ಸಾಕ್ಷಾತ್ ಶಿವಸ್ವರೂಪರಾಗಿದ್ದ ಪುಟ್ಟರಾಜ ಕವಿ ಗವಾಯಿಗಳು: ಕಲ್ಲಯ್ಯ ಅಜ್ಜ

H.Mallikarjun
H.Mallikarjun - Kalyanasiri
2 Min Read

Little Raja, the poet who was the very form of Shiva, got teased by Kallayya Ajja.

ಸಾಕ್ಷಾತ್ ಶಿವಸ್ವರೂಪರಾಗಿದ್ದ ಪುಟ್ಟರಾಜ ಕವಿ ಗವಾಯಿಗಳು: ಕಲ್ಲಯ್ಯ ಅಜ್ಜ

ಜಾಹೀರಾತು

ಪುಟ್ಟರಾಜರ ಪುಣ್ಯಸ್ಮರಣೋತ್ಸವದಲ್ಲಿ ಭಕ್ತಿಭಾವದ ನುಡಿನಮನ

ಗಂಗಾವತಿ: ಗದಗನ್ನು ಕೈಲಾಸವನ್ನಾಗಿಸಿದ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ತ್ರಿಭಾಷಾ ಕವಿ, ಲಿಂಗೈಕ್ಯ ಡಾ. ಪುಟ್ಟರಾಜ ಕವಿ ಗವಾಯಿಗಳವರ ಕೀರ್ತಿ ಅವಿಸ್ಮರಣೀಯ. ಪುಟ್ಟರಾಜ ಕವಿ ಗವಾಯಿಗಳು ಸಾಕ್ಷಾತ್ ಶಿವಸ್ವರೂಪರಾಗಿದ್ದರು ಎಂದು ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯ ಅಜ್ಜನವರು ಹೇಳಿದರು.
ನಗರದ ವಿಪ್ರನಗರದಲ್ಲಿರುವ ವೀರೇಶ್ವರ ಪುಣ್ಯಾಶ್ರಮದ ಶಾಖಾ ಆಶ್ರಮದಲ್ಲಿ ಚಾತುರ್ಮಾಸದ ಅನುಷ್ಠಾನದ ಹಿನ್ನೆಲೆಯಲ್ಲಿ ಸೋಮವಾರ ಈಶ್ವರ ಮೂರ್ತಿಗೆ ಹಾಗೂ ಡಾ. ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ರಾಜ-ಮಹಾರಾಜರ ಅರಮನೆಗಳಿಗೆ ಮಾತ್ರ ಸೀಮಿತವಾಗಿದ್ದ ಸಂಗೀತ, ಸಾಹಿತ್ಯ ಹಾಗೂ ಕಲೆಯನ್ನು ಜನಸಾಮಾನ್ಯರಿಗೂ ತಲುಪಿಸುವ ಮಹತ್ಕಾರ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಮೂಲಕ ನಡೆಸಲಾಗಿದೆ. ವಿಶೇಷವಾಗಿ ಅಂಧ, ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಸಾಹಿತ್ಯ, ಸಂಗೀತ, ಪುರಾಣ ಹಾಗೂ ವಿವಿಧ ಕಲೆಗಳನ್ನು ಕಲಿಸುವ ಮೂಲಕ ಅವರನ್ನು ಸ್ವಾವಲಂಬಿ ಬದುಕಿನತ್ತ ಕೊಂಡೊಯ್ಯುವ ಪುಟ್ಟರಾಜರ ಸಂಕಲ್ಪ ಸಾಕಾರಗೊಂಡಿದೆ ಎಂದು ಹೇಳಿದರು.
ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸಂಗೀತ ಕಲಾವಿದ ಹುಟ್ಟಬೇಕು ಎಂಬುದು ಪುಟ್ಟರಾಜ ಕವಿ ಗವಾಯಿಗಳವರ ಆಶಯವಾಗಿತ್ತು. ಅಂಧ ಮಕ್ಕಳ ಶಿಕ್ಷಣ ಹಾಗೂ ಕಲಾಭ್ಯಾಸಕ್ಕಾಗಿ ವೀರೇಶ್ವರ ಪುಣ್ಯಾಶ್ರಮದ ಸೇವಾ ಕಾರ್ಯಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕಲ್ಲಯ್ಯ ಅಜ್ಜನವರು ಕರೆ ನೀಡಿದರು.
ಗಂಗಾವತಿಯಲ್ಲಿರುವ ಶಾಖಾ ಆಶ್ರಮವೂ ಮುಂದಿನ ದಿನಗಳಲ್ಲಿ ಬೃಹತ್ ಶಕ್ತಿಪೀಠವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಪುಟ್ಟರಾಜರ ಆದರ್ಶ ಮತ್ತು ಸೇವಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಪುಟ್ಟರಾಜ ಕವಿ ಗವಾಯಿಗಳವರ ತುಲಾಭಾರ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ಗದಗದ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಲಿರುವ ಕಲ್ಲಯ್ಯ ಅಜ್ಜನವರಿಗೆ ಗಂಗಾವತಿಯ ಶಿಷ್ಯರು ಭಕ್ತಿಪೂರ್ವಕವಾಗಿ ಬೀಳ್ಕೊಡುಗೆ ನೀಡಿದರು. ಶಿಕ್ಷಕ ಮಲ್ಲಿಕಾರ್ಜುನಗೌಡ ಪಾಟೀಲ್ ಉಡುಮಕಲ್ ಸೇರಿದಂತೆ ಆಶ್ರಮದ ಶಿಷ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

Total Views: 1
ಜಾಹೀರಾತು
Share This Article