Birth anniversary of revolutionary fighter Bhagat Singh,
ಗಂಗಾವತಿ,:ನಗರದ ಕಂಪ್ಲಿ ರಸ್ತೆಯಲ್ಲಿರುವ ಅಮರ್ ಭಗತ್‌ಸಿಂಗ್ ನಗರದಲ್ಲಿ ಕ್ರಾಂತಿಕಾರಿ ಹೋರಾಟಗಾರರಾದ ಭಗತ್‌ಸಿಂಗ್ ಅವರು ಜನ್ಮ ದಿನಾಚರಣೆಯನ್ನು ಶನಿವಾರ ಆಚರಣೆ ಮಾಡಲಾಯಿತು.
ನಗರಸಭೆ ಸದಸ್ಯರಾದ ನೀಲಕಂಠ ಕಟ್ಟಿಮನಿ ಮಾತನಾಡಿ, ಸ್ವಾತಂತ್ರö್ಯ ಸಂಗ್ರಾಮದ ಹೋರಾಟದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದ ಮಹಾನ್ ಕ್ರಾಂತಿಕಾರಿ ಹೋರಾಟಗಾರರು ಭಗತ್‌ಸಿಂಗ್ ಅವರು. ಚಿಕ್ಕ ವಯಸ್ಸಿನಲ್ಲಿಯೇ ಜೀವÀ ಭಯವನ್ನು ತೊರೆದು ಬ್ರಿಟಿಷರ ವಿರುದ್ಧ ಸಮರ ಸಾರಿದ ಭಗತ್‌ಸಿಂಗ್ ಅವರು ಸದ್ಯ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ದೇಶಕ್ಕಾಗಿ ಪ್ರಾಣವನ್ನು ನೀಡುವ ಮೂಲಕ ಭಾರತ ತಾಯಿಯ ಮಗನಾಗಿ ಭಗತ್‌ಸಿಂಗ್ ಅವರು ಅಜರಾಮರವಾಗಿದ್ದಾರೆ. ದೇಶಾಭಿಮಾನವನ್ನು ಹೊಂದಿದ್ದ ಭಗತ್‌ಸಿಂಗ್ ಅವರ ಆದರ್ಶವನ್ನು, ಸಿದ್ದಾಂತವನ್ನು ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳಬೇಕಾಗಿದೆ. ದೇಶಕ್ಕಾಗಿ ನಾವುಗಳು ತ್ಯಾಗ ಮಾಡುವ ಮನೋಭಾವವನ್ನು ಯುವಕ ಹೊಂದಿರಬೇಕು. ಯುವಕರು ಮನಸ್ಸು ಮಾಡಿದರೆ ಏನಾದರೂ ಸಹ ಸಾಧನೆಯನ್ನು ಮಾಡಬಹುದು. ಅದಕ್ಕೆ ಉದಾಹರಣೆ ಎಂದರೆ ಭಗತ್‌ಸಿಂಗ್ ಅವರು ಆಗಿದ್ದಾರೆ ಎಂದು ಹೇಳಿದರು. ನಂತರ ಭಗತ್‌ಸಿಂಗ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಜನ್ಮ ದಿನವನ್ನು ಆಚರಣೆ ಮಾಡಲಾಯಿತು.
ಸ್ಥಳೀಯರಾದ ಶಿವಣ್ಣ, ಮಾರುತಿ, ವೀರೇಶ್, ತ್ಯಾವರಪ್ಪ, ಶರಣಪ್ಪ ಹಾಗೂ ಇತರರಿದ್ದರು.
ಗಂಗಾವತಿಯ ಅಮರ್ ಭಗತ್‌ಸಿಂಗ್ ನಗರದಲ್ಲಿ ಭಗತ್‌ಸಿಂಗ್ ಅವರು ಜನ್ಮ ದಿನಾಚರಣೆಯನ್ನು ಶನಿವಾರ ಮಾಡಲಾಯಿತು.