ಜಾಹೀರಾತು

ಜಾಹೀರಾತು

World Disabled Persons Day Celebration: Call for Nominations for State Award Eligible Individuals
ವಿಶ್ವ ವಿಕಲಚೇತನರ ದಿನಾಚರಣೆ: ರಾಜ್ಯ ಪ್ರಶಸ್ತಿಗೆ ಅರ್ಹರಿಂದ ಪ್ರಸ್ತಾವನೆ ಆಹ್ವಾನ
ಕೊಪ್ಪಳ, ನವೆಂಬರ್ 03, (ಕರ್ನಾಟಕ ವಾರ್ತೆ): ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಡಿಸೆಂಬರ್ 3 ರಂದು “ವಿಶ್ವ ವಿಕಲಚೇತನರ ದಿನಾಚರಣೆ” ಯನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈಯಕ್ತಿಕ, ಸಂಸ್ಥೆ ಹಾಗೂ ವಿಶೇಷ ಶಾಲೆಗಳ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಹರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಇಲಾಖೆಯಿಂದ ನಿಗದಿತ ಅರ್ಜಿ ನಮೂನೆ ಪಡೆದು, ಈ ಹಿಂದೆ ರಾಜ್ಯ ಪ್ರಶಸ್ತಿ ಪಡೆದಿಲ್ಲ ಎಂಬ ಬಗ್ಗೆ `ಸ್ವಯಂ ದೃಢೀಕರಣ ಪ್ರಮಾಣ ಪತ್ರ’ ಮತ್ತು ಯಾವುದೇ ಪೊಲೀಸ್ ಪ್ರಕರಣಗಳಿಲ್ಲದ ಬಗ್ಗೆ `ಪೊಲೀಸ್ ಇಲಾಖೆಯ ದೃಢೀಕರಣ’ ದೊಂದಿಗೆ ನವೆಂಬರ್ 9 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಸರ್ಕಾರಿ ನೌಕರರ ಭವನ (ಐ.ಬಿ ಎದುರುಗಡೆ, ಗೋವಿಂದರಾಯ ದೇವಸ್ಥಾನದ ಹಿಂಭಾಗ), ಕಿನ್ನಾಳ ರಸ್ತೆ, ಕೊಪ್ಪಳ ಇಲ್ಲಿಗೆ ದ್ವಿ-ಪ್ರತಿಗಳಲ್ಲಿ ಅರ್ಜಿ ಸಲ್ಲಿಸಬೇಕು.
2025-26ನೇ ಸಾಲಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರ ಪ್ರಸ್ತಾವನೆಗಳನ್ನು ಪ್ರಸಕ್ತ ಸಾಲಿಗೆ ಪರಿಗಣಿಸುವುದರಿಂದ, ಅವರು 2026-27ನೇ ಸಾಲಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಎಂ.ಆರ್.ಡಬ್ಲ್ಯೂ, ಹಾಗೂ ಗ್ರಾಮ ಪಂಚಾಯತಿಗಳ ವಿ.ಆರ್.ಡಬ್ಲ್ಯೂ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views:
0
ಜಾಹೀರಾತು



