ಎಇಸಿಎಸ್ ಬಡಾವಣೆಯಲ್ಲಿ 60 ಅಡಿ ರಸ್ತೆಬದಿ ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಅಭಿನಂದನೆ – ಎಸ್. ಸಂಗಮೇಶ್

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Congratulations to the officials who carried out the operation to clear 60 feet of illegal roadside shops in AECS Layout – S. Sangamesh

ಎಇಸಿಎಸ್ ಬಡಾವಣೆಯಲ್ಲಿ 60 ಅಡಿ ರಸ್ತೆಬದಿ ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಅಭಿನಂದನೆ – ಎಸ್. ಸಂಗಮೇಶ್

ಜಾಹೀರಾತು

ಬೆಂಗಳೂರು: ಕುಂದಲಹಳ್ಳಿ ಗೇಟ್ ಸಮೀಪದ ಎಇಸಿಎಸ್  ಬಡಾವಣೆಯ 60 ಅಡಿ ರಸ್ತೆಯಲ್ಲಿ ರಸ್ತೆಬದಿ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ಯುವ ಸಮೂಹದ ಮನವಿಗೆ ಸ್ಪಂದಿಸಿ ಶನಿವಾರ ರಾತ್ರಿ ತುರ್ತು ಕಾರ್ಯಾಚರಣೆ ನಡೆಸಿದ್ದು,  ಅಧಿಕಾರಿಗಳ ಸಕಾಲಿಕ ಕಾರ್ಯವೈಖರಿ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಬಿಎ ಕಾರ್ಯಪಾಲ ಅಭಿಯಂತರರಾದ ರವಿ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀಕಾಂತ್, ಸಂತೋಷ್, ಕಾರ್ಯ ಪರಿಶೀಲಕರಾದ ಶ್ರೀನಿವಾಸ್ ಮತ್ತು ರಾಜಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಎಚ್.ಎ.ಎಲ್ ಪೊಲೀಸರು, ಸಂಚಾರಿ ಪೊಲೀಸ್ ಸಿಬ್ಬಂದಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಸ್ ಲೋಹಿತ್ . ಎ.ಇ.ಸಿ.ಎಸ್ ನಿವಾಸಿಗಳ ಕಲ್ಯಾಣ ಸಂಘ, ಎಲ್ಲಾ ನಿವಾಸಿಗಳ ಜಾಗೃತಿಯಿಂದಲೇ ಈ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗಿದೆ ಎಂದು ಎಸ್. ಸಂಗಮೇಶ್ ಹೇಳಿದ್ದಾರೆ.

Total Views: 4
Share This Article