ಕಬ್ಬು ಬೆಳೆಗಾರರ ಹೋರಾಟಕ್ಕೆ ಮೊದಲ ಹಂತದ ಜಯ; ಗುರ್ಲಾಪುರದಲ್ಲಿ ರೈತರ ವಿಜಯೋತ್ಸವ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು

First-phase victory for sugarcane growers' struggle; farmers celebrate success in Gurlapura.




ಕಬ್ಬು ಬೆಳೆಗಾರರ ಹೋರಾಟಕ್ಕೆ ಮೊದಲ ಹಂತದ ಜಯ; ಗುರ್ಲಾಪುರದಲ್ಲಿ ರೈತರ ವಿಜಯೋತ್ಸವ

₹3,600 ಪ್ರತಿ ಟನ್ ಕಬ್ಬಿಗೆ ದರ ನಿಗದಿ: ಸಕ್ಕರೆ ಮಾರಾಟದ ಲಾಭಾಂಶದಲ್ಲಿ ಶೇ.75ರಷ್ಟು ಪಾಲಿಗೆ ಒಪ್ಪಂದ

ಜಾಹೀರಾತು
ಜಾಹೀರಾತು

ಮೂಡಲಗಿ: ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಸತತ 12 ದಿನಗಳ ಕಾಲ ನಡೆಸಿದ ರೈತರ ಹೋರಾಟಕ್ಕೆ ಮೊದಲ ಹಂತದ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ವಿಜಯೋತ್ಸವ ಆಚರಿಸಿದರು.

ಹೋರಾಟದ ಸ್ಥಳದಲ್ಲಿಯೇ ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚುವ ಮೂಲಕ ರೈತರು ಸಂಭ್ರಮಿಸಿದರು. ಈ ವೇಳೆ ರೈತಪರ ಘೋಷಣೆಗಳು ಮೊಳಗಿದವು.

ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಹೋರಾಟಗಾರರು ವಿಜಯೋತ್ಸವದಲ್ಲಿ ಪಾಲ್ಗೊಂಡರು. ರೈತರ ನಿರಂತರ ಹೋರಾಟ ಮತ್ತು ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸುವುದರೊಂದಿಗೆ ಸಕ್ಕರೆ ಮಾರಾಟದಿಂದ ಬರುವ ಲಾಭಾಂಶದಲ್ಲಿ ಶೇ.75ರಷ್ಟು ಪಾಲನ್ನು ರೈತರಿಗೆ ನೀಡುವ ಒಪ್ಪಂದಕ್ಕೆ ಬರಲಾಗಿದೆ. ಈ ನಿರ್ಧಾರ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಆದರೆ, ಈ ಒಪ್ಪಂದವೇ ಹೋರಾಟದ ಅಂತಿಮ ಜಯವಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ಸರ್ಕಾರ ಹೆಚ್ಚುವರಿಯಾಗಿ ₹1,000 ಪ್ರೋತ್ಸಾಹಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದೊಳಗೆ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, 12 ದಿನಗಳ ಸತತ ಹೋರಾಟದ ಬಳಿಕ ಗುರ್ಲಾಪುರದಲ್ಲಿ ವಿಜಯೋತ್ಸವದ ಸಂಭ್ರಮ ಮನೆಮಾಡಿದ್ದರೂ, ರೈತರ ಪ್ರಮುಖ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ದೃಢ ಸಂಕಲ್ಪವನ್ನು ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ.

ವರದಿ: ಈಶ್ವರ ಢವಳೇಶ್ವರ, ಮೂಡಲಗಿ

Total Views: 0
ಜಾಹೀರಾತು
Share This Article
Leave a Comment