

Tanksali Hanumanthappa of the TDP elected as the new President of the Rayadurg Municipality.

ರಾಯದುರ್ಗ ಪುರಸಭೆ ನೂತನ
ಅಧ್ಯಕ್ಷರಾಗಿ ಟಿ.ಡಿ.ಪಿ.ಯ ಟಂಕಸಾಲಿ ಹನುಮಂತಪ್ಪ ಆಯ್ಕೆ
ನೂತನ ಅಧ್ಯಕ್ಷರಿಗೆ ಡಾ. ಮಂಜುನಾಥ ಕುರುಗೋಡು ಸೇರಿದಂತೆ ಗಣ್ಯರಿಂದ ಆತ್ಮೀಯ ಅಭಿನಂದನೆ
ರಾಯದುರ್ಗ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಟೌನ್ ಮುನ್ಸಿಪಾಲಿಟಿಯ ನೂತನ ಅಧ್ಯಕ್ಷರಾಗಿ ತೆಲುಗು ದೇಶಂ ಪಕ್ಷದ (ಟಿ.ಡಿ.ಪಿ.) ಮುಖಂಡರಾದ ಟಂಕಸಾಲಿ ಹನುಮಂತಪ್ಪ (ತಂದೆ ತಿಪ್ಪೇಸ್ವಾಮಿ) ಅವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಂಕಸಾಲಿ ಹನುಮಂತಪ್ಪ ಅವರನ್ನು ಕರ್ನಾಟಕದ ಪ್ರಸಿದ್ಧ ವಾಸ್ತು ತಜ್ಞರಾದ ಡಾ. ಮಂಜುನಾಥ ಕುರುಗೋಡು ಹಾಗೂ ರಾಯದುರ್ಗ ನಿವಾಸಿ ಆಂಜನೇಯ ದೊಡ್ಡಗಟ್ಟಿ ಅವರು ಆತ್ಮೀಯವಾಗಿ ಭೇಟಿ ಮಾಡಿ ಅಭಿನಂದಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಸ್ತು ತಜ್ಞ ಡಾ. ಮಂಜುನಾಥ ಕುರುಗೋಡು ಅವರು, ರಾಯದುರ್ಗ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಂಕಸಾಲಿ ಹನುಮಂತಪ್ಪ ಅವರ ಅಧಿಕಾರಾವಧಿಯಲ್ಲಿ ನಗರದ ಅಭಿವೃದ್ಧಿಗೆ ಪೂರಕವಾದ ಹಾಗೂ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಜನಪರ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿ. ನಗರದ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡಿ ಉತ್ತಮ ಆಡಳಿತ ನೀಡುವಂತಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ರಾಯದುರ್ಗದ ಶ್ರೀ ನೀಲಕಂಠ ಸ್ವಾಮಿ ದೇವಸ್ಥಾನದ ಪದಾಧಿಕಾರಿಗಳು ನೂತನ ಅಧ್ಯಕ್ಷ ಟಂಕಸಾಲಿ ಹನುಮಂತಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಶುಭಾಶಯಗಳನ್ನು ತಿಳಿಸಿದರು.



