ವಿಕಸಿತ ಭಾರತ ಜಿ ರಾಮ್ ಜಿ’ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ರೈತರಿಗೆ  ಕುಷ್ಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕರೆ

H.Mallikarjun
H.Mallikarjun - Kalyanasiri
2 Min Read

Kushtagi Senior Assistant Director of Horticulture calls upon farmers to avail benefits of the 'Vikasita Bharat' scheme.




ವಿಕಸಿತ ಭಾರತ ಜಿ ರಾಮ್ ಜಿ’ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ರೈತರಿಗೆ  ಕುಷ್ಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕರೆ

ಜಾಹೀರಾತು


ಕೊಪ್ಪಳ ಆಗಸ್ಟ್ 07 (ಕರ್ನಾಟಕ ವಾರ್ತೆ): 2026-27ನೇ ಸಾಲಿನಲ್ಲಿ ಕುಷ್ಟಗಿ ತಾಲೂಕಿನ ಗ್ರಾಮಗಳ ಸಮಗ್ರ ಅಭಿವೃದ್ಧಿ, ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರರು ಮತ್ತು ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕ ಸದೃಢತೆ ಸಾಧಿಸಲು ಜಾರಿಯಾದ ‘ವಿಕಸಿತ ಭಾರತ ಜಿ ರಾಮ್ ಜಿ’ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಕುಷ್ಟಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶಿವಯೋಗಿ ಅವರು ಕರೆ ನೀಡಿದರು.
ಕುಷ್ಟಗಿ ತಾಲೂಕಿನ ಸಂಗನಾಳ, ಮಾಲಗಿತ್ತಿ, ಹಿರೇನಂದಿಹಾಳ, ಬಿಜಕಲ್ಲ ಹಾಗೂ ಕಿಲಾರಹಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಲಾಗಿದ್ದ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತಂತೆ ಇತ್ತೀಚೆಗೆ ಆಯಾ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಗಳಲ್ಲಿ ಅವರು ಮಾತನಾಡಿದರು.
*ವೈಯಕ್ತಿಕ ಕಾಮಗಾರಿಗಳಿಗೆ ಅವಕಾಶ:* ‘ವಿಕಸಿತ ಭಾರತ ಜಿ ರಾಮ್ ಜಿ’ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶವಿದ್ದು, ರೈತರು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು. ರಾಷ್ಟ್ರೀಯ ತೋಟಗಾರಿಕೆ ಇಲಾಖೆಯಿಂದ ಇದಕ್ಕೆ ಅಗತ್ಯ ಸೌಲಭ್ಯಗಳು ದೊರೆಯಲಿವೆ ಎಂದರು.
*ವಿವಿಧ ಬೆಳೆಗಳಿಗೆ ಆದ್ಯತೆ:* ಗ್ರಾಮೀಣ ಭಾಗದ ರೈತರಿಗೆ ಮಾವು, ದಾಳಿಂಬೆ, ಪೇರಲ, ತೆಂಗು, ದ್ರಾಕ್ಷಿ, ನಿಂಬೆ, ಡ್ರಾಗನ್ ಫ್ರೂಟ್ಸ್ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹ ‘ವಿಕಸಿತ ಭಾರತ ಜಿ ರಾಮ್ ಜಿ’ ಯೋಜನೆಯಡಿ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಕಾಮಗಾರಿಗಳಿಂದ ರೈತರು ಮಾಸಿಕ ಹಾಗೂ ಪ್ರತಿದಿನ ಆದಾಯ ಗಳಿಸಿ ಆರ್ಥಿಕವಾಗಿ ಸದೃಢರಾಗಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ಕುಷ್ಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ.ಸಂ: 97435186087019681952, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಕುಷ್ಟಗಿ ಮೊ.ಸಂ: 8951860236, ತಾವರಗೇರಾ ಮೊ.ಸಂ: 9060550146, ಹನಮಸಾಗರ ಮೊ.ಸಂ: 9035195783 ಹಾಗೂ ಹನಮನಾಳ ಮೊ.ಸಂ: 9740084555, ಎಂಜಿನರೇಗಾದ ತಾಂತ್ರಿಕ ಸಹಾಯಕರಾದ ಶಿವಕುಮಾರ್ ಮೊ.ಸಂ: 9844023593 ಮತ್ತು ಮಿಸ್ಭಾಹ್ ಮೊ.ಸಂ: 7019681950, ಇವರನ್ನು ಸಂಪರ್ಕಿಸಬಹುದು ಎಂದು ಅವರು ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಸಹಾಯಕ ತೋಟಗಾರಿಕೆ ಅಧಿಕಾರಿ ಸುನೀಲಕುಮಾರ, ತಾವರಗೇರಾ ಸಹಾಯಕ ತೋಟಗಾರಿಕೆ ಅಧಿಕಾರಿ ಮಹಮ್ಮದ್ ಶೌಫಿಕ್, ಹನಮಸಾಗರ ಸಹಾಯಕ ತೋಟಗಾರಿಕೆ ಅಧಿಕಾರಿ ವಿನಯಕುಮಾರ ಬೆವಿನಮರದ, ಹನಮನಾಳ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಪ್ಪ ಶಾಂತಗೇರಿಸೇರಿದಂತೆ ಆಯಾ ಗ್ರಾ.ಪಂ.ಗಳ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

Total Views: 0
Share This Article