
Installation of a new idol of Goddess Kariyamma in Kesarahatti


ಕೇಸರಹಟ್ಟಿಯಲ್ಲಿ ಕರಿಯಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ

ವೇ. ಮೂ. ಅಮರಯ್ಯ ಸ್ವಾಮಿ, ವೇ. ಮೂ. ಶರಣಯ್ಯ ಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ
ಕೇಸರಹಟ್ಟಿ: ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಗ್ರಾಮದಲ್ಲಿ ಭಕ್ತಿಭಾವ ಹಾಗೂ ಧಾರ್ಮಿಕ ಸಂಭ್ರಮದಿಂದ ನೆರವೇರಿತು.
ವೇ. ಮೂ. ಅಮರಯ್ಯ ಸ್ವಾಮಿ ಹಾಗೂ ವೇ. ಮೂ. ಶರಣಯ್ಯ ಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ಸೇವಾ ಟ್ರಸ್ಟ್ ಕಮಿಟಿಯ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಹಿರಿಯರು, ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಅಮರೇಶ್ ಚಕೋಟಿ, ಅನಂತರಡ್ಡಿ, ಶರಣಪ್ಪ ಚಕೋಟಿ, ಬಸವರಾಜ ಹಳ್ಳಿ, ಜಿ. ಶ್ರೀಧರ್, ಚನ್ನಪ್ಪ ಮಳಿಗಿ, ವಿಶ್ವನಾಥ್, ಪಾ. ಮುದೆಗೌಡ, ವೀರಭದ್ರಗೌಡ, ಶೇಖರಪ್ಪ, ವೀರಭದ್ರಪ್ಪ, ವೀರರಡ್ಡೆಪ್ಪ, ಬಸವರಾಜ, ಶರಣಪ್ಪ ಲಾಡುಣಸಿ, ವೀರನಗೌಡ, ಶರಣಪ್ಪ, ಪಂಪನಗೌಡ, ಮಲ್ಲಿಕಾರ್ಜುನ, ವಿರುಪಣ್ಣ, ಪ್ರಭು, ಅಮರೇಶ್, ಪಂಪಣ್ಣ, ವೆಂಕಟೇಶ್, ಜಯಶ್ರೀ, ತಂಗಮ್ಮ, ದೇವಮ್ಮ, ಸೌಭಾಗ್ಯ, ಶರಣಮ್ಮ, ಸಿದ್ದಮ್ಮ, ಲಕ್ಷ್ಮೀದೇವಿ, ರಾಜಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲ್ಯಾಣಸಿರಿ ವೆಬ್ ನ್ಯೂಸ್ | ಗಂಗಾವತಿ



