Aralahalli: Our college is turning green. Aralahalli.

ಅರಳಹಳ್ಳಿ:ಹಸಿರಾಗುತ್ತಿರುವ ನಮ್ಮ ಕಾಲೇಜ್. ಅರಳಹಳ್ಳಿ


ಗಂಗಾವತಿ:. ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಅರಳಹಳ್ಳಿ ಗಂಗಾವತಿ ಯಲ್ಲಿ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಶಾಲೆಯ ಆವರಣದಲ್ಲಿ ಸಸಿ ಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾ ತಿಮ್ಮಣ್ಣ ನಿಲಯಪಾಲಕರಾದ ಡಾ. ಎಸ್. ವಿ. ಗೋವಿಂದಮ್ಮ(ಹೆಚ್ಚುವರಿ ಪ್ರಭಾರ)ಎಲ್ಲಾ ಉಪನ್ಯಾಸಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಸಡಗರದಿಂದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಧ್ಯಕ್ಷೀಯ ನುಡಿಗಳನ್ನು ಪ್ರಾಂಶುಪಾಲರಾದ ಶ್ರೀ ತಿಮ್ಮಣ್ಣ ಪ್ರಭಾರ ಪ್ರಾಂಶುಪಾಲರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಉರುಕುಂದಪ್ಪ ಅರ್ಥಶಾಸ್ತ್ರ ಉಪನ್ಯಾಸಕರು, ಡಾ. ಎಸ್. ವಿ. ಗೋವಿಂದಮ್ಮ (ಪ್ರಭಾರ ನಿಲಯಪಾಲಕರು) ಶ್ರೀ ಹರ್ಷದ್ ಅಲಿ ಗಣಿತ ಉಪನ್ಯಾಸಕರು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳು ಯಶಸ್ಸನ್ನು ಗಳಿಸಲು ಶಿಸ್ತು, ತಾಳ್ಮೆ ನಿರಂತರ ಅಧ್ಯಯನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿ ಹೇಳಿದರು. ಶ್ರೀ ಉರುಕುಂದಪ್ಪ ಅರ್ಥಶಾಸ್ತ್ರ ಉಪನ್ಯಾಸಕರು ಮಕ್ಕಳಿಗೆ ಬಹುಮಾನ ವಿತರಿಸಿದರು. ನಿರೂಪಣೆಯನ್ನು ಶ್ರೀ ಖಾಸಿಂಸಾಬ್ ಕನ್ನಡ ಭಾಷಾ ಉಪನ್ಯಾಸಕರು, ವಂದನಾರ್ಪಣೆಯನ್ನು ಶ್ರೀ ವೀರೇಶ್ ಆಂಗ್ಲ ಭಾಷಾ ಉಪನ್ಯಾಸಕರು ಅತ್ಯುತ್ತಮವಾಗಿ ನೆರವೇರಿಸಿ ಕೊಟ್ಟರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗನ್ನು ಹಂಚಿಕೊಂಡರು ಮತ್ತು ‘ಡಿ’ ದರ್ಜೆಯ ಸಹಾಯಕರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಪೂರ್ಣವಾಗಿ ನೆರವೇರಿಕೊಟ್ಟರು. ಎಲ್ಲರೂ ಮಕ್ಕಳೊಂದಿಗೆ ಸಿಹಿಭೋಜನವನ್ನು ಸಂತೋಷದಿಂದ ಸವಿದರು





