Breaking News

೩೭೧(ಜೆ) ಸಮರ್ಪಕ ಅನುಷ್ಠಾನ-ಗಂಗಾವತಿಯಲ್ಲಿ ಶನಿವಾರ ಪೂರ್ವಭಾವಿ ಸಭೆ

371(j) Adequate implementation-Preparatory meeting on Saturday at Gangavati

ಜಾಹೀರಾತು

ಗಂಗಾವತಿ: ಕಲ್ಯಾಣ ಕರ್ನಾಟಕಕ್ಕೆ ವರದಾನವಾಗಬೇಕಿದ್ದ ೩೭೧(ಜೆ) ಕಾಯ್ದೆಯ ಅಸಮರ್ಪಕ ಅನುಷ್ಠಾನವನ್ನು ಹಾಗೂ ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸುತ್ತಿರುವ ಹಸಿರು ಪ್ರತಿಷ್ಠಾನ ಸಂಘ ಮತ್ತು ಕೆಲ ಪ್ರಭಾವಿಗಳ ಸಂವಿಧಾನ ವಿರೋಧಿ ಹುನ್ನಾರವನ್ನು ಮಟ್ಟಹಾಕಲು ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ತಾಲೂಕಿನ ಎಲ್ಲಾ ಸಂಘ-ಸAಸ್ಥೆಗಳು ಮುಖಂಡರುಗಳ ಸಭೆಯನ್ನು ಗಂಗಾವತಿ ನಗರದ ಐ.ಎಂ>ಎ ಭವನದಲ್ಲಿ ಜುಲೈ-೧೩ ಶನಿವಾರ ಸಂಜೆ ೪ ಗಂಟೆಗೆ ಕರೆಯಲಾಗಿದೆ.
ಈ ಕುರಿತಂತೆ ೩೭೧(ಜೆ) ಅನುಷ್ಠಾನ ಸಮಿತಿ ಗಂಗಾವತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ನಮ್ಮ ಭಾಗದ ಯುವ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬAಧಿಸಿದ ಪ್ರಗತಿಗೆ, ನೌಕರರ ಮುಂಬಡ್ತಿ ಸೇರಿದಂತೆ ಸಮಗ್ರ ಅಭಿವೃದ್ಧಿಯನ್ನು ಸಹಿಸದ ಹಿತಾಸಕ್ತಿಗಳು ಹಸಿರು ಪ್ರತಿಷ್ಠಾನದಂತಹ ಸಂಘಟನೆಗಳ ಮೂಲಕ ಸದಾ ಅಡ್ಡಿಯನ್ನುಂಟು ಮಾಡುತ್ತಿದ್ದು, ಈಗ ೩೭೧(ಜೆ) ಮೀಸಲಾತಿಯನ್ನೇ ರದ್ದುಗೊಳಿಸಬೇಕೆಂಬ ಕೂಗು ಹಾಕುತ್ತಿರುವುದು ಖಂಡನೀಯ. ಈ ಕುರಿತಂತೆ ಜನಜಾಗೃತಿ, ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದ್ದು, ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬರೂ ಪ್ರತಿಭಟಿಸಬೇಕಿದೆ. ಈಗಾಗಲೇ ಬೀದರ್, ಕಲಬುರ್ಗಿ, ರಾಯಚೂರು, ಕಾರಟಗಿಯಲ್ಲಿ ಬಂದ್/ಪ್ರತಿಭಟನೆ ನಡೆಸಿದ್ದು, ಈ ನಿಟ್ಟಿನಲ್ಲಿ ನಮ್ಮ ಸಂವಿಧಾನಬದ್ಧ ಹಕ್ಕನ್ನು ಸ್ಥಾಪಿಸಿಕೊಳ್ಳಲು ಗಂಗಾವತಿ ನಗರದಲ್ಲಿ ಮುಂದಿನ ಕಾರ್ಯಾಚರಣೆಗಾಗಿ ಈ ಪೂರ್ವಭಾವಿ ಸಭೆಗೆ ನಗರದ ಪ್ರತಿಯೊಂದು ಸಂಘ-ಸAಸ್ಥೆ ಧರ್ಮ/ಜಾತಿಯ ಮುಖಂಡರುಗಳು ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಯುವಜನತೆ ಹಾಗೂ ಮಹಿಳಾ ಸಂಘಗಳ ಪ್ರಮುಖರು ಹಾಜರಾಗಬೇಕೆಂದು ಸಮಿತಿಯ ಮುಖಾಂತರ ಕೋರಲಾಗಿದೆ.
ಕಲ್ಯಾಣ ಕರ್ನಾಟಕ ೩೭೧(ಜೆ) ಸಮಿತಿಯ ಸಂಚಾಲಕರಾದ ಈ ಧನರಾಜ್, ಸಮಿತಿಯ ಹಿರಿಯರಾದ ಚನ್ನಬಸಯ್ಯಸ್ವಾಮಿ, ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ್, ಪಠ್ಯಪುಸ್ತಕ ಸಮಿತಿ ಸದಸ್ಯರಾದ ಅಜಮೀರ್ ನಂದಾಪುರ, ಲೇಖಕಿ ಡಾ. ಮುಮ್ತಾಜ್ ಬೇಗಂ, ಪವನಕುಮಾರ ಗುಂಡೂರು, ಎ.ಕೆ ಮಹೇಶಕುಮಾರ, ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಪಂಪಣ್ಣ ನಾಯಕ, ಬಳ್ಳಾರಿ ರಾಮಣ್ಣ, ರಾಜೇಶ ಅಂಗಡಿ, ಅರ್ಜುನ ನಾಯಕ, ವಿರುಪಾಕ್ಷಗೌಡ ಹಾಗೂ ಅಲೆಮಾರಿ ಬುಡ್ಗ ಜಂಗಮ ಸಮಾಜದ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಈ ಸಭೆಗೆ ಹಾಜರಾಗುವ ಜೊತೆಗೆ ಇತರರಿಗೆ ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಹಾಗೆ ಮಾಡಬೇಕೆಂದು ತಿಳಿಸಲಾಗಿದೆ.

About Mallikarjun

Check Also

ಕಂದಾಯ ದಿನಾಚರಣೆ ಕಾರ್ಯಕ್ರಮ

Revenue Day Program ಕೊಟ್ಟೂರು:. ತಾಲೂಕು ಕಛೇರಿ, ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ …

Leave a Reply

Your email address will not be published. Required fields are marked *