This is the district tour of Raichur district of Chief Minister on 04th and 5th
ರಾಯಚೂರು,ಅ.01,(:- ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇದೇ 2024ರ ಅಕ್ಟೋಬರ್ 4 ಹಾಗೂ 5ರಂದು ರಾಯಚೂರು ಜಿಲೆಯ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅವರ ಪ್ರವಾಸದ ವಿವರ ಇಂತಿದೆ.
ಅವರು ಅ.04ರ ಶುಕ್ರವಾರ ಬೆಳಿಗ್ಗೆ 11.5ಗಂಟೆಗೆ ಕೊಪ್ಪಳ ಜಿಲ್ಲೆಯ ಗಿಣಿಗೆರಾ ಏರ್‌ಸ್ಟಿçಪ್ ನಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಜಿಲ್ಲೆಯ ಸಿಂಧನೂರು ನಗರಕ್ಕೆ ಆಗಮಿಸಲಿದ್ದಾರೆ.
ಮಧ್ಯಾಹ್ನ 12.15ಗಂಟೆಗೆ ಸಿಂಧನೂರು ನಗರದ ದಸರಾ ಮಹೋತ್ಸವ ಆಚರಣೆ ಮತ್ತು ಕಲ್ಯಾಣ ಸೌಹಾರ್ಧ ನಡೆ ಕಾರ್ಯಕ್ರಮ ಹಾಗೂ ಸಿಂಧನೂರು ನಗರದಿಂದ ಕಲ್ಮಲಾ ಜಂಕ್ಷನ್ ವರೆಗೆ 1635 ಕೋಟಿ ರೂ.ಗಳ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಗುರೆಬಾಳ ಕ್ಯಾಂಪ್‌ನಿAದ ಗಾಂಧಿನಗರ ರಸ್ತೆ ನಿರ್ಮಾಣ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಲಿದ್ದಾರೆ.
ಅ.05ರ ಶನಿವಾರ ಬೆಳಿಗ್ಗೆ 10ಗಂಟೆಗೆ ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ್ದ ಕರ್ನಾಟಕ ಸಂಭ್ರಮ-50 50ರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಂಗವಾಗಿ ಗೋಕಾಕ್ ಚಳವಳಿಯ ಹಿನ್ನೋಟ ಮತ್ತು ಮುನ್ನೋಟ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12ಗಂಟೆಗೆ ಜಿಲ್ಲೆಯ ಮಾನವಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 5ಗಂಟೆಗೆ ಮಾನವಿ ಪಟ್ಟಣದಿಂದ ರಸ್ತೆ ಮಾರ್ಗವಾಗಿ ಕೊಪ್ಪಳ ಜಿಲ್ಲೆಯ ಗಿಣಿಗೆರಾ ಏರ್‌ಸ್ಟಿçಪ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.