There is no disobedience between Halappa and us! Rayardi,

ರಾಜಕಾರಣದಲ್ಲಿ ಟೀಕೆ ಟಿಪ್ಪಣೆ ಸಹಜ ಆದರೆ ಹಗುರವಾಗಿ ಮಾತನಾಡುವುದು ಸರಿಯಲ್ಲಾ,,
ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಿಷೇಶ ವರದಿ.
ಕುಕನೂರು : ಇತ್ತೀಚಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ತಾಲೂಕಿನ ಆಡೂರ ನಿವಾಸಿ ಪ್ರಕಾಶ ಹಿರೇಮನಿಯವರ ಪತ್ನಿ ರೇಣುಕಾ ಹಾಗೂ ಅವರ ಮಗು ಮೃತರಾದ ಹಿನ್ನೆಲೆ ಆಡೂರನ ನಿವಾಸಕ್ಕೆ ಸೋಮವಾರದಂದು ಸಾಯಂಕಾಲ ಶಾಸಕ ಬಸವರಾಜ ರಾಯರಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ನಂತರ ವಯಕ್ತಿಕ ಪರಿಹಾರ ನೀಡಿದರು.
ನಂತರದಲ್ಲಿ ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಗರು ಮಾತನಾಡುವ ಶೈಲಿಯನ್ನು ಕಲಿತುಕೊಳ್ಳಬೇಕಿದೆ, ಬಾಯಿಗೆ ಬಂದಂತೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದರು.
ನಾವು ಯಾವುದೇ ಕಾರಣಕ್ಕೂ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಹಸ್ತ ಕ್ಷೇಪ ಮಾಡಿಲ್ಲಾ, ಆದರೂ ಅವರು ಆರೋಪ ಮಾಡುತ್ತಿದ್ದಾರೆ ಎಂದರೇ ಅದು ವಿರೋಧ ಪಕ್ಷ, ಅಂದ ಮೇಲೆ ಟೀಕೆ ಟಿಪ್ಪಣೆ ಇರುವುದು ಸಹಜ, ಆದರೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಹಗುರವಾಗಿ ಮಾತನಾಡುವುದು ಸರಿಯಲ್ಲಾ ಎಂದು ಎಚ್ಚರಿಸಿದರು.
ಮೊದಲು ಕೃಷಿ ಪತ್ತಿನಲ್ಲಿ ಆಡಳಿತ ನಡೆಸಿದವರು ಸುಮಾರು 1300 ಅರ್ಹ ಮತದಾರರನ್ನು ತೆಗೆದು ಹಾಕಿದ್ದಾರೆ. ಅದರಲ್ಲಿ 300 ಅಲ್ಪ ಸಂಖ್ಯಾತರು 300 ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡದವರನ್ನು ತೆಗೆದು ಹಾಕಿದ್ದರು. ಅವರು ಕೊರ್ಟ್ ಗೆ ಹೋಗಿ ಮತದಾನದ ಹಕ್ಕನ್ನು ಪಡೆದುಕೊಂಡಿದ್ದಾರೆ. ಅವರು ಚುನಾವಣೆಯಂದು ಬೆಳಗ್ಗೆ ಚುನಾವಣಾಧಿಕಾರಿ ಬಳಿ ತೆರಳಿ ಕೊರ್ಟ್ ಆದೇಶ ನೀಡಿ ಅವರ ಗಮನಕ್ಕೆ ತಂದಿದ್ದರಿಂದ ಆ ಅನರ್ಹ ಸದಸ್ಯರು ಅರ್ಹರೆಂದು ಪರಿಗಣಿಸಿ ಅವರಿಗೆ ಕೊರ್ಟ್ ನ ಆದೇಶದಂತೆ ಮತ ಚಲಾವಣೆಗೆ ಅವಕಾಶ ನೀಡಿ ಎರಡನೇ ಬೂತ್ ಒಂದನ್ನು ಮಾಡಲಾಗಿತ್ತು, ಅದರಂತೆ ಅಂದು ಮತದಾನವು ಆಗಿದೆ ಆದರೆ ಇದರಲ್ಲಿ ಯಾವುದೇ ರಾಜಕೀಯವಿಲ್ಲಾ ಎನ್ನುವುದು ಸ್ಪಷ್ಟವಾಗಿ ತಿಳಿದು ಮಾತನಾಡಬೇಕು ಎಂದು ಹೇಳಿದರು.
ಚುನಾವಣೆಯಲ್ಲಿ ಮೊದಲನೆ ಪೆಟ್ಟಿಗೆ ಎಣಿಕೆಯನ್ನು ಮಾಡಿ ಎಂದಿದ್ದರು, ಆದರೆ ಅದು ಚುನಾವಣಾಧಿಕಾರಿ ವ್ಯಾಪ್ತಿಗೆ ಬಿಟ್ಟಿದ್ದು, ಆದರೆ ಕೊರ್ಟ್ ಆದೇಶ ಪಾಲನೆಗೆ ನಿಂತ ಸಂದರ್ಭದಲ್ಲಿ ಎರಡು ಬಣಗಳ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಗಿದ್ದರಿಂದ ಅವರು ಮತ ಎಣಿಕೆ ಸ್ಥಗಿತಗೊಳಿಸಿ ಮುಂದೆ ಹಾಕಿದರೇ ಹೊರತು ಇದಕ್ಕೆ ಯಾರು ಹೊಣೆಗಾರರಲ್ಲಾ ಎಂದರು.
ತಮಗೆ ಬೇಕಾದ ಸದಸ್ಯರನ್ನು ಮಾತ್ರ ಚುನಾವಣೆಗೆ ಮತದಾನ ಮಾಡಲು ಅರ್ಹರೆಂದು ಪಟ್ಟಿ ಮಾಡಿದ್ದರಿಂದ ಉಳಿದ ರೈತ ಸದಸ್ಯರು ಕೊರ್ಟ್ ನ ಮೊರೆ ಹೋಗಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಬಿಜೆಪಿ ಸದಸ್ಯರು, ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಪತ್ತಿನ ಸಹಕಾರಿ ಸಂಘದಲ್ಲಿ ವ್ಯಾಪಾರಸ್ಥರಿಗೆ ಸಾಲ ನೀಡಬಾರದು ಎಂದಿದೆ, ಕೇವಲ ರೈತರಿಗೆ ಮಾತ್ರ ಇದರಲ್ಲಿ ಸಾಲ ನೀಡಬೇಕು ಇದೆಲ್ಲಾ ಮುಂದೆ ತನಿಖೆಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಪತ್ತಿನ ಅಧಿಕಾರಿಗಳು ಹೊಣೆಯಾಗಲಿದ್ದು ಅವರ ಮೇಲೆ ಕಾನೂನಾತ್ಮಕವಾಗಿ ಕ್ರಮ ಜರುಗುವುದು ಎಂದರು.
ಹಾಲಪ್ಪ ಆಚಾರ ಅವರು ನನಗೆ ಸುಮಾರು ನಲವತ್ತು ವರ್ಷದಿಂದ ಸ್ನೇಹಿತರು ಆದರೆ ಅವರು, ರಾಯರಡ್ಡಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಗಂಧ ಗಾಳಿ ಗೊತ್ತಿಲ್ಲಾ ಎಂದಿದ್ದು ಸತ್ಯ ನನಗೆ ಗಂಧ ಗಾಳಿ ಗೊತ್ತಿಲ್ಲಾ, ಆದರೆ ನನಗೆ ಕಾನೂನು ಗೊತ್ತಿದೆ, ಕಾನೂನು ಓದಿಕೊಂಡಿದ್ದೇನೆ ಗಂಧ,ಗಾಳಿ ಓದಿಲ್ಲಾ ಎಂದು ಟಾಂಗ್ ನೀಡಿದರು.
ನನ್ನ ವ್ಯಾಪ್ತಿ ಹಾಲಪ್ಪನವರಿಗೆ ಗೊತ್ತಿಲ್ಲಾ ನಾಲ್ಕು ಜನ ಹೊಗಳುಭಟರನ್ನು ಇಟ್ಟುಕೊಂಡು ನಾನು ರಾಜಕಾರಣ ಮಾಡುತ್ತಿಲ್ಲಾ ಎಂದು ಪರಕ್ಷವಾಗಿ ಟೀಕಿಸಿದ ಅವರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ
ಒಂದು ಓಟ್ ಸರಕಾರದಿರುತ್ತೆ ಅದು ನಾವಾಗಿರ್ತೆವೆ ಎಂದರು.
ಹಾಲಪ್ಪನವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷನನ್ನು ಮಾಡಿದವರು ನಾವೇ 88ರಲ್ಲಿ ಇದು ಹೇಳ ಹೆಸರಿಲ್ಲದಂತೆ ಹೋಗುತಿತ್ತು, ಆದರೆ ನಮ್ಮ ಹಾಲಪ್ಪನವರ ಮದ್ಯೆ ಯಾವುದೇ ಅಸಹಕಾರವಿಲ್ಲಾ ಎಂದು ಸ್ಪಷ್ಟಿಕರಿಸಿದರು.
ಮುಂದಿನ ದಿನಗಳಲ್ಲಿ ಸೊಸೈಟಿಗಳಲ್ಲಿ ಎಸ್, ಸಿ. ಎಸ್, ಟಿ, ಮಹಿಳಾ ಮೀಸಲಾತಿ ತರಬೇಕು ಇದರಿಂದ ಎಲ್ಲರಿಗೂ ನ್ಯಾಯ ಸಿಗಲಿದೆ. ಅದವೇ ನಮ್ಮ ಸಾಮಾಜಿಕ ನ್ಯಾಯ ಅದು ನಮ್ಮ ಯಲಬುರ್ಗಾ ಕ್ಷೇತ್ರ ಒಂದೇ ಅಲ್ಲಾ ರಾಜ್ಯಾಧ್ಯಂತ ಮಾಡಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರಕಾರ ಯಾವುದೇ ಬರಲಿ ಶಾಸಕರು ಯಾರೇ ಆಗಲಿ ಒಟ್ಟಾರೇ ಜನ ಹಿತ, ಕ್ಷೇತ್ರ ಅಭಿವೃದ್ದಿಯಾಗಬೇಕು. ರಾಜ ಕಾರಣ ಎಂದ ಮೇಲೆ ಟೀಕೆ ಟಿಪ್ಪಣೆ ಇರುವುದೇ, ಆದರೆ ಹಗುರವಾಗಿ ಮಾತನಾಡುವುದು ಯಾರಿಗೂ ಸರಿಯಲ್ಲಾ ಎಂದರು.