Breaking News

ಪುಸ್ತಕವು ಒಂದು ಆಯುಧವಿದ್ದಂತೆ : ಡಾ.ವಿಪ್ಲವಿ

A book is like a weapon : Dr. Viplavi



ಕೊಪ್ಪಳ : ಪುಸ್ತಕ ಒಂದು ಆಯುಧ, ತಂತ್ರಜ್ಞಾನ ಯುಗದಲ್ಲಿ ಓದುವ ಹವ್ಯಾಸಕ್ಕೆ ಕುಂದುAಟಾಗಿದ್ದು ಇದಕ್ಕೆ ವೈವಿಧ್ಯಪೂರ್ಣ ಬರಹವೇ ಮದ್ದು ಎಂದು ನುಡಿದರಲ್ಲದೆ ಬರಹವು ಬರಹಗಾರನನ್ನು ಶಾಶ್ವತ ವಿರಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ವಿಪ್ಲವಿ ಹಂದ್ರಾಳ ಹೇಳಿದರು.
ಅವರು ಇಂದು ಪಕ್ಕದ ಭಾಗ್ಯನಗರದ ಶ್ರೀ ನಿಮಿಷಾಂಬ ದೇವಸ್ಥಾನದ ಮಂಗಲ ಭವನದಲ್ಲಿ ಶ್ರೀ ನಿಮಿಷಾಂಬ ಪ್ರಕಾಶನ ಪ್ರಕಾಶನ ಮತ್ತು ಆರ್ಟ್ ಗ್ಯಾಲರಿ ಕೊಪ್ಪಳ. ವಿಶಾಲ ಪ್ರಕಾಶನ ಮಾದನೂರು, ಸುಮಸಿರಿ ಕನ್ನಡ ಪ್ರಕಾಶನ ಕೊಪ್ಪಳ ಹಾಗೂ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಚಿತ್ರಗಾರ ಸಮಾಜ ಭಾಗ್ಯನಗರ ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಶ್ರೀನಿವಾಸ ಚಿತ್ರಗಾರರ ನಿಮಿಷಾಂಬ ಪ್ರಕಾಶನದ ೨೦ನೇ ವಾರ್ಷಿಕೋತ್ಸವ ‘ಚಿನ್ನದ ಚಿಣ್ಣರು’ ಹಾಗೂ ‘ನಮ್ಮೂರ ಶಾಲೆ’ಕೃತಿಗಳ ಲೋಕಾರ್ಪಣೆ, ಸಾಧಕ ಶಿರೋಮಣಿ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಚಿನ್ನದ ಚಿಣ್ಣರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ|| ಸಂಗಮೇಶ ಕಲಹಾಳರವರು ಶ್ರೀನಿವಾಸ ಚಿತ್ರಗಾರರು ಶಿಶು ಸಾಹಿತ್ಯದ ಮೇರು. ಒಂದು ದೇಶದ ಸಮೃದ್ಧತೆ ಶಿಕ್ಷಕರ ಸಾಮರ್ಥ್ಯವನ್ನು ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸವನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ರಚಿಸಿದ ಸುವರ್ಣ ಕೃತಿ ‘ಚಿನ್ನದ ಚಿಣ್ಣರು’ ಎಂದರು. ಮಕ್ಕಳು ಮನೆಗೆ ಮಾತ್ರವಲ್ಲದೆ ರಾಷ್ಟ್ರಕ್ಕೆ ಸಂಪತ್ತು. ಮಕ್ಕಳಲ್ಲಿ ನೈತಿಕತೆ ,ಶ್ರದ್ಧೆ, ಪ್ರಾಮಾಣಿಕತೆ ,ಸಾಹಸ ಪ್ರವೃತ್ತಿ, ಸೃಜನಶೀಲತೆಯನ್ನು ಒಡಮೂಡಿಸುವ ಹಿನ್ನೆಲೆಯಲ್ಲಿ ಶ್ರೀನಿವಾಸರು ವಿವಿಧ ಮಜಲುಗಳಲ್ಲಿ ಸಾಹಿತ್ಯವನ್ನು ಕೃಷಿ ಮಾಡಿದ್ದಾರೆ. ನಮ್ಮೂರ ಶಾಲೆ ಅಕ್ಷರ ಕೃತಿಯಾಗಿದ್ದು; ಸಮರ್ಥ ವ್ಯಕ್ತಿತ್ವವನ್ನು ರೂಪಿಸಬಲ್ಲದು ಎಂದು ಹೇಳಿದರು.
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಜಿ.ಎಸ್.ಗೋನಾಳರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಅಷ್ಟ ಶೋಭೆಗಳಿಂದ ಕೂಡಿದ, ಸಾಧಕರನ್ನು ಗುರುತಿಸಿ ಗೌರವಿಸಿದ, ಬೆಳೆಯುವ ಸಿರಿಗಳಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ, ಇವೆಲ್ಲಕ್ಕೂ ಕಿರೀಟವೆಂಬAತೆ ಮಕ್ಕಳ ಸಾಹಿತ್ಯಕ್ಕೆ ಎರಡು ಅನರ್ಘ್ಯ ಕೃತಿಗಳನ್ನು ಅರ್ಪಿಸಿದ ಐತಿಹಾಸಿಕ ಕಾರ್ಯಕ್ರಮವಿದು ಎಂದು ಬಣ್ಣಿಸಿದರು ಅಲ್ಲದೆ ಶ್ರೀನಿವಾಸ ಚಿತ್ರಗಾರರು ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಂಕರಾಚಾರ್ಯ ಮಠದ ಜಗದ್ಗುರುಗಳಾದ ಶ್ರೀ ಶಿವರಾಮಕೃಷ್ಣಾನಂದ ಭಾರತಿ ಸ್ವಾಮೀಜಿಗಳು ವಹಿಸಿದ್ದರು. ವೇದಿಕೆಯಲ್ಲಿ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಎ.ಉಮಾಶಂಕರ ರಾವ್, ವಿಶ್ವನಾಥ ಚಿತ್ರಗಾರ, ಪರಶುರಾಮಪ್ಪ ಚಿತ್ರಗಾರ, ಶ್ರೀಮತಿ ವಿದ್ಯಾವತಿ ಚಿತ್ರಗಾರ, ಶ್ರೀಮತಿ ಅನ್ನಪೂರ್ಣ.ಮ. ಮನ್ನಾಪುರ, ಇನ್ನು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾಂತೇಶ ಮಲ್ಲನಗೌಡ್ರ, ಜಿ.ಎಸ್.ಗೋನಾಳ ಡಾ.ಫಕೀರಪ್ಪ ವಜ್ರಬಂಡಿ, ಅಕ್ಬರ್ ಸಿ.ಕಾಲಿಮಿರ್ಚಿ, ಈಶ್ವರ ಹತ್ತಿ, ಎ.ಉಮಾಶಂಕರ ರಾವ್, ವಿಶ್ವನಾಥ ಚಿತ್ರಗಾರ, ಪರಶುರಾಮಪ್ಪ ಚಿತ್ರಗಾರ, ಡಿ.ಎಂ.ಬಡಿಗೇರ, ಎಂ.ಸಾಧಿಕಲಿ, ಅನ್ನಪೂರ್ಣ ಮನ್ನಾಪುರ, ಮೋಹಿನ್ ಪಾಷಾಬಿ, ಸಾವಿತ್ರಿ ಮುಜುಂದಾರ, ಕಲ್ಪನಾ ವಿಜಯಕುಮಾರ, ವೀರಣ್ಣ ವಾಲಿ, ಡಾ||ಮಹೇಶ ಉಮಚಗಿ, ಡಾ.ಪ್ರಕಾಶ ಬಳ್ಳಾರಿ, ನಾರಾಯಣಪ್ಪ. ಹೆಚ್.ಚಿತ್ರಗಾರ, ಮಂಜುನಾಥ ಗೊಂಡಬಾಳ, ಶಿವಪ್ಪ ಜೋಗಿ, ಎಂ.ಎನ್. ಕಮ್ಮಾರ, ಗವಿಸಿದ್ದಪ್ಪ ಬಾರಕೇರ, ಮಂಜುನಾಥ ಚಿತ್ರಗಾರ, ಯಲ್ಲಪ್ಪ ಹರ್ನಾಳಗಿ, ಸೋಮನಗೌಡ ವಗರನಾಳ, ನಾಗರಾಜ ಡೊಳ್ಳಿನ, ಹನುಮೇಶ.ಪ.ಚಿತ್ರಗಾರ, ಶಾಂತಮ್ಮ.ಜಿ.ಚಿತ್ರಗಾರ, ಶಾಂತಪ್ಪ ಪಟ್ಟಣಶೆಟ್ಟಿ, ಪಾಂಡುರAಗ ಚಿತ್ರಗಾರ ಮುಂತಾದವರನ್ನು ಸಾಧಕ ಶಿರೋಮಣಿ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಚಿತ್ರಗಾರ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗಣೇಶ ಚಿತ್ರಗಾರರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಭಾಸ್ಕರ. ಎಸ್ .ಚಿತ್ರಗಾರ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕು. ಶ್ವೇತಾ ಮತ್ತು ಕು. ವೈದೇಹಿ ಪ್ರಾರ್ಥಿಸಿದರು. ಮಂಜುನಾಥ ಚಿತ್ರಗಾರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವಂದಿಸಿದರು. ವಿಷ್ಣು ಆಂಬ್ಲೆ, ಕೃಷ್ಣ ಕುಮಾರ ಚಿತ್ರಗಾರ ,ವಿಶಾಲ ಚಿತ್ರಗಾರ ಮುಂತಾದವರು ಕಾರ್ಯಕ್ರಮವನ್ನು ನಿರ್ವಹಿಸಿದರು.


ಫೋಟೋ : ೧೦ಕೆಪಿಎಲ್ ೦೧, ೦೨ ೦೩

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.