
Two bikers die in accident at Madappana Hill bend.

ಮಾದಪ್ಪನ ಬೆಟ್ಟದ ತಿರುವಿನಲ್ಲಿ ಅಪಘಾತ ದ್ವಿಚಕ್ರ ಸವಾರರು ಸಾವು.

ವರದಿ: ಬಂಗಾರಪ್ಪ .ಸಿ.
ಹನೂರು : ಶ್ರೀ ಮಲೆ ಮಾದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ 7 ತಿರುವಿನಲ್ಲಿ ತಮಿಳು ಬಾಷೆಯ ನಂಬರ್ ಪ್ಲೇಟ್ ನ ದ್ವಿಚಕ್ರ ವಾಹನದಲ್ಲಿ ಬೆಟ್ಟದಿಂದ ತಮ್ಮ ಊರಿಗೆ ತೆರಳುತ್ತಿದ್ದಾಗ ಇಬ್ಬರು ಸವಾರರು ಅಪಘಾತವಾಗಿ ಮೃತಪಟ್ಟಿದ್ದಾರೆ.
ತಮಿಳುನಾಡಿನಿಂದ ಮಾದೇಶ್ವರ ಬೆಟ್ಟಕ್ಕೆ ಲಗೇಜ್ ಎತ್ತಿಕೊಂಡು ಬರುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನದ ಇಬ್ಬರು ಸವಾರರಲ್ಲಿ ಒಬ್ಬ ಅಲ್ಲೇ ಅಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ಜೀವ ಉಳಿದಿದೆ. ಬೆಟ್ಟದಲ್ಲಿ ಆಂಬುಲೆನ್ಸ್ ಇಲ್ಲದ ಕಾರಣದಿಂದ ಆಂಬುಲೆನ್ಸ್ ತಡವಾಗಿ ಬಂದಿದೆ. ಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣವಾಗಿ ಆ ವ್ಯಕ್ತಿಯನ್ನು ತಮಿಳುನಾಡು ರಾಜ್ಯದ ಆಸ್ಪತ್ರೆಗೆ ರವಾನೆ ಮಾಡಲು ಅಲ್ಲಿನ ಸರ್ಕಾರ ಅಂಬುಲೆನ್ಸ್ ಮತ್ತು ಪ್ರಾಧಿಕಾರದ ಆಂಬುಲೆನ್ಸ್ ಆ ವ್ಯಕ್ತಿಯನ್ನು ರವಾನೆ ಮಾಡಲು ಸಾದ್ಯವಿಲ್ಲವೆಂದಾಗ . ಅಲ್ಲಿದ್ದ ಇನ್ನೊಂದು ಖಾಸಗಿ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
