ಕನಕಗಿರಿ: ನವನಗರದ 171 ನಿವೇಶನದಾರರಿಗೆ ಹಕ್ಕು ಪತ್ರ ಸಲ್ಲಿಸಲು ಸೂಚನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು
Kanakagiri: Notice for 171 residents of Navanagara to submit title deeds
ಕನಕಗಿರಿ: ನವನಗರದ 171 ನಿವೇಶನದಾರರಿಗೆ ಹಕ್ಕು ಪತ್ರ ಸಲ್ಲಿಸಲು ಸೂಚನೆ

ಕೊಪ್ಪಳ, ನವೆಂಬರ್ 03, (ಕರ್ನಾಟಕ ವಾರ್ತೆ): ಕನಕಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 4ರ ಕಲಿಕೇರಿ ರಸ್ತೆ ಪಕ್ಕದಲ್ಲಿರುವ ನವನಗರದ ಸರ್ವೆ ನಂಬರ್ 144ರ ಜಮೀನಿನಲ್ಲಿ ನಿವೇಶನ ಪಡೆದಿರುವ ಫಲಾನುಭವಿಗಳು, ತಮ್ಮ ಹಕ್ಕು ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ನವೆಂಬರ್ 20 ರ ಒಳಗಾಗಿ ಕಚೇರಿಗೆ ಸಲ್ಲಿಸುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಸರ್ವೆ ನಂ. 144ರಲ್ಲಿನ ಒಟ್ಟು 4 ಎಕರೆ 08 ಗುಂಟೆ ಜಮೀನಿನಲ್ಲಿ 2004ರಲ್ಲಿ (ಅಂದಿನ ಗ್ರಾಮ ಪಂಚಾಯತಿ ಅವಧಿಯಲ್ಲಿ) ನಿವೇಶನರಹಿತರಿಗೆ ಹಂಚಿಕೆ ಮಾಡಲು ಒಟ್ಟು 171 ನಿವೇಶನಗಳನ್ನು ರಚಿಸಲಾಗಿತ್ತು. ಅಂದು ಹಕ್ಕು ಪತ್ರ ಪಡೆದಿರುವ ಫಲಾನುಭವಿಗಳು ಪರಿಶೀಲನೆಗಾಗಿ ಸರ್ಕಾರದಿಂದ ಪಡೆದ ನಿವೇಶನ ಹಕ್ಕು ಪತ್ರ ಹಾಗೂ ಸಂಬAಧಿಸಿದ ದಾಖಲಾತಿಗಳನ್ನು ನಿಗದಿತ ದಿನಾಂಕದೊಳಗೆ ಕಚೇರಿಗೆ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ, ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕನಕಗಿರಿ ಪಟ್ಟಣ ಪಂಚಾಯತಿ ಪ್ರಕಟಣೆ ತಿಳಿಸಿದೆ
Total Views: 0
ಜಾಹೀರಾತು
Share This Article
Leave a Comment