ಗಂಗಾವತಿ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
1 Min Read
Applications invited for the post of guest instructor at the Government ITI, Gangavathi.




ಗಂಗಾವತಿ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

ಜಾಹೀರಾತು


ಕೊಪ್ಪಳ ಆಗಸ್ಟ್ 07 (ಕರ್ನಾಟಕ ವಾರ್ತೆ): ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐಟಿಐ) 2026–27ನೇ ಸಾಲಿನ ವಿವಿಧ ವೃತ್ತಿಗಳ ತರಬೇತಿದಾರರಿಗೆ ತರಬೇತಿ ನೀಡಲು ಸೂಕ್ತ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
*ವಿದ್ಯಾರ್ಹತೆ:* ಎಲೆಕ್ಟ್ರಿಷಿಯನ್ ವೃತ್ತಿಗೆ ಐಟಿಐ, ಎಟಿಎಸ್, ಡಿಇಇ, ಡಿಇಇಇ, ಬಿಇ ಎಲೆಕ್ಟ್ರಿಕಲ್ ವಿದ್ಯಾರ್ಹತೆ ಹೊಂದಿರಬೇಕು. ಪಿಟ್ಟರ್ ಹಾಗೂ ವೆಲ್ಡರ್ ವೃತ್ತಿಗಳಲ್ಲಿ ಐಟಿಐ, ಎಟಿಎಸ್, ಡಿಎಂಇ, ಬಿಇ (ಮೆಕ್ಯಾನಿಕಲ್) ವಿದ್ಯಾಹರ್ತೆ ಹೊಂದಿರಬೇಕು. ಈ ಮೂರು ವೃತ್ತಿಗಳಿಗೆ ಸಂಬಂಧಿಸಿದಂತೆ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಹೊಂದಿರುವ ವಿದ್ಯಾರ್ಥಿಗಳು ಆಗಸ್ಟ್ 14ರ ಸಂಜೆ 5 ಗಂಟೆಯೊಳಗೆ ತಮ್ಮ ವಿವರವಾದ ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ, ಕೊರಿಯರ್ ಮೂಲಕ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿ, ಇಲ್ಲಿಗೆ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಗೆ ಭೇಟಿ ನೀಡಬಹುದು ಅಥವಾ ಮೊಬೈಲ್ ಸಂಖ್ಯೆ 9448259832 ಗೆ ಸಂಪರ್ಕಿಸಬಹುದು ಎಂದು ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article