
Another name for service is woman.

ಗಂಗಾವತಿ: ಮಹಿಳೆಯ ಬದುಕು ಸೇವೆಯಲ್ಲಿ ಲೀನ: ಸೇವೆಗೆ ಮತ್ತೊಂದು ಹೆಸರು ಮಹಿಳೆ ಆಕೆಯ ಇಡಿ ಬದುಕು ಮಾನವ ಜನಾಂಗದ ಸೇವೆಯಲ್ಲೇ ಸವೆದು ಹೋಗುತ್ತದೆ.

ಆಕೆ ತಾಯಿಯಾಗಿ ಮಗನ ಸೇವೆಯನ್ನು ಪತ್ನಿಯಾಗಿ ಗಂಡನ ಸೇವೆಯನ್ನು ಸೊಸೆಯಾಗಿ ಅತ್ತೆಮಾವರ ಸೇವೆಯನ್ನು ಮಾಡುವಲ್ಲಿ ತನ್ನ ಬದುಕನ್ನ ಕಳೆದುಕೊಳ್ಳುತ್ತಾಳೆ .
ಹಾಗಾಗಿ ಸೇವೆ ಶಬ್ದಕ್ಕೆ ಮಹಿಳೆ ಪರ್ಯಾಯ ಆಕೆಯನ್ನು ಹೊರತುಪಡಿಸಿ ಸೇವೆ ಇಲ್ಲ ಮಹಿಳೆಯ ಸೇವೆಯೇ ಮಾನವ ಜನಾಂಗಕ್ಕೆ ಶ್ರೇಷ್ಠ ಸೇವೆಯಾಗಿದೆ ಎಂದು ಕರುಣಾ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಸಂಚಾಲಕರಾದ ಸಮಾಜ ಸೇವಕಿ ಡಾ. ಮಹಾಲಕ್ಷ್ಮಿ ಕೇಸರಹಟ್ಟಿ ಅವರು ಅಭಿಪ್ರಾಯ ಪಟ್ಟರು.
ಅವರು ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕಗಳ 2025-26 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರ ದಲ್ಲಿ ಯುವತಿಯರು ಮತ್ತು ಸಮಾಜಸೇವೆ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಅವರು ಮುಂದುವರೆದು ಮಾತನಾಡುತ್ತಾ ಸೇವೆಯ ಬಗ್ಗೆ ಮತ್ತಷ್ಟು ಅರಿಯಲು ಎನ್ಎಸ್ಎಸ್ ಒಂದು ಉತ್ತಮ ಯೋಜನೆಯಾಗಿದೆ. ಇದರ ಲಾಭವನ್ನು ವಿದ್ಯಾರ್ಥಿನಿಯರು ಕಲಿಯಬೇಕೆಂದು ಕರೆನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕಗಳು ಮತ್ತು ಶಿಬಿರಗಳು ನಡೆಸಿದ ಸಾರ್ಥಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
