Breaking News

ಆಟೋನಗರ ಸದಸ್ಯ ರಂಗಪ್ಪ ನಿಧನಕ್ಕೆ ಸಂತಾಪ: ಭಾರಧ್ವಾಜ್

ಗಂಗಾವತಿ: ಸುಮಾರು ೫೦ ವರ್ಷಗಳಿಂದ ನೆನೆಗುದಿಗೆ ಬಿದ್ದ ಆಟೋನಗರ ನಿವೇಶನ ಹಂಚಿಕೆಗೆ ಮನನೊಂದು ಬಹಳಷ್ಟು ಜನ ಸದಸ್ಯರು ಮರಣ ಹೊಂದಿರುತ್ತಾರೆ. ಇಂದು ರಂಗಪ್ಪ ತಿಮ್ಮರಾಜು (೬೭) ಎಂಬುವವರು ಆಟೋನಗರ ನಿವೇಶನ ಹಂಚಿಕೆಯಾಗದಿದ್ದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಕಳೆದ ಹತ್ತು ದಿನಗಳಿಂದ ಹಾಸಿಗೆ ಹಿಡಿದು ನಿನ್ನೆ ಜೂನ್-೧೧ ರಂದು ಮೃತಪಟ್ಟಿದ್ದಾರೆ ಎಂದು ಆಟೋನಗರದ ಹಿರಿಯ ಸದಸ್ಯ ಭಾರಧ್ವಾಜ್ ಪ್ರಕಟಣೆಯಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.
ಆಟೋನಗರ ೧೯೮೫ ರಲ್ಲಿ ಪ್ರಾರಂಭವಾಗಿದ್ದು, ಇಂದಿನವರೆಗೂ ಸರ್ಕಾರಕ್ಕೆ ಭರಿಸಬೇಕಾದ ಎಲ್ಲಾ ಪಾವತಿಗಳನ್ನು ಪಾವತಿಸಿದ್ದರೂ ನೋಂದಣಿ ಆಗಿರುವುದಿಲ್ಲ. ಸುಮಾರು ೨೫ ಜನ ಸದಸ್ಯರು ಈಗಾಗಲೇ ಮರಣ ಹೊಂದಿದ್ದಾರೆ. ಅವರ ನಿವೇಶನಗಳು ಅವರ ಪತ್ನಿಯರ ಹೆಸರಿನಲ್ಲಿ ಮಾಡಲು ಅನೇಕ ಬಾರಿ ಹೋರಾಟ ಮಾಡಿದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ.
ಇದನ್ನೆಲ್ಲ ಗಮನಿಸಿದ ಹಿಂದಿನ ಜಿಲ್ಲಾಧಿಕಾರಿ ಕೆ.ಪಿ ಮೋಹನರಾಜ್ ೯೦ ಜನರ ಸದಸ್ಯರನ್ನು ನಿಗದಿಪಡಿಸಿ ಅವರಿಗೆ ನೋಂದಾಯಿಸಿಕೊಡಲು ನಗರಸಭೆಗೆ ಆದೇಶಿಸಿದ್ದರು. ಆದರೂ ಇಂದಿನವರೆಗೆ ಯಾವುದೆ ನೋಂದಣಿ ಆಗುತ್ತಿಲ್ಲ.
ಸರ್ಕಾರ ಕೂಡಲೇ ಆಟೋನಗರದ ಸ್ಥಿತಿಗತಿಯನ್ನು ಪರಿಶೀಲಿಸಿ ಕೂಡಲೇ ನೋಂದಾಯಿಸಲು ನಗರಸಭೆಗೆ ಆದೇಶಿಸಬೇಕೆಂದು ಕೋರಿ, ಈಗಾಗಲೇ ನಾನು ೭೮ ವರ್ಷದ ವಯೋವೃದ್ಧಿನಾಗಿದ್ದು, ಅನಾರೋಗ್ಯ ಪೀಡಿತನಾಗಿದ್ದೇನೆ. ನಾನು ಜೀವಂತವಿರುವಾಗಲೇ ನಿವೇಶನ ನೋಂದಾಯಿಸಿಕೊಡಬೇಕೆAದು ಕಳಕಳಿಯಿಂದ ಸರ್ಕಾರಕ್ಕೆ ಮನವಿ ಮಾಡಿದರು.
ನನ್ನ ಈ ಬೇಡಿಕೆಗೆ ಪತ್ರಕರ್ತರು, ಸ್ನೇಹಿತರು, ಪ್ರಗತಿಪರರು ಬೆಂಬಲಿಸಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಕೇಳಿಕೊಂಡರು.

ಜಾಹೀರಾತು

About Mallikarjun

Check Also

ಪರಿಶಿಷ್ಟ ಜಾತಿಗಳ ವಳಮೀಸಲಾತಿ ಜಾರಿ ಮಾಡಬೇಕೆಂದು ಒಳಮೀಸಲಾತಿ ಹೋರಾಟ ಸಮಿತಿ. ಒತ್ತಾಯ

Internal Reservation Struggle Committee to enforce reservation for Scheduled Castes. compulsion ವರದಿ – ಮಂಜುನಾಥ ಕೋಳೂರು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.