ನ.14 ರಿಂದ 20 ರವರೆಗೆ 73ನೇ ಸಹಕಾರ ಸಪ್ತಾಹ-2026 ಕಾರ್ಯಕ್ರಮ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
73rd Cooperative Week-2026 Programme from November 14 to 20




ನ.14 ರಿಂದ 20 ರವರೆಗೆ 73ನೇ ಸಹಕಾರ ಸಪ್ತಾಹ-2026 ಕಾರ್ಯಕ್ರಮ

ಜಾಹೀರಾತು
ಜಾಹೀರಾತು

ಕೊಪ್ಪಳ, ನವೆಂಬರ್ 13, : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಸಹಕಾರ ಇಲಾಖೆ, ಕೊಪ್ಪಳ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 14 ರಿಂದ 20 ರವರೆಗೆ 7 ದಿನಗಳ ಕಾಲ ವಿವಿಧ ವಿಷಯಗಳ ಮೇಲೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 73ನೇ ಸಹಕಾರ ಸಪ್ತಾಹ-2026 ವನ್ನು ಹಮ್ಮಿಕೊಳ್ಳಲಾಗಿದೆ.
73ನೇ ಸಹಕಾರ ಸಪ್ತಾಹ–2026ರ ಮುಖ್ಯಧ್ಯೇಯ “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ” ಎಂಬುದಾಗಿದೆ.
ನವೆಂಬರ್ 14 ರ ಶನಿವಾರದಂದು ಬೆಳಿಗ್ಗೆ 10.30 ಗಂಟೆಗೆ ಕುಷ್ಟಗಿಯ ಜಿಲ್ಲಾ ಸಹಕಾರ ಯೂನಿಯನ್ ಸಭಾಭವನದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯದ ಕುರಿತು, ನ.15 ರ ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಕಾರಟಗಿ ತಾಲೂಕಿನ ಯರಡೋಣ ಕಿಂದಕ್ಯಾAಪ್‌ನ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಗಣಕೀಕರಣ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೈಜೇಷನ್ ಪ್ರಕ್ರಿಯೆಗಳು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಪೋಷಕ ಎಂಬ ವಿಷಯದ ಕುರಿತು, ನ.16 ರ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿಯ (ತಾಲೂಕ ಪಂಚಾಯತ್ ಹಿಂಭಾಗ) (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಗಂಗಾವತಿ) ಸಾಹಿತ್ಯ ಭವನದಲ್ಲಿ ಸಹಕಾರ ಶಿಕ್ಷಣ-ತರಬೇತಿ-ಪ್ರಚಾರ ಮೂಲಕ ಸಹಕಾರ ಸಂಸ್ಥೆಗಳಲ್ಲಿ ಪರಿಣಾಮಕಾರಿ ಬದಲಾವಣೆ ಎಂಬ ವಿಷಯದ ಕುರಿತು, ನ.17 ರ ಮಂಗಳವಾರದAದು ಬೆಳಿಗ್ಗೆ 11 ಗಂಟೆಗೆ ಕುಷ್ಟಗಿಯ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಮಿನಿ ಫಂಕ್ಷನ್ ಹಾಲ್‌ನಲ್ಲಿ (ಶ್ರೀ ಸಪ್ತಗಿರಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ., ಕುಷ್ಟಗಿ) ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಬ್ರಾö್ಯಂಡ್ ನಿರ್ಮಾಣ ಎಂಬ ವಿಷಯದ ಕುರಿತು, ನ.18 ರ ಬುಧವಾರದಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ತಾಲೂಕಿನ ಘಟ್ಟಿರಡ್ಡಿಹಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಾರ್ವಜನಿಕ/ಖಾಸಗಿ – ಸಹಕಾರಿ ಪಾಲುದಾರಿಕೆ ಬಲಪಡಿಸುವ ದಿನ ಎಂಬ ವಿಷಯದ ಕುರಿತು, ನ.19 ರ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾ ತಾಲೂಕಿನ ಬಂಡಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ದ ಸಭಾಂಗಣದಲ್ಲಿ ಮಹಿಳೆಯರು, ಯುವಜನರು ಮತ್ತು ಸಮಾಜದ ಅಬಲ ವರ್ಗಗಳು ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆ ಎಂಬ ವಿಷಯದ ಕುರಿತು, ನ.20 ರ ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಗಾಣಿಗರ ಸಮುದಾಯ ಭವನದಲ್ಲಿ (ಜಯದೇವ್ ಹಿಂದುಳಿದ ವರ್ಗಗಳ ಪತ್ತಿನ ಸಹಕಾರ ಸಂಘ ನಿ., ಕೊಪ್ಪಳ ಅಮೃತ ಗ್ರಾಹಕರ ಸಹಕಾರ ಸಂಘ ನಿ., ಕೊಪ್ಪಳ, ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಹಿಂದುಳಿದ ವರ್ಗದ ಸಹಕಾರ ಸಂಘ ನಿ., ಕೊಪ್ಪಳ, ಅಭಿನವ ಪತ್ತಿನ ಸಹಕಾರ ಸಂಘ ನಿ., ಕೊಪ್ಪಳ) ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವ ಶಾಂತಿಗಾಗಿ ಸಹಕಾರ ಸಂಸ್ಥೆಗಳು ಎಂಬ ವಿಷಯದ ಕುರಿತು ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೇಲ್ಕಂಡ ದಿನಗಳಲ್ಲಿ ಕಡ್ಡಾಯವಾಗಿ ಸಹಕಾರ ಸಂಘಗಳ ಕಟ್ಟಡದ ಮೇಲೆ ಸಪ್ತವರ್ಣದ ಸಹಕಾರ ಬಾವುಟವನ್ನು ಹಾರಿಸುವುದರೊಂದಿಗೆ ಸಹಕಾರ ಕ್ಷೇತ್ರದ ಅಸ್ತಿತ್ವವನ್ನು ಸಾರ್ವಜನಿಕರಿಗೆ ತೋರಿಸಿಕೊಡಬೇಕು. ಅಂದಿನ ದಿನಗಳಲ್ಲಿ ಹಿರಿಯ ಸಹಕಾರಿಗಳಿಗೆ ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ, ಹೊಸ ಯೋಜನೆಗಳ ಅನುಷ್ಠಾನ ಮುಂತಾದ ನೈಜ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹಾಗೂ ಸಹಕಾರಿಗಳಿಗೆ ಉಪಯುಕ್ತವಾಗುವಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರ, ಲಸಿಕೆ ಕಾರ್ಯಕ್ರಮ, ರಕ್ತದಾನ ಶಿಬಿರ, ಸಹಕಾರ ಸಂಘಗಳು ಎದುರಿಸುತ್ತಿರುವ ಸವಾಲುಗಳು, ಸವಾಲುಗಳನ್ನು ಎದುರಿಸಲು ಅಗತ್ಯವಾದ ಮಾರ್ಗೋಪಾಯಗಳು, ಸಂವಾದ ಕಾರ್ಯಕ್ರಮಗಳು, ವಿಡಿಯೋ ಕಾನ್ಪರೆನ್ಸ್, ವೆಬಿನಾರ್ ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಕಾರಣ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮ ಜರುಗುವ ಸ್ಥಳದಲ್ಲಿ ಹಾಜರಾಗಿ ಸಹಕಾರ ಚಳುವಳಿಯನ್ನು ಬಲಪಡಿಸಬೇಕು ಎಂದು ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
ಜಾಹೀರಾತು
Share This Article
Leave a Comment