Student Priyanka selected for state level in long jump sport

ಯಲಬುರ್ಗಾ.ಅ.10.:ಜಿಲ್ಲಾ ಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ದಮ್ಮೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಆಚಾರ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯಲಬುರ್ಗಾ ತಾಲೂಕಿನ ವಜ್ರಬಂಡಿ ವಲಯ ದಮ್ಮೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಆಚಾರ್ ಕೊಪ್ಪಳದಲ್ಲಿ ನಡೆದ ಉದ್ದ ಜಿಗಿತ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಎಸ್ಡಿಎಂಸಿ ಅಧ್ಯಕ್ಷರು ಶಾಲೆಯ ಮುಖ್ಯ ಗುರುಗಳು ತರಬೇತಿ ನೀಡಿದ ಮಹಮ್ಮದ್ ಯೂಸುಫ್ ಗುರುಗಳು ಹಾಗೂ ಶಾಲೆಯ ಶಿಕ್ಷಕರಾದ ಲಕ್ಷ್ಮಣ್ ಚಲವಾದಿ ಹನುಮೇಶ್ ಹಿರೇಮನಿ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.