ಸ್ವಾತಂತ್ರ್ಯ ದಿನದಂದು SSLC ಸಾಧಕರಿಗೆ ಕಲಿಕೇರಿ ಅಪ್ಪು ಬಳಗದಿಂದ ಸನ್ಮಾನ

H.Mallikarjun
H.Mallikarjun - Kalyanasiri
1 Min Read

Honoring SSLC achievers on Independence Day by the Kalikeri Appu group

ಸ್ವಾತಂತ್ರ್ಯ ದಿನದಂದು SSLC ಸಾಧಕರಿಗೆ ಕಲಿಕೇರಿ ಅಪ್ಪು ಬಳಗದಿಂದ ಸನ್ಮಾನ

ಕನಕಗಿರಿ : ತಾಲೂಕು ಕಲಿಕೇರಿ
ಆಗಸ್ಟ್ 15, 2026 ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಲಿಕೇರಿ ಸರ್ಕಾರಿ ಹಿರಿಯ ಪ್ರೌಢ (RMAS) ಪ್ರಾಥಮಿಕ ಶಾಲಾ ಆವರಣದಲ್ಲಿ ಧ್ವಜಾರೋಹಣದ ನಂತರ *ಕಲಿಕೇರಿ ಅಪ್ಪು ಬಳಗ*ದ ವತಿಯಿಂದ SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು

2026-27ನೇ ಸಾಲಿನ SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದ 3 ವಿದ್ಯಾರ್ಥಿಗಳನ್ನು* ಶಾಲು ಹೊದಿಸಿ, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಪ್ಪು ಬಳಗದ ಪದಾಧಿಕಾರಿಗಳು, “ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಅವರ ಈ ಯಶಸ್ಸು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಮುಂದಿನ ವಿದ್ಯಾಭ್ಯಾಸಕ್ಕೂ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ” ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕರದ, ಬಸಪ್ಪ ಕಾರಾಬಿದ್ದಿನಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ , SDMC ಅಧ್ಯಕ್ಷರಾದ ನಾಗೇಶ್ ಸದಸ್ಯರಾದ ಬಸವರಾಜ್ ಗದ್ದಿ , ಮಾಂತಪ್ಪ, ತಿಮ್ಮಣ್ಣ, ಮತ್ತುಅಪ್ಪು ಬಳಗದ ಅಧ್ಯಕ್ಷರಾದ, ಗಂಗಪ್ಪ, ಸದಸ್ಯರು, ಪೋಷಕರು, ಶಿಕ್ಷಕರು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

ವರದಿ :ಕನಕಗಿರಿ, ಶರಣು ರೇಖಾ

Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article