Jirala Gram Panchayat Lacks Right to Information Signboard – Official Acts After Phone Call

ಮಾಹಿತಿ ಹಕ್ಕು ನಾಮಫಲಕವೇ ಇಲ್ಲದ ಜಿರಾಳ ಗ್ರಾಮ ಪಂಚಾಯತಿ – ದೂರವಾಣಿ ಕರೆಗೆ ಎಚ್ಚೆತ್ತ ಅಧಿಕಾರಿ
ಜಾಹೀರಾತು

ವರದಿ: ಶರಣಯ್ಯ ಹಿರೇಮಠ
ಕನಕಗಿರಿ : ತಾಲೂಕು ಜಿರಾಳ:ಸರ್ಕಾರದ ಪ್ರತಿಯೊಂದು ಕಚೇರಿಯಲ್ಲಿ ಕಡ್ಡಾಯವಾಗಿ ಇರಬೇಕಾದ ಮಾಹಿತಿ ಹಕ್ಕು ಕಾಯ್ದೆ (RTI) ನಾಮಫಲಕವೇ ಜಿರಾಳ ಗ್ರಾಮ ಪಂಚಾಯತಿಯಲ್ಲಿ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ದೂರವಾಣಿ ಮೂಲಕ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕನಕಪ್ಪ ಅವರನ್ನು ಸಂಪರ್ಕಿಸಿದಾಗ, “ಗಮನಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ RTI ನಾಮಫಲಕವನ್ನು ಅಳವಡಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಯಾರು? ಮೇಲ್ಮನವಿ ಅಧಿಕಾರಿ ಯಾರು? ಅರ್ಜಿ ಶುಲ್ಕ ಎಷ್ಟು? ಎಂಬ ಮಾಹಿತಿ ಇರುವ ನಾಮಫಲಕ ಕಡ್ಡಾಯ. ಆದರೆ ಜಿರಾಳ ಪಂಚಾಯತಿಯಲ್ಲಿ ಇದುವರೆಗೂ ಅಳವಡಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ಶರಣಯ್ಯ ಹಿರೇಮಠ
Total Views:
0
ಜಾಹೀರಾತು

