Breaking News

ರಸ್ತೆಗಳನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ : ಮಹಿಳಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ,,

Demand Repair of Roads: Massive Protest by Women’s Union

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ತಾಲೂಕಿನ ಕವಲೂರು ಗ್ರಾಮದಿಂದ ವಿವಿಧ ಮಾರ್ಗಗಳಿಗೆ ಸಂಪರ್ಕಿಸುವ ರಸ್ತೆಗಳು ದುರಸ್ಥಿ ಕಾಣದೇ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕವಲೂರು ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಶ್ರೀ ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರು ತಿಳಿಸಿದರು.

ಕವಲೂರು ಗ್ರಾಮವು ಕೊಪ್ಪಳ ತಾಲೂಕಿನ ಕೊನೆಯ ದೊಡ್ಡ ಗ್ರಾಮವಾಗಿದ್ದು ಕೊಪ್ಪಳದಿಂದ ಕೇವಲ 15 ಕಿ.ಮೀ ಅಂತರದಲ್ಲಿದೆ.

ಗ್ರಾಮದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹಾಗೂ ರೋಗಿಗಳು
ಗರ್ಭಿಣಿಯರು, ವಯಸ್ಕರು ಪ್ರತಿ ನಿತ್ಯ ಕೊಪ್ಪಳ, ಗದಗ, ಮುಂಡರಗಿ ಮತ್ತು ಆಳವಂಡಿ ಹೋಬಳಿ ಗ್ರಾಮಕ್ಕೆ ಪ್ರಯಾಣಿಸುವದು ಸಾಮಾನ್ಯವಾಗಿದೆ.

ಈ ಗ್ರಾಮದಿಂದ ಪ್ರತಿ ನಿತ್ಯ ಸುಮಾರು 250 ವಿದ್ಯಾರ್ಥಿಗಳು ಪಕ್ಕದ ವಿವಿಧ ಗ್ರಾಮಗಳ ಶಾಲಾ-ಕಾಲೇಜಿಗೆ ವ್ಯಾಸಾಂಗ ಮಾಡಲು ತೆರಳುತ್ತಿದ್ದು ಸಮಯಕ್ಕನುಗುಣವಾಗಿ ವಾಹನಗಳು ಸಂಚರಿಸುವುದಿಲ್ಲಾ.

ಇಂತಹ ದುರಸ್ಥಿ ಕಾಣದ ಹದಗೆಟ್ಟ ರಸ್ತೆಗಳಿರುವದರಿಂದ ವಾಹನ ಮಾಲಕರು ಈ ರಸ್ತೆಗಳಿಗೆ ವಾಹನ ಬಿಡದೇ ಇರುವದರಿಂದ ಗ್ರಾಮಸ್ಥರು ಪ್ರತಿ ನಿತ್ಯ ಗೋಳಾಡುವಂತಾಗಿದೆ. ಇಲ್ಲಿ ಆಸ್ಪತ್ರೆ ಇದ್ದರೂ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ನಗರಗಳಿಗೆ ಹೋಗುವದು ಅನಿವಾರ್ಯವಾಗಿದೆ.

ಸುತ್ತ ಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆಗಳು ಹಾಳಾಗಿದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗಿ ಆಗಾಗ ಬಸ್ ಸಂಚಾರವು ಸ್ಥಗಿತಗೊಳಿಸುತ್ತಿರುವದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ರಸ್ತೆಗಳಲ್ಲಿ ದೊಡ್ಡ ದೊಡ್ಡ ಬೊಂಗಾಗಳು ಬಿದ್ದಿದ್ದರಿಂದ ದ್ವಿ ಚಕ್ರ ವಾಹನ ಸವಾರರು, ಟ್ರಾಕ್ಟರ ಸವಾರರು ವಾಹನದಿಂದ ಬಿದ್ದು ಹಲವಾರು ಅಪಘಾತಗಳು ಸಂಭವಿಸಿದರು ಜನ ಪ್ರತಿನಿಧಿಗಳು ಅಧಿಕಾರಿಗಳು ಜಾಣ ಕುರುಡು ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಸಂಬಂಧಿಸಿದ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಮತ್ತು ವಿದ್ಯಾರ್ಥಿಗಳು ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿ ಪತ್ರಿಕೆಗಳಲ್ಲಿ ವರದಿ ಮೂಲಕ ಎಚ್ಚರಿಸಿದರು ಪ್ರಯೋಜನವಾಗಿಲ್ಲಾ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಕೂಡಲೇ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸದಿದ್ದರೇ ದಿ. 01.10, 24 ರಂದು 1500 ಸದಸ್ಯರನ್ನೊಳಗೊಂಡು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊಸ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮಾಡಿ ಹೊಸ ಬಸ್ ನಿಲ್ದಾಣದಲ್ಲಿ ಸಭೆ ಸೇರಿ ಕವಲೂರು ಬಂದ್ ಮಾಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವು ಎಂದು ಎಚ್ಚರಿಸಿದ್ದಾರೆ.

ಬೇಡಿಕೆಗಳು : ಕವಲೂರು ಗ್ರಾಮದಿಂದ ಮುಂಡರಗಿ ರಸ್ತೆ, ಅಳವಂಡಿ ರಸ್ತೆ, ಬನ್ನಿಕೊಪ್ಪ ರಸ್ತೆ, ಹಂದ್ರಾಳ ರಸ್ತೆ, ಗುಡಿಗೇರಿ ರಸ್ತೆಗಳನ್ನು ಸರಿ ಪಡಿಸಿ ವಾಹನ ಸಂಚಾರಕ್ಕೆ ಸುಗಮ ಮಾರ್ಗಗಳನ್ನು ನೀಡಲು ಸಂಬಂಧಿಸಿ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.