ಬಲ್ಡೋಟ ವಿರೋಧಿ ಹೋರಾಟಕ್ಕೆ 184 ದಿನ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
184 days of anti-baldota struggle

ಬಲ್ಡೋಟ ವಿರೋಧಿ ಹೋರಾಟಕ್ಕೆ 184 ದಿನ

ಜಾಹೀರಾತು

ಅಭಿವೃದ್ಧಿ ಎಂದರೆ, ಕೈಗಾರಿಕೆಯದಾ ಅಥವಾ ಕೊಪ್ಪಳ ಜನರದ್ದಾ: ಶಿವಸುಂದರ್ ಪ್ರಶ್ನೆ

ಕೊಪ್ಪಳ: ಅಭಿವೃದ್ಧಿ ಕಲ್ಪನೆಯೇ ತೀರಾ ವಿಚಿತ್ರವಾಗಿದೆ, ಅಭಿವೃದ್ಧಿ ವಿಷಯ ಮರುವ್ಯಾಖ್ಯಾನ ಆಗಬೇಕಿದೆ, ಹವಾಮಾನ ವೈಪರಿತ್ಯಗಳು ಕಂಡುಕೇಳರಿಯದಂತೆ ಆಗುತ್ತಿವೆ ಎಂದು ನಾಡಿನ ಹಿರಿಯ ಚಿಂತಕ ಶಿವಸುಂದರ್ ವಿಷಾಧಿಸಿದರು.
ಅವರು ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಕೊಪ್ಪಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ 184ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಬಳ್ಳಾರಿ, ವಿಜಯನಗರ ಜಿಲ್ಲೆಯ ಉಕ್ಕಿನ ಅದಿರಿನಿಂದ, ಕೊಪ್ಪಳ ಕಾರ್ಖಾನೆಗೆ ವಶಪಡಿಸಿಕೊಂಡ ಭೂಮಿಯಿಂದ ಯಾರು ಶ್ರೀಮಂತರಾಗಿದ್ದಾರೆ. ಸರ್ಕಾರಗಳು ಏಕೈಕ ಕಾರ್ಪೋರೇಟರಗಳನ್ನು ಶ್ರೀಮಂತಗೊಳಿಸಿವೆ, ಇಲ್ಲಿನ ಜನರು ಹೋರಾಡಿ ಆರೋಗ್ಯ, ಜೀವ ಉಳಿಸಿಕೊಳ್ಳುವಾಗ ರಾಜ್ಯದ ಪ್ರಜ್ಞಾವಂತರು ನಿಮ್ಮ ಬೆಂಬಲಕ್ಕೆ ಇರುತ್ತಾರೆ. ಈ ಹೋರಾಟ ಗೆಲ್ಲಬೇಕು, ಇದು ಕೇವಲ ಕೊಪ್ಪಳದ್ದಲ್ಲ ಇಡೀ ಭಾರತದ ಕಾರ್ಪೊರೇಟ್ ವಿರುದ್ಧದ ಸಮರ, ಇದಕ್ಕಾಗಿ ಇಡೀ ದೇಶದ ಪ್ರಜ್ಞಾವಂತ ಜನರನ್ನು ಕರೆದುಕೊಂಡು ಬರುತ್ತೇವೆ, ಇದು ದೇಶದ ಸಮಸ್ಯೆ, 184 ದಿನ ನಿರಂತರವಾಗಿ ಹೋರಾಡುವ ಛಾತಿ ಬೆಳೆಸಿಕೊಂಡಿರುವ ಕೊಪ್ಪಳ ಜನ ಅಭಿನಂದನಾರ್ಹರು ಎಂದರು.
ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ. ರತ್ನಾಕರ, ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ಶುಕರಾಜ ತಾಳಕೇರಿ, ಎಂ.ಡಿ. ಸಿರಾಜ್ ಸಿದ್ದಾಪುರ, ಮಹಾಂತೇಶ ಕೊತಬಾಳ, ಮದ್ದಾನಯ್ಯ ಹಿರೇಮಠ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ, ಮಹಿಳಾ ನಾಯಕಿಯರಾದ ಸಾವಿತ್ರಿ ಮುಜುಮದಾರ, ಸಲೀಮಾ ಜಾನ್, ಕೆ.ಎಫ್. ಮುದ್ದಾಬಳ್ಳಿ, ಹನುಮನಗೌಡ ಫೋ ಪಾಟೀಲ್, ಯಂಕಪ್ಪ ಬಿಸರಹಳ್ಳಿ ಕಾಸನಕಂಡಿ, ಹನುಮಪ್ಪ ಚಿಂಚಲಿ, ಅಮರೇಶ ಕರಡಿ, ಈಶ್ವರಪ್ಪ ಆರಹಾಳ, ಫಕೀರಪ್ಪ ಹಿರೇನಂದಿಹಾಳ, ಕರಿಯಪ್ಪ ಹಿರೇನಂದಿಹಾಳ, ಬಸವರಾಜ ಬನ್ನಿಕಟ್ಟಿ, ಶರಣಪ್ಪ ನಂದಾಪುರ, ಮಹಾದೇವಪ್ಪ ಮಾವಿನಮಡು, ದುರುಗೇಶ ಬರಗೂರು, ರಾಜಶೇಖರ ಏಳುಬಾವಿ, ಶಿವಾನಂದಯ್ಯ ಬೀಳಗಿಮಠ, ಶಂಭುಲಿಂಗಪ್ಪ ಹರಗೇರಿ, ವಿಜಯಹಾಂತೇಶ ಹಟ್ಟಿ, ಮಖಬೂಲ್ ರಾಯಚೂರು, ವೈ. ಸತ್ಯನಾರಾಯಣ, ಬೆಟ್ಟಪ್ಪ ಯತ್ನಟ್ಟಿ, ಬಸವಂತಪ್ಪ ಚೌಹಾನ್ ಇತರರು ಇದ್ದರು.

Total Views: 0
Share This Article