ವೆಂಕಟಗಿರಿ ಗ್ರಾಪಂನಲ್ಲಿ ಮಹಾತ್ಮರ ಭಾವಚಿತ್ರಗಳಿಗೆ ಅವಮಾನ ಆರೋಪ

H.Mallikarjun
H.Mallikarjun - Kalyanasiri
1 Min Read

Allegation of disrespect to portraits of great figures at Venkatagiri Gram Panchayat

ವರದಿ: ಶರಣಯ್ಯ ಹಿರೇಮಠ

ಜಾಹೀರಾತು

ವೆಂಕಟಗಿರಿ ಗ್ರಾಪಂನಲ್ಲಿ ಮಹಾತ್ಮರ ಭಾವಚಿತ್ರಗಳಿಗೆ ಅವಮಾನ ಆರೋಪ


ಸ್ಟೋರ್ ರೂಂನಲ್ಲಿ ಧೂಳು ಹಿಡಿದ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಗಳು; ಗ್ರಾಮಸ್ಥರ ಆಕ್ರೋಶ

ಕಲ್ಯಾಣ ಸಿರಿ:
ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಸ್ಟೋರ್ ರೂಂನಲ್ಲಿ ಇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪಂಚಾಯಿತಿ ಕಚೇರಿಯಲ್ಲಿ ಗೌರವಯುತವಾಗಿ ಪ್ರದರ್ಶಿಸಬೇಕಾದ ಮಹಾತ್ಮರ ಭಾವಚಿತ್ರಗಳನ್ನು ಸ್ಟೋರ್ ರೂಂನಲ್ಲಿ ಇರಿಸಲಾಗಿದ್ದು, ಅವುಗಳ ಮೇಲೆ ಧೂಳು ಆವರಿಸಿಕೊಂಡು ಮೂಲೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ರಾಷ್ಟ್ರದ ಮಹನೀಯರ ಭಾವಚಿತ್ರಗಳನ್ನು ಗೌರವಯುತವಾಗಿ ಇರಿಸುವುದು ಸರ್ಕಾರಿ ಕಚೇರಿಗಳ ಕರ್ತವ್ಯವಾಗಿದೆ. ಆದರೆ, ಭಾವಚಿತ್ರಗಳನ್ನು ಉಗ್ರಾಣದಲ್ಲಿ ನಿರ್ಲಕ್ಷ್ಯದಿಂದ ಇರಿಸಿರುವುದು ಮಹಾತ್ಮರಿಗೆ ತೋರಿದ ಅಗೌರವ ಮಾತ್ರವಲ್ಲದೆ, ಸಂವಿಧಾನ ಮೌಲ್ಯಗಳಿಗೂ ಧಕ್ಕೆ ತರುವಂತಹ ಘಟನೆ ಎಂದು ಸಾರ್ವಜನಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.


ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ವೆಂಕಟಗಿರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಘಟನೆ ಕುರಿತು ಪರಿಶೀಲನೆ ನಡೆಸಬೇಕು. ಭಾವಚಿತ್ರಗಳನ್ನು ಈ ರೀತಿಯಾಗಿ ಇರಿಸಲು ಕಾರಣವೇನು ಎಂಬುದನ್ನು ತನಿಖೆ ನಡೆಸಿ, ನಿಯಮಾನುಸಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರನಾಯಕರು ಹಾಗೂ ಸಂವಿಧಾನ ಶಿಲ್ಪಿಗಳ ಭಾವಚಿತ್ರಗಳಿಗೆ ಸೂಕ್ತ ಗೌರವ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ವರದಿ: ಶರಣಯ್ಯ ಹಿರೇಮಠ

Total Views: 0
ಜಾಹೀರಾತು
Share This Article