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿ ಸಮಿತಿ, ಸಾರಿಗೆ ಸಮಿತಿ, ವಿಚಾರ ಸಂಕೀರ್ಣ, ಪ್ರಚಾರ ಸಮಿತಿ, ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ಸಮಿತಿ, ವಿದ್ಯುತ್ ಮತ್ತು ಲೈಟಿಂಗ್ ಸಮಿತಿ, ತುರ್ತು ಸೇವಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ನೇಮಕ ಮಾಡಿದ್ದು, ಸಮಿತಿಯ ಎಲ್ಲಾ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ ಎಂದರು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕರಾಮ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹಾಗೂ ಜಿಲ್ಲೆಯ ವಿವಿಧ ಸಂಘ-ಸAಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದರು.