Breaking News

ರೈತರಿಗೆ ಜಾಗೃತಿ ಬರುವಂತೆ ಮಾಡುವ ರೈತರೊಂದಿಗೆ ನಾವು ಎಂಬ ಕಾರ್ಯಕ್ರಮ

We are a program called Farmers with Farmers to bring awareness to farmers

ಜಾಹೀರಾತು

ತಿಪಟೂರು: ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಹಾಗೂ ಕೃಷಿಕರ ಸಮಸ್ಯೆಗಳನ್ನು ಇಲಾಖೆಗಳ ಗಮನಕ್ಕೆ ತರಲು ಹಾಗೂ ರೈತರಿಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳ ಬಗ್ಗೆ ರೈತರಿಗೆ ಜಾಗೃತಿ ಬರುವಂತೆ ಮಾಡುವ ರೈತರೊಂದಿಗೆ ನಾವು ಎಂಬ ಕಾರ್ಯಕ್ರಮವನ್ನು ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಹಾಗೂ ತಿಪಟೂರು ಶಾಸಕರಾದ ಕೆ.ಷಡಕ್ಷರಿಯವರ ಸಮ್ಮುಖದಲ್ಲಿ ನೆಡಸಲಾಗುತ್ತಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಹಾಲಪ್ಪ ತಿಳಿಸಿದರು.
ತಾಲ್ಲೂಕಿನ ಕರಡಾಳು ಸಂತೆ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಕೃಷಿ ಇಲಾಖೆ ತೋಟಗಾರಿಕೆ ಮೀನುಗಾರಿಕೆ ಪಶುಸಂಗೋಪನ ಇಲಾಖೆ, ರೇಷ್ಮೆ ಇಲಾಖೆ, ಲೀಡ್ ಬ್ಯಾಂಕ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೊಂದಿಗೆ ರೈತರೊಂದಿಗೆ ನಾವು ಕಾರ್ಯಕ್ರಮದಲ್ಲಿ ಸಂವಾದ ನೆಡೆಸಿದರು.
ಕರ‍್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ರೈತರಿಗೆ ಎಲ್ಲಾ ರೀತಿಯ ಸಹಕಾರ ಸಹಕಾರಿ ಸಂಸ್ಥೆಗಳು ನೀಡಲಿವೆ. ರೈತರ ವಿಚಾರವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತುಂಬಾ ನೆರವಾಗುತ್ತಿರುವುದು ರೈತರ ಬೆಳವಣಿಗೆಗೆ ಸಹಕಾರಿಯಾಗಲಿದೆ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ರೈತರು ಹಂಚಿಕೊಳ್ಳಬೇಕು, ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಹಾಜರಿರುವುದರಿಂದ ನೇರ ಸಂವಾದದೊAದಿಗೆ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕಂಚಾಘಟ್ಟದ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ ಇಂದು ಎಲ್ಲರಿಗಿಂತಲೂ ರೈತರು ಹೆಚ್ಚು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರಿಗೂ ಗ್ಯಾರಂಟಿ ಯೋಜನೆ ಕೊಡಬೇಕು. ಪ್ರತಿ ತಿಂಗಳು ರೂ.೫,೦೦೦ ಧನಸಹಾಯ ಸರ್ಕಾರ ಮಾಡಬೇಕು. ನಮ್ಮ ರೈತರ ದುಡ್ಡು ರೈತರಿಗೆ ಕೊಡಲಿ ಎಂದು ಸರ್ಕಾರಕ್ಕೆ ಅಗ್ರಹಿಸಿದರು. ರೈತರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ರೈತರು ವಿದ್ಯಾವಂತರಾಗಿ ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಿಳಿದುಕೊಂಡು ಅವುಗಳನ್ನು ಬಳಸಿಕೊಳ್ಳಿ ಎಂದು ರೈತರಿಗೆ ಕಿವಿ ಮಾತು ಹೇಳಿದರು.
ಕೃಷಿ ಇಲಾಖೆಯ ಅಧಿಕಾರಿ ಚನ್ನಕೇಶವ ಮೂರ್ತಿ ಮಾತನಾಡಿ ರೈತರು ಮೊದಲು ತಮ್ಮ ದಾಖಲೆಗಳನ್ನು ಕಾನೂನು ಮತ್ತು ಸಾಮಾಜಿಕ ರೀತಿಯಲ್ಲಿ ಸರಿಪಡಿಸಿಕೊಳ್ಳಬೇಕು ತಮ್ಮ ಮೊಬೈಲ್ ಮೂಲಕ ಆಧಾರ್ ಲಿಂಕ್ ಕೆವೈಸಿ ಮಾಡಿಸಿದರೆ ಬೆಳೆ ಪರಿಹಾರ ಹಾಗೂ ಸಹಾಯಧನದ ಹಣ ಹಾಗೂ ಕೃಷಿ ಇಲಾಖೆಯ ಉಪಕರಣಗಳ ಪಡೆಯಲು ಸಾಧ್ಯ, ಆದ್ದರಿಂದ ಕೆವೈಸಿ ಮಾಡಿಸಿ, ಇಲಾಖಾ ವತಿಯಿಂದ ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತಿದ್ದು ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ರೈತರು ತಮ್ಮ ಸಮಸ್ಯೆಗಳಿಗೆ ಕಚೇರಿಯಲ್ಲಿ ಯಾವುದೇ ಸ್ಪಂದನೆ ಸಿಗುವುದಿಲ್ಲ ಸಲ್ಲದ ಜವಾಬು ನೀಡುತ್ತಾರೆ, ಕೆಲ ಇಲಾಖೆ ಅಧಿಕಾರಿಗಳು ಏಕೆ ಬಂದಿಲ್ಲವೆAದು ಪ್ರಶ್ನಿಸಿದರು. ನಬಾರ್ಡ್ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಮಡೆನೂರು ಕಾಂತರಾಜು, ತರಕಾರಿ ಪ್ರಕಾಶ್ ಟಿ.ಎನ್, ಮಲ್ಲೇನಹಳ್ಳಿ ಕಾಂತರಾಜು, ಬಜಗೂರುಮಂಜುನಾಥ್, ಹಿರಿಯ ಪಶು ವೈದ್ಯಾಧಿಕಾರಿ ವೈದ್ಯಾಧಿಕಾರಿ ನಂದೀಶ್, ತೋಟಗಾರಿಕೆ ಇಲಾಖೆ ಚಂದ್ರಶೇಖರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಸ್ತಿçÃಶಕ್ತಿ ಸಂಘ ಒಕ್ಕೂಟದ ಯೋಚನಾಧಿಕಾರಿ ಚಂದ್ರಕಲಾ, ಶಿಕ್ಷಕ ಪಟ್ಟಾಭಿರಾಮು, ಚಂದ್ರಪ್ಪ, ಪುಟ್ಟರಾಜು, ಪವನ್, ಶಂಕರ್, ಹೇಮಂತ್ ಸ್ತಿçÃಶಕ್ತಿ ಸಂಘದಿAದ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆ ಏರ್ಪಡಿಸಲಾಗಿತ್ತು ನೂರಾರು ರೈತರು ಮಹಿಳೆಯರು ಪಾಲ್ಗೊಂಡಿದ್ದರು.
ಬಾಕ್ಸ್- ಸರ್ಕಾರ ಉಚಿತ ಭಾಗ್ಯಗಳಲ್ಲಿ ಸಣ್ಣ ರೈತರಿಗೂ ಮಾಸಿಕ ೫ ₹ ಸಾವಿರ ಹಣ ನೀಡಿ ರೈತರ ಪರ ನಿಲ್ಲಬೇಕಿತ್ತು ಸರ್ಕಾರಗಳು ಅಧಿಕಾರ ನೆಡೆಸಲು ರೈತರ ತೆರಿಗೆ ಹಾಗೂ ರೈತರ ಹೆಸರಿನಲ್ಲಿ ಅಧಿಕಾರ ಪಡೆಯುವ ರಾಜಕಾರಣಿಗಳು ಮನೆ ಬಾಗಿಲಿಗೆ ಸರ್ಕಾರ ತರಬೇಕು ರೈತರು ಎಂಥ ಸಮಸ್ಯೆ ಬಂದರೂ ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲಬಾರದು ತಮ್ಮ ಮಕ್ಕಳಿಗೆ ಎಷ್ಟೇ ಕಷ್ಟವಿದ್ದರೂ ವಿದ್ಯಾಭ್ಯಾಸ ಕೊಡಿಸಿ, ಅಧಿಕಾರಿಗಳು ಮೊದಲು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆಯಬೇಕು. ಶ್ರೀ ರುದ್ರಮುನಿ ಸ್ವಾಮೀಜಿ ಷಡಕ್ಷರ ಮಠ ತಿಪಟೂರು.
ಕೋಟ್ : ಸಂವಾದದ ಎಲ್ಲಾ ಪ್ರಶ್ನೆಗಳಿಗೂ ಸಂಬAಧಪಟ್ಟ ಅಧಿಕಾರಿಗಳಿಂದ ಈ ವೇದಿಕೆಯಲ್ಲಿ ಉತ್ತರ ಸಿಗಲಿದೆ. ಈ ವೇದಿಕೆಯಲ್ಲಿ ರೈತರ ಸಮಸ್ಯೆಗಳನ್ನು ದಾಖಲಿಸಿಕೊಂಡು, ಅದರ ಪರಿಹಾರಕ್ಕಾಗಿ ಸರ್ಕಾರದ ಗಮನಕ್ಕೆ ತರಲಾಗುವುದು. ನಮ್ಮ ಲೋಕಸಭಾ ಸದಸ್ಯರು ಎಲ್ಲಾ ತಾಲ್ಲೂಕುಗಳಿಗೂ ಭೇಟಿ ನೀಡಿ ಬರ ಅಧ್ಯಯನ ತಂಡದ ಜೊತೆ ಮಾತನಾಡಿ ಸಹಕರಿಸಬೇಕು. ನಮ್ಮ ಸಂಸದರು ಇನ್ನೂ ಆ ಕಾರ್ಯ ಮಾಡಿಲ್ಲ.
ಮುರಳೀಧರ ಹಾಲಪ್ಪ ಅದ್ಯಕ್ಷರು. ಹಾಲಪ್ಪ ಪ್ರತಿಷ್ಠಾನ.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *