ರೈತ ಮಕ್ಕಳ 50% ಮೀಸಲಾತಿ ಸದುಪಯೋಗಪಡಿಸಿಕೊಳ್ಳಲು ಮೇ. 4 ರಂದು ಕೃಷಿ ಪ್ರಾಯೋಗಿಕ ಪರೀಕ್ಷೆಗಾಗಿ ತರಬೇತಿ ಕಾರ್ಯಾಗಾರ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Training workshop for agricultural practical exam on May 4 to utilize 50% reservation for farmer children




ರೈತ ಮಕ್ಕಳ 50% ಮೀಸಲಾತಿ ಸದುಪಯೋಗಪಡಿಸಿಕೊಳ್ಳಲು ಮೇ. 4 ರಂದು ಕೃಷಿ ಪ್ರಾಯೋಗಿಕ ಪರೀಕ್ಷೆಗಾಗಿ ತರಬೇತಿ ಕಾರ್ಯಾಗಾರ

ಜಾಹೀರಾತು


ಬೆಂಗಳೂರು,ಮೇ.2: ಪಶುಸಂಗೋಪನೆ, ಬಿಎಸ್ಸಿ ಕೃಷಿ, ಬಿಎಸ್ಸಿ ತೋಟಗಾರಿಕೆ ಮುಂತಾದ 12 ಕೋರ್ಸುಗಳ ಪ್ರವೇಶಕ್ಕೆ ಕೃಷಿಕರ ಕೋಟಾದ ಅಡಿಯಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ 50% ಮೀಸಲಾತಿ ಲಭ್ಯವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಲು ಜಿಕೆವಿಕೆ ಬಳಿ ಇರುವ ಅರಬಿಂದೋ ಶಾಲೆಯಲ್ಲಿ ವಿಕ್ಸಿತ್47 ಅಕಾಡೆಮಿಯಿಂದ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಸನ್ನದ್ಧಗೊಳ್ಳಲು ಮೇ. 4 ರಂದು ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.
ರೈತ ಮಕ್ಕಳಿಗೆ ಲಭ್ಯವಿರುವ 50% ಮೀಸಲಾತಿ ಸೌಲಭ್ಯ ಪಡೆಯಲು ಕೆಸಿಇಟಿ ಪರೀಕ್ಷೆಯ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಬೇಕಾಗಿದೆ. ಈ ಪರೀಕ್ಷೆಗೆ ತಯಾರಾಗಲು ಮೇ 4 ರ ಸೋಮವಾರದಂದು ಅರಬಿಂದೋ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವಿಕ್ಸಿತ್47 ಅಕಾಡೆಮಿಯ ಮುಖ್ಯಸ್ಥರಾದ ತೇಜಸ್ ಎಚ್.ಎನ್. ತಿಳಿಸಿದ್ದಾರೆ.
ಈ ಕಾರ್ಯಗಾರದಲ್ಲಿ ಕೃಷಿ ಪ್ರಾಯೋಗಿಕ ಪರೀಕ್ಷೆಯ ಕುರಿತು ಸಂಪೂರ್ಣ ತರಬೇತಿ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಮುಗಿಸಿ ಅಗ್ರಿ ಪ್ರಾಕ್ಟಿಕಲ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು 8217413646 ಗೆ ಕರೆಮಾಡುವಂತೆ ಕೋರಲಾಗಿದೆ.

Total Views: 0
Share This Article